tamilnadu

ತಾಂತ್ರಿಕ ಸಮಸ್ಯೆ ನಿವಾರಣೆ: ಮತ್ತೆ ಆಕ್ಸಿಜನ್ ಉತ್ಪಾದನೆ ಆರಂಭಿಸಿದ ತೂತುಕುಡಿ 'ಸ್ಟೆರ್ಲೈಟ್' ಸಂಸ್ಥೆ
ತಾಂತ್ರಿಕ ಸಮಸ್ಯೆಯಿಂದಾಗಿ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಳಿಸಿದ್ದ ತೂತುಕುಡಿ 'ಸ್ಟೆರ್ಲೈಟ್' ಸಂಸ್ಥೆ ಇದೀಗ ತನ್ನ ವೈದ್ಯಕೀಯ ಆಮ್ಲಜನಕ ಉತ್ಪಾದನೆಯನ್ನು ಪುನಾರಂಭಿಸಿದೆ.

ತೂತುಕುಡಿ ಸ್ಟೆರ್ಲೈಟ್ನಲ್ಲಿ ಆಮ್ಲಜನಕ ಉತ್ಪಾದನೆ ಆರಂಭ: ತಿರುನಲ್ವೇಲಿ ಆಸ್ಪತ್ರೆಗೆ 4.82 ಟನ್ ಆಕ್ಸಿಜನ್ ರವಾನೆ
ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕವನ್ನು ಹೊತ್ತ ಮೊದಲ ಟ್ಯಾಂಕರ್ ಅನ್ನು ಗುರುವಾರ ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ತಮಿಳುನಾಡು: ಭಾನುವಾರ ಮತ ಎಣಿಕೆ, ಸಂಭ್ರಮಾಚರಣೆ ಬೇಡ; ಪಕ್ಷದ ಕಾರ್ಯಕರ್ತರಲ್ಲಿ ಸ್ಟಾಲಿನ್ ಮನವಿ
ಮೇ 2 ರಂದು ನಡೆಯಲಿರುವ ಮತ ಎಣಿಕೆ ಕೇಂದ್ರಗಳ ಬಳಿ ಹೆಚ್ಚಿನ ಜನ ಸೇರದಂತೆ ಅಥವಾ ಎಲ್ಲಿಯೂ ಸಂಭ್ರಮಾಚರಣೆ ಮಾಡದಂತೆ ಪಕ್ಷದ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಕಾರ್ಯಕರ್ತರಲ್ಲಿ ಶುಕ್ರವಾರ ಮನವಿ ಮಾಡಿದ್ದಾರೆ.

ತಮಿಳುನಾಡು: ಮುಂದಿನ ಆದೇಶದವರೆಗೂ ಕೋವಿಡ್ ನಿರ್ಬಂಧ ವಿಸ್ತರಣೆ, ಮತ ಎಣಿಕೆ ದಿನ ಸಂಪೂರ್ಣ ಲಾಕ್ ಡೌನ್
ಏಪ್ರಿಲ್ 20ರಿಂದ ಜಾರಿಯಲ್ಲಿರುವ ಕೋವಿಡ್-19 ನಿರ್ಬಂಧಗಳನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದ್ದು, ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಮೇ 2 ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಲಾಗಿದೆ.

ತಮಿಳುನಾಡು: ಇಡ್ಲಿ ಅಮ್ಮ ಖ್ಯಾತಿಯ ವೃದ್ಧೆಗೆ ಮನೆ ನಿರ್ಮಿಸಿಕೊಡಲು ಉದ್ಯಮಿ ಆನಂದ್ ಮಹೀಂದ್ರಾ ಮುಂದು!
'ಇಡ್ಲಿ ಅಮ್ಮ' ಎಂದೇ ಹೆಸರುವಾಸಿಯಾಗಿರುವ ವೃದ್ಧ ಮಹಿಳೆ ಕಮಲಥಾಲ್ ಅವರಿಗೆ ಆಟೋಮೊಬೈಲ್ ಕಂಪನಿ ಮಹೀಂದ್ರಾ ಗ್ರೂಪ್ ನಿಂದ ಕ್ಯಾಂಟೀನ್ ನೊಂದಿಗೆ ಮನೆಯೊಂದನ್ನು ಕಟ್ಟಿಸಿಕೊಡಲಾಗುತ್ತಿದೆ.

ಸೂಪರ್ ಸ್ಟಾರ್ ರಜಿನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್!
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ, ಎಐಎಡಿಎಂಕೆಯೊಂದಿಗೆ ಮೈತ್ರಿ ಇಲ್ಲ ಎಂದ ಕಮಲ್ ಹಾಸನ್
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಅಥವಾ ಡಿಎಂಕೆಯೊಂದಿಗೆ ತಮ್ಮ ಪಕ್ಷ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಕ್ಕಳ್ ನಿಧಿ ಮೈಮ್ (ಎಂಎನ್ ಎಂ) ಮುಖ್ಯಸ್ಥ ಕಮಲ್ ಹಾಸನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

66 ವಿದ್ಯಾರ್ಥಿಗಳು, 5 ಸಿಬ್ಬಂದಿಗೆ ಕೊರೊನಾ ಸೋಂಕು; ಐಐಟಿ ಮದ್ರಾಸ್ ಸೀಲ್ಡೌನ್!
ಪ್ರತಿಷ್ಠಿತ ಮದ್ರಾಸ್ ಐಐಟಿಗೂ ಕೊರೋನಾ ಸೋಂಕು ಭೀತಿ ಆವರಿಸಿದ್ದು, ಐಐಟಿ ಕ್ಯಾಂಪಸ್ ನ ಕನಿಷ್ಠ 66 ಮಂದಿ ವಿದ್ಯಾರ್ಥಿಗಳಿಗೆ ಮತ್ತು 5 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಪರಿಣಾಮ ಇಡೀ ಕ್ಯಾಂಪಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಶುಕ್ರವಾರ ಮುಂಜಾನೆ ತಮಿಳುನಾಡು ದಾಟಲಿರುವ ಬುರೆವಿ ಚಂಡಮಾರುತ
ಪಂಬನ್ ಸಮೀಪದಲ್ಲಿರುವ ಬುರೆವಿ ಚಂಡಮಾರುತ ಗಂಟೆಗೆ 9 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದ್ದು, ಪಂಬನ್ನಿಂದ ನೈರುತ್ಯಕ್ಕೆ 20 ಕಿ.ಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯಕ್ಕೆ 210 ಕಿ.ಮೀ ದೂರದಲ್ಲಿರುವ ರಾಮನಾಥಪುರಂ ಕರಾವಳಿಯ ಸಮೀಪದಲ್ಲಿದೆ.

