Taliban

ಅಫ್ಘಾನಿಸ್ತಾನದಲ್ಲಿ ಯುದ್ಧ ಕೊನೆಗೊಂಡಿದೆ, ಕೆಲದಿನಗಳಲ್ಲಿ ಸರ್ಕಾರ ರಚನೆ: ತಾಲಿಬಾನ್ ಘೋಷಣೆ
ದೇಶದಲ್ಲಿ ಯುದ್ಧ ಮುಗಿದಿದೆ. ಸರ್ಕಾರ ರಚನೆ ಬಾಕಿ ಉಳಿದಿದೆ. ಜಗತ್ತಿನೊಂದಿಗೆ ಉತ್ತಮ ಸಂಬಂಧ ಹಾಗೂ ದೇಶದ ಮರುನಿರ್ಮಾಣ ತಾಲಿಬಾನ್ ಧ್ಯೇಯ ಎಂದ ವಕ್ತಾರ.

ಆರೆಸ್ಸೆಸ್ ಅನ್ನು ತಾಲಿಬಾನ್ ಜೊತೆ ಹೋಲಿಸುವುದು ಹಿಂದೂ ಸಂಸ್ಕೃತಿ ಅವಮಾನಿಸಿದಂತೆ: ಜಾವೆದ್ ಅಖ್ತರ್ ವಿರುದ್ಧ ಶಿವಸೇನಾ ಆಕ್ರೋಶ
ತಾಲಿಬಾನ್ ಮನೋಧರ್ಮ ಅತ್ಯಂತ ಅಪಾಯಕಾರಿಯಾದದ್ದು ಹಾಗೆಯೇ ಆರೆಸ್ಸೆಸ್, ವಿಎಚ್ ಪಿ ಮತ್ತು ಭಜರಂಗದಳ ಎಂದು ಜಾವೆದ್ ಅಖ್ತರ್ ಹೇಳಿಕೆ ನೀಡಿದ್ದರು.

ಪಂಜಶೀರ್ ಪ್ರಾಂತ್ಯ ನಮ್ಮ ತೆಕ್ಕೆಗೆ ಎಂದ ತಾಲಿಬಾನ್; ಕೇವಲ ರಸ್ತೆ ಮಾತ್ರ ನಿಯಂತ್ರಣದಲ್ಲಿದೆ ಎಂದು ತಿರುಗೇಟು ಕೊಟ್ಟ ರೆಸಿಸ್ಟೆನ್ಸ್ ಫೋರ್ಸ್!
ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಪಂಜ್ಶೀರ್ ಪ್ರಾಂತ್ಯವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಘೋಷಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ರೆಸಿಸ್ಟೆನ್ಸ್ ಫೋರ್ಸ್ ಪಂಜ್ ಶೀರ್ ನ ರಸ್ತೆ ಮಾತ್ರ ನಿಮ್ಮ ನಿಯಂತ್ರಣದಲ್ಲಿದೆ ಎಂದು ತಿರುಗೇಟು ನೀಡಿದೆ.

ತಾಲಿಬಾನ್ ಅಳ್ವಿಕೆಯ ನಡುವೆಯೇ ಬಾಂಗ್ಲಾದೇಶ ತಲುಪಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ
ತಾಲಿಬಾನ್ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ನಂತರ ವಿದೇಶದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಮೆಂಟ್ ಇದು ಎನ್ನುವುದು ವಿಶೇಷ.

ಅಫ್ಘಾನಿಸ್ತಾನ ಘರ್ಷಣೆ: ರೆಸಿಸ್ಟೆನ್ಸ್ ಫೋರ್ಸ್ ವಕ್ತಾರನ ಸಾವು, ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆ ಎಂದ ಅಹ್ಮದ್ ಮಸೂದ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ಪಡೆಗಳ ನಡುವಿನ ಘರ್ಷಣೆ ಮುಂದುವರೆದಿದ್ದು, ಇತ್ತ ತಾಲಿಬಾನ್ ಪಡೆಗಳ ದಾಳಿಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪೋಪ್ ಕರೆ
ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ತಮ್ಮ ಭಾಷಣದಲ್ಲಿ ಎಲ್ಲೂ ತಾಲಿಬಾನ್ ಹೆಸರನ್ನು ಉಚ್ಛರಿಸಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ.

ತಾಲಿಬಾನಿಗಳು ಕೊಲ್ಲುವ ಮುನ್ನ ತಲೆಗೆ ಗುಂಡಿಕ್ಕುವಂತೆ ಬಾಡಿ ಗಾರ್ಡ್ ಗೆ ಆದೇಶಿಸಿದ ಮಾಜಿ ಆಫ್ಘನ್ ಉಪಾಧ್ಯಕ್ಷ
ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು.

ಪಾಕಿಸ್ತಾನದಲ್ಲಿ ಉಗ್ರಸಂಘಟನೆಯಿಂದ ಸುಸೈಡ್ ಬಾಂಬ್ ದಾಳಿ: ಮೂವರು ಸೈನಿಕರು ಸಾವು
ಅಫ್ಘಾನಿಸ್ತಾನದಲ್ಲಿ ಸರ್ಕಾರ ಬದಲಾದ ಮಾತ್ರಕ್ಕೆ ಪಾಕ್ ಸರ್ಕಾರಕ್ಕೆ ಮುಖಭಂಗ ಮಾಡುವ ತನ್ನ ಪ್ರಯತ್ನ ನಿಲ್ಲುವುದಿಲ್ಲ ಎಂದು ಉಗ್ರಸಂಘಟನೆ ಸೂಚನೆ ನೀಡಿದೆ.

ಉಗ್ರರಿಗೆ ಬಗ್ಗದ ಹೋರಾಟಗಾರರು: ಪಂಜಶಿರ್ ನಲ್ಲಿ 600ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ!
ಅಫ್ಘಾನಿಸ್ತಾನದಲ್ಲಿ ಬಾಕಿ ಎಲ್ಲಾ ಪ್ರದೇಶಗಳು ತಾಲಿಬಾನಿಗಳ ವಶವಾಗಿದ್ದರೂ ಈಶಾನ್ಯ ಪ್ರಾಂತ್ಯ ಪಂಜಶಿರ್ ಮಾತ್ರ ದಕ್ಕುತ್ತಿಲ್ಲ. ಪಂಜಶಿರ್ನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನಿಗಳು ಒಂದೆಡೆ ಹೇಳುತ್ತಿದೆ ಆದರೂ, ಸ್ಥಳೀಯ ಪ್ರತಿರೋಧಕ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನದ ಸಿಬ್ಬಂದಿ ಅದನ್ನು ಒಪ್ಪುತ್ತಿಲ್ಲ.

