Telangana

ಯುವಕರನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ಗೆ ಭಯ; 75-80 ವರ್ಷ ಮೇಲ್ಪಟ್ಟವರನ್ನು ನೇಮಿಸುತ್ತದೆ: ಪ್ರಧಾನಿ ಮೋದಿ
ಯುವ ನಾಯಕರನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ ಹೆದರುತ್ತಿದೆ ಎಂದು ಮಂಗಳವಾರ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, ಪಕ್ಷವು 75-80 ವರ್ಷ ಮೇಲ್ಪಟ್ಟವರನ್ನು ಹುದ್ದೆಗಳಿಗೆ ನೇಮಕ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತೆಲಂಗಾಣದಲ್ಲಿ 56,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಸುಮಾರು 56,000 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

'ಗೃಹಜ್ಯೋತಿ' ಯಶಸ್ವಿ ಅನುಷ್ಠಾನ: ಕರ್ನಾಟಕ ಮಾದರಿ ಅನುಸರಿಸಲು ತೆಲಂಗಾಣ ಮುಂದು!
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.

ತೆಲಂಗಾಣ: ಗಣರಾಜ್ಯೋತ್ಸವ ಸಮಾರಂಭ ವೇಳೆ ವಿದ್ಯುತ್ ಸ್ಪರ್ಶ, ಇಬ್ಬರು ಯುವಕರ ಸಾವು
ಗಣರಾಜ್ಯೋತ್ಸವ ಸಮಾರಂಭ ವೇಳೆ ಸಂಭವಿಸಿದ ವಿದ್ಯುತ್ ಸ್ಪರ್ಶದಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ತೆಲಂಗಾಣದಲ್ಲಿ 12,400 ಕೋಟಿ ರೂ. ಹೂಡಿಕೆಗೆ ಅದಾನಿ ಸಮೂಹದೊಂದಿಗೆ ಕಾಂಗ್ರೆಸ್ ಸರ್ಕಾರ ಒಪ್ಪಂದ
ರಾಜ್ಯದಲ್ಲಿ 12,400 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗೆ ಸಂಬಂಧಿಸಿದ ನಾಲ್ಕು ಮಹತ್ವದ ಒಪ್ಪಂದಗಳಿಗೆ(ಎಂಒಯು) ಅದಾನಿ ಸಮೂಹ ಮತ್ತು ತೆಲಂಗಾಣ ಸರ್ಕಾರ ಬುಧವಾರ ಸಹಿ ಹಾಕಿವೆ.

ಲೋಕಸಭಾ ಚುನಾವಣೆ: ಕರ್ನಾಟಕ, ತೆಲಂಗಾಣದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಸಾಧ್ಯತೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ.

ಆಸ್ಪತ್ರೆಗೆ ದಾಖಲಾಗಿದ್ದ ತೆಲಂಗಾಣ ಮಾಜಿ ಸಿಎಂ KCR ಆಸ್ಪತ್ರೆಯಿಂದ ಬಿಡುಗಡೆ
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತೆಲಂಗಾಣ ಮಾಜಿ ಸಿಎಂ ಮತ್ತು ಬಿಆರ್ಎಸ್ ಪಕ್ಷದ ರಾಷ್ಟ್ರೀಯ ನಾಯಕ ಕೆ ಚಂದ್ರಶೇಖರ ರಾವ್ ಅವರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಗ್ಯಾರಂಟಿಗಳು ಮತ್ತು ರಾಜ್ಯಗಳ ಪ್ರಗತಿ: ಕರ್ನಾಟಕ, ತೆಲಂಗಾಣದಲ್ಲಿ ನಿಗಾವಣೆ
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೊರೆಯಿಂದಾಗಿ ಎರಡೂ ರಾಜ್ಯಗಳ ಪ್ರಗತಿಯ ದರವನ್ನು ಸೂಕ್ಷ್ಮವಾಗಿ ಗಮನಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳು ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ ಎಂಬುದರ ಮೇಲೆ ನಿಗಾ ವಹಿಸಲಾಗುವುದು

ತೆಲಂಗಾಣ: ಬಿಆರ್ಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕೆಸಿಆರ್ ಆಯ್ಕೆ
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶನಿವಾರ ಬಿಆರ್ಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

