terrorist

ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನಿ ಉಗ್ರ 'ಅಮೃತ್ ಪಾಲ್ ಸಿಂಗ್': ಪಂಜಾಬ್ ನಲ್ಲಿ ಬಂಧನ
ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ!
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಕೊನೆಗೂ ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ.

ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತನ ಹತ್ಯೆ ಮಾಡಿದ್ದ ಉಗ್ರನ ಎನ್‌ಕೌಂಟರ್
ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಾಧದಲ್ಲಿ ಭಾಗಿಯಾಗಿದ್ದ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲ: ಓರ್ವ ಉಗ್ರನ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ಗುರುವಾರ ನಸುಕಿನ ಜಾವ ವಿಫಲಗೊಳಿಸಿದ್ದು ಗುಂಡಿನ ದಾಳಿಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ.

ದೆಹಲಿ ಉಗ್ರ ದಾಳಿ ಶಂಕಿತರು ಹಿಂದೂವನ್ನು ಕೊಂದ ವಿಡಿಯೋ ಪಾಕ್ ಏಜೆಂಟ್ ಗೆ ಕಳುಹಿಸಿ, ಹಣ ಪಡೆದಿದ್ದಾರೆ: ಮೂಲಗಳು
ಕೈಯಲ್ಲಿ ತ್ರಿಶೂಲದ ಹಚ್ಚೆಯಿದ್ದ ವ್ಯಕ್ತಿಯೋರ್ವನನ್ನು ಕೊಂದ ಭಯೋತ್ಪಾದಕರು ಅದನ್ನು ವಿಡಿಯೋ ಮಾಡಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿರುವ ಸೊಹೈಲ್‌ಗೆ ಕಳುಹಿಸಿ ಆತನಿಂದ ಹಣ ಪಡೆದಿರುವ ಮಾಹಿತಿ ಬಹಿರಂಗಗೊಂಡಿದೆ.

ಶಿವಮೊಗ್ಗದಲ್ಲಿ ಇಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ.

ಉಗ್ರನನ್ನು ಅರೆಸ್ಟ್ ಮಾಡಿದ ಸ್ಥಳ ತಪ್ಪು ಬರೆದ ಪತ್ರಕರ್ತನಿಗೆ ಜೈಲು, ಸಂಪಾದಕನ ವಿರುದ್ಧ ಪ್ರಕರಣ ದಾಖಲು
ಮರ್ಡೋನ್ ಸಾಹಿಬ್ ಗ್ರಾಮದಲ್ಲಿ ಓರ್ವ ಉಗ್ರ ಟಿಫಿನ್ ಬಾಂಬ್ ಸಂಚು ರೂಪಿಸಿದ್ದ. ಆದರೆ ಪತ್ರಿಕೆಯಲ್ಲಿ ಐಒಸಿ ಡಿಪೋ ಎಂಬಲ್ಲಿಂದ ಉಗ್ರನನ್ನು ಬಂಧಿಸಲಾಯಿತು ಎಂದು ಬರೆಯಲಾಗಿತ್ತು.

ಶೋಪಿಯಾನ್‌ನಲ್ಲಿ ಬಂಧಿತ ಉಗ್ರನ ಸಾವಿನ ತನಿಖೆಗೆ ಮೆಹಬೂಬಾ ಮುಫ್ತಿ ಆಗ್ರಹ!
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ವೇಳೆ ಬಂಧಿತ 'ಹೈಬ್ರಿಡ್' ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಹತ್ಯೆಗೈದ ಬಗ್ಗೆ ತನಿಖೆ ನಡೆಸುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣ: 'ಜಂಗಲ್ ಸರ್ವೈವಲ್' ಶಿಬಿರದಲ್ಲಿ ತರಬೇತಿ ಪಡೆದಿದ್ದ ಶಾರೀಕ್ ಹಾಗೂ ಆತನ ಸಹಚರರು!
ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರ ಮಾಝ್ ಮುನೀರ್ ಅಹ್ಮದ್ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನಮ್ಮೆಲೆಯ ವೋಟೆಕಾಡ್ ನೇಚರ್ ಕ್ಯಾಂಪ್ ಹೋಮ್‌ಸ್ಟೇನಲ್ಲಿ ತಂಗಿ ತರಬೇತಿ ಪಡೆದಿದ್ದ ಆತಂಕಕಾರಿ ಸಂಗತಿ ಇದೀಗ ಬಯಲಾಗಿದೆ.

