Taliban

ಎನ್‌ಜಿಒಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುವುದನ್ನು ನಿಷೇಧಿಸಿದ ತಾಲಿಬಾನ್ ಸರ್ಕಾರ
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮಹಿಳೆಯರು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡುವುದನ್ನು ನಿಷೇಧಿಸಿದೆ. ಈ ಕ್ರಮವು ವಿಶ್ವಸಂಸ್ಥೆ, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ವಿಶೇಷವಾಗಿ ಲಿಂಗ ತಾರತಮ್ಯದ ವಿರುದ್ಧ ಹೋರಾಡುವವರಿಂದ ವ್ಯಾಪಕ ಖಂಡನೆಗೆ ಒಳಗಾಗಿದೆ|

ಅಫ್ಘಾನಿಸ್ತಾನ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿದ ತಾಲಿಬಾನ್
ಅಫ್ಘಾನಿಸ್ತಾನದ ಹುಡುಗಿಯರಿಗೆ ವಿಶ್ವವಿದ್ಯಾಲಯ ಶಿಕ್ಷಣವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿ ತಾಲಿಬಾನ್ ಉನ್ನತ ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.

ರಕ್ತಪಾತ ತಪ್ಪಿಸಲು ಅಫ್ಘಾನಿಸ್ತಾನ ತೊರೆದೆ- ಅಶ್ರಫ್ ಘನಿ
ಅಫ್ಘಾನಿಸ್ತಾನದ ಅಧ್ಯಕ್ಷರ ಪ್ಯಾಲೇಸ್ ಗೆ ಉಗ್ರರು ಲಗ್ಗೆ ಹಾಕಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟರಿಂದ ರಕ್ತಪಾತವನ್ನು ತಡೆಯುವ ನಿಟ್ಟಿನಲ್ಲಿ ದೇಶ ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಕಾಬೂಲ್ ನ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ!
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಚೀನಾದ ಅತಿಥಿಗೃಹದ ಬಳಿ ದೊಡ್ಡ ಸ್ಫೋಟ ಮತ್ತು ಗುಂಡಿನ ದಾಳಿ ನಡೆದಿದ್ದು ಆಫ್ಘಾನ್ ಪಡೆ ಕಟ್ಟಡವನ್ನು ಸುತ್ತುವರೆದಿದೆ.

ವ್ಯಕ್ತಿ ತಲೆಗೆ ಗುಂಡು: ಆಫ್ಘಾನ್ ವಶಪಡಿಸಿಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದ ತಾಲಿಬಾನ್!
ಆಫ್ಘಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಆಡಳಿತ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದೆ.

ಅಫ್ಘಾನಿಸ್ತಾನ: ಮಜರ್-ಇ-ಶರೀಫ್‌ನಲ್ಲಿ ರಸ್ತೆಬದಿ ಬಾಂಬ್ ಸ್ಫೋಟ; ಹೊತ್ತಿ ಉರಿದ ಬಸ್, ಏಳು ಮಂದಿ ಸಾವು
ಉತ್ತರ ಅಫ್ಘಾನಿಸ್ತಾನದಲ್ಲಿ ಮಂಗಳವಾರ ರಸ್ತೆಬದಿಯ ಬಾಂಬ್ ಸ್ಫೋಟದಲ್ಲಿ ಬಸ್‌ನಲ್ಲಿದ್ದ ಏಳು ಪೆಟ್ರೋಲಿಯಂ ಕಂಪನಿಯೊಂದರ ಉದ್ಯೋಗಿಗಳು ಸಾವಿಗೀಡಾಗಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ: ತಾಲಿಬಾನ್ ನಿಂದ ಆತ್ಮಾಹುತಿ ಬಾಂಬ್ ದಾಳಿ, ಮೂವರು ಸಾವು, 23 ಮಂದಿಗೆ ಗಾಯ
ಪಶ್ಚಿಮ ಪಾಕಿಸ್ತಾನದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸಿ: ತಾಲಿಬಾನ್ ಗೆ ವಿಶ್ವಸಂಸ್ಥೆ
ಅಫ್ಘಾನಿಸ್ತಾನದಲ್ಲಿ ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸಿ ಎಂದು ತಾಲಿಬಾನ್ ಸರ್ಕಾರಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ.

NATO ಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನ ಕೈಬಿಟ್ಟ ಅಮೆರಿಕ!
ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ.

