terrorist

ಕೆನಡಾದ ಲಖ್ಬೀರ್ ಸಿಂಗ್ ಲಾಂಡಾ ‘ಭಯೋತ್ಪಾದಕ’: ಭಾರತ ಘೋಷಣೆ
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಖಲಿಸ್ತಾನಿ ಲಖ್ಬೀರ್ ಸಿಂಗ್ ಲಾಂಡಾನನ್ನು ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

ಕಾಶ್ಮೀರಿ ನಾಗರೀಕರ ಸಾವು: 'ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ'; ಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿವಿಮಾತು
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ನಾಗರಿಕರ ಅನುಮಾನಾಸ್ಪದ ಸಾವುಗಳ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಗೆ ದೇಶವನ್ನು ಮಾತ್ರವಲ್ಲದೆ ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು ಎಂದು ಹೇಳಿದ್ದಾರೆ. ಇನ್ನಾದರೂ ಜಾಗೃತರಾಗಬೇಕು ಎಂದು ಹೇಳಿದ್ದಾರೆ.

ಎಲ್‌ಒಸಿಯಾದ್ಯಂತ ಲಾಂಚ್‌ಪ್ಯಾಡ್‌ಗಳಲ್ಲಿ 250ಕ್ಕೂ ಹೆಚ್ಚು ಭಯೋತ್ಪಾದಕರಿದ್ದಾರೆ: ಬಿಎಸ್‌ಎಫ್
ಮತ್ತೊಮ್ಮೆ ಪಾಕಿಸ್ತಾನದಿಂದ ನುಸುಳುಕೋರರನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ನುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ.

8 ಉಗ್ರರ ಹತ್ಯೆಗೈದ ಪಾಕಿಸ್ತಾನ ಸೇನೆ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ದಕ್ಷಿಣ ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 8 ಉಗ್ರರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನದ ಸೇನೆಯ ಮಾಧ್ಯಮ ವಿಭಾಗ ಸೋಮವಾರ ಮಾಹಿತಿ ನೀಡಿದೆ.

ರಜೌರಿ ಎನ್ಕೌಂಟರ್: ಸೇನಾಪಡೆ ಗುಂಡಿಗೆ ಪ್ರಮುಖ ಭಯೋತ್ಪಾದಕ ಖಾರಿ ಸೇರಿ ಇಬ್ಬರು ಉಗ್ರರು ಹತ
ಜಮ್ಮು ಮತ್ತು ಕಾಶ್ಮೀರ ರಜೌರಿ ಜಿಲ್ಲೆಯ ಧರ್ಮಸಾಲ್‌ನ ಬಾಜಿಮಾಲ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಎನ್ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಖಾರಿ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ.

ರಜೌರಿಯಲ್ಲಿ ಉಗ್ರರ ವಿರುದ್ಧ ಎನ್ಕೌಂಟರ್: ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮ, ಮುಂದುವರೆದ ಕಾರ್ಯಾಚರಣೆ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇಬ್ಬರು ಉಗ್ರರು ಅಡಗಿರುವ ಶಂಕೆ: ಜಮ್ಮುವಿನಲ್ಲಿ ಎನ್ಕೌಂಟರ್ ಆರಂಭ
ಜಮ್ಮು ಮತ್ತು ಕಾಶ್ಮೀರದ ರೌಜರಿಯಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ಆರಂಭಿಸಿದ್ದಾರೆ.

ಶೋಪಿಯಾನ್'ನಲ್ಲಿ ಎನ್ಕೌಂಟರ್: ಓರ್ವ ಉಗ್ರನ ಸದೆಬಡಿದ ಸೇನಾಪಡೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನ ಕಥೋಹಾಲನ್ ಪ್ರದೇಶದಲ್ಲಿ ಕಳೆದ ರಾತ್ರಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ನೊಂದಿಗೆ (ಟಿಆರ್ಎಫ್) ಸಂಬಂಧ ಹೊಂದಿದ್ದ ಓರ್ವ ಉಗ್ರನನ್ನು ಹತ್ಯೆ ಮಾಡಿದೆ.

ಭದ್ರತಾ ಕಾರಣ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತ
ಭದ್ರತಾ ಕಾರಣಗಳಿಗಾಗಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

