Tablighi Jamaat

ತಬ್ಲಿಘಿಗಳಿಗೆ ಗುಂಡಿಕ್ಕಿ ಎಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ದೂರು ದಾಖಲು
ಚಿಕಿತ್ಸೆಗೆ ಸ್ಪಂದಿಸದೆ ತಪ್ಪಿಸಿಕೊಳ್ಳುವ ತಬ್ಲಿಘಿಗಳ ಗುಂಡಿಕ್ಕಿ ಹತ್ಯೆ ಮಾಡಿ ಎಂದಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪೋಲೀಸ್ ದೂರು ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಸುಭಾಷ್ ಚಂದ್ರ ಎಂಬುವವರು ದಾವಣಗೆರೆ ಕೆಟಿಜೆ ನಗರ ಪೋಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ದೂರು ಸಲ್ಲಿಸಿದ್ದಾರೆ.

ತಬ್ಲಿಘಿ ಜಮಾತ್ ನಿಂದ ಪ್ರಧಾನಿ ಮೋದಿ ವಿರುದ್ಧ ಪಿತೂರಿ: ಮುಸ್ಲಿಂ ನಾಯಕನಿಂದ ಗಂಭೀರ ಆರೋಪ, ಕಾನೂನು ಕ್ರಮಕ್ಕೆ ಆಗ್ರಹ
ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೋನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಕೊರೋನಾ: ಪಾಕಿಸ್ತಾನಕ್ಕೇ ತಲೆನೋವಾದ ತಬ್ಲಿಘಿಗಳು!
ಧಾರ್ಮಿಕ ಸಭೆಯನ್ನು ಆಯೋಜಿಸಿ ಲಕ್ಷಾಂತರ ಮಂದಿ ಸೇರಿ, ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿರುವ ತಬ್ಲಿಘಿಗಳ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವುದು ಭಾರತದಲ್ಲಿ ಅಷ್ಟೇ ಅಲ್ಲ. ಇವರ ಕೃತ್ಯಕ್ಕೆ ಕಟ್ಟರ್ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊರೋನಾವೈರಸ್ ಹಬ್ಬಲು ಕಾರಣವಾದ ತಬ್ಲಿಘಿ ಜಮಾತ್ ನಿಷೇಧಕ್ಕೆ ಕೋರಿ ಸಿಜೆಐಗೆ ಪತ್ರ
ದೇಶಾದ್ಯಂತ ಕೊರೋನಾವೈರಸ್ ವ್ಯಾಪಿಸಲು ಪ್ರಮುಖ ಕಾರಣವಾಗಿರುವ ತಬ್ಲಿಘಿ ಜಮಾತ್ ಮತ್ತು ಅದರ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ದೇಶನ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರಿಗೆ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ.

ವೈರಸ್ ಹರಡುವುದು ಭಯೋತ್ಪಾದನೆಯಂತೆ, ಅವರು ದೇಶದ್ರೊಹಿಗಳು: ಚಿಕಿತ್ಸೆಗೆ ಬಾರದ ತಬ್ಲಿಘಿಗಳಿಗೆ ಗುಂಡಿಟ್ಟರೂ ತಪ್ಪಿಲ್ಲ
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದರ ಬಗ್ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ. ಚಿಕಿತ್ಸೆ ಪಡೆಯದ ತಬ್ಲಿಘಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾಗಿ ಬಂದು ಚಿಕಿತ್ಸೆ ಪಡೆಯದ ಬಾರದವರನ್ನು ದೇಶದ್ರೋಹಿಗಳು ಎಂದಿದ್ದಾರೆ.

ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರನ್ನು ಹಿಡಿದು, ಮೊಬೈಲ್ ಕರೆ ವಿವರ ಪರಿಶೀಲಿಸಿ: ಯೋಗಿ ಆದಿತ್ಯನಾಥ್
ಕೊರೋನಾ ವೈರಸ್ ಭೀತಿಯ ನಡುವೆಯೇ ತಬ್ಲಿಘಿ ಜಮಾತ್ ನಲ್ಲಿ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದ ವಿವಿಧ ಭಾಗಗಳಿಗೆ ಸಂಚರಿಸಿ ಸೋಂಕು ಹರಡುತ್ತಿರುವವರ ಬಗ್ಗೆ ದೇಶಾದ್ಯಂತ ಆತಂಕ ಎದುರಾಗಿದೆ.

ಕೊರೋನಾ ವೈರಸ್: 24 ಗಂಟೆಗಳಲ್ಲಿ 525 ಪ್ರಕರಣ: ಒಟ್ಟಾರೆ 3,000 ಸೋಂಕಿತರು, 75 ಸಾವು!
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ನ ಹೊಸ 525 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ವೈರಾಣು ಸೋಂಕಿತರ ಸಂಖ್ಯೆ ಏ.04 ರಂದು 3,000 ಕ್ಕೆ ಏರಿಕೆಯಾಗಿದೆ.

ಆರೋಗ್ಯ ಸಿಬ್ಬಂದಿಗಳ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುವ ತಬ್ಲೀಘಿ ಜಮಾತ್ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಬೇಕು: ರಾಜ್ ಠಾಕ್ರೆ
ಕ್ವಾರಂಟೈನ್ ವೇಳೆಯಲ್ಲಿ ಮಹಿಳಾ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಅಶಿಸ್ತಿನಿಂದ ವರ್ತಿಸಿರುವ ಹಾಗೂ ಕೆಲ ಪಿತೂರಿಯಲ್ಲಿ ತೊಡಗಿರುವ ತಬ್ಲೀಘಿ ಜಮಾತ್ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇಂತಹ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ

ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 1023 ಮಂದಿಗೆ ಕೊರೋನಾ ಪಾಸಿಟಿವ್: ಕೇಂದ್ರ
ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ 17 ರಾಜ್ಯಗಳ 1023 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

