Summer

ಫೆಬ್ರವರಿ ಹವಾಮಾನ: ಚಳಿ ಇರಬೇಕಾಗಿದ್ದಲ್ಲಿ ಸುಡು ಬಿಸಿಲು....ಇದಕ್ಕೆ ಎಲ್ ನಿನೋ ಕಾರಣ!
ಫೆಬ್ರವರಿ ತಿಂಗಳ ಆರಂಭದಲ್ಲಿ ಚಳಿ ಇರಬೇಕಾಗಿತ್ತು. ಆದರೆ ಈಗಲೇ ಬೇಸಿಗೆ ಕಾಲದ ಅನುಭವವಾಗುತ್ತಿದೆ. ಇತ್ತೀಚೆಗೆ ದಿನಪೂರ್ತಿ ತೇವಾಂಶದಿಂದ ಕೂಡಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿಗಳಷ್ಟು ಹೆಚ್ಚುತ್ತಿದೆ.

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ: ಇಂಧನ ಸಚಿವ ಕೆಜೆ ಜಾರ್ಜ್
ಪರೀಕ್ಷೆ ಹಾಗೂ ಬೇಸಿಗೆ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಹೇಳಿದರು.

ಡೋಂಟ್ ವರಿ: ಬೆಂಗಳೂರು ನಿವಾಸಿಗಳಿಗೆ ಈ ಬಾರಿ ಬೇಸಿಗೆಯಲ್ಲಿ ಕಾಡುವುದಿಲ್ಲ ಕುಡಿಯುವ ನೀರಿನ ಸಮಸ್ಯೆ!
ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕ ಬೆಂಗಳೂರು ನಗರವಾಸಿಗಳಿಗೆ ಎದುರಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬಿಕ್ಕಟ್ಟನ್ನು ಅಚ್ಚುಕಟ್ಟಾಗಿ ಎದುರಿಸುವ ವಿಶ್ವಾಸದಲ್ಲಿದ್ದಾರೆ.

ಮೈ ಕೊರೆಯುವ ಚಳಿ ಕಡಿಮೆ, ಸೆಖೆಯ ಅನುಭವ: ಈ ವರ್ಷ ಅವಧಿಗೆ ಮುನ್ನವೇ ಬೇಸಿಗೆ ಆಗಮನ!
ಸಾಮಾನ್ಯವಾಗಿ ಜನವರಿ ತಿಂಗಳು ಎಂದರೆ ಮೈಕೊರೆಯುವ ಚಳಿಯ ವಾತಾವರಣ ಇರುತ್ತದೆ. ಆದರೆ ಈ ವರ್ಷ ಮೈಕೊರೆಯುವ ಚಳಿಯ ಅನುಭವವಾಗುತ್ತಿಲ್ಲ. ಬದಲಿಗೆ ಬೇಸಿಗೆ ದಿನಗಳು ಹತ್ತಿರದಲ್ಲಿದೆ ಎಂಬ ಅನುಭವವಾಗುತ್ತಿದೆ.

ರಾಜ್ಯದಲ್ಲಿ ಮುಂಬರುವ ಬೇಸಿಗೆ ವೇಳೆ ವಿದ್ಯುತ್ ಸಮಸ್ಯೆ ಇರುವುದಿಲ್ಲ: ಸಚಿವ ಕೆಜೆ ಜಾರ್ಜ್
ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಮತ್ತು ನೀರಾವರಿ ಪಂಪ್‌ಸೆಟ್ ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಸುಮಾರು 4,500 ಮೆ.ವ್ಯಾ ಇದ್ದು, ಬೇಸಿಗೆ ಕಾಲಕ್ಕೆ ವಿದ್ಯುತ್ ಬೇಡಿಕೆ 16,500 ಮೆ.ವ್ಯಾ ಏರಿಕೆ ಸಾಧ್ಯತೆ ಇದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಮಂಗಳವಾರ ಹೇಳಿದರು.

ಮುಂಗಾರು ಕೊರತೆ: ಆವಿಯಾಗುತ್ತಿರುವ ತೇವಾಂಶ, ಹೆಚ್ಚುತ್ತಿರುವ ಒಣಹವೆ; ಮಳೆಗಾಲದಲ್ಲಿ ಬಿರುಬೇಸಿಗೆಯ ಅನುಭವ!
ರಾಜ್ಯಾದ್ಯಂತ ಮಳೆಯಿಲ್ಲದೇ ಬಿರುಬಿಸಿಲಿನ ಆರ್ಭಟ ಜೋರಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಿರುವುದರಿಂದ ಅಕ್ಷರಶಃ ಜನತೆಗೆ ಬೇಸಿಗೆ ಕಾಲದ ಅನುಭವವಾಗುತ್ತಿದೆ.

ಬಿಸಿಲಿನ ಬೇಗೆ ಒಂದೆಡೆ, ಅನಿಯಮಿತ ವಿದ್ಯುತ್ ಕಡಿತ ಮತ್ತೊಂದೆಡೆ: ನಗರದಲ್ಲಿ ಜನತೆ ಕಂಗಾಲು
ಸುಡು ಬಿಸಿಲಿಗೆ ನಗರದ ಜನತೆ ತತ್ತರಿಸಿ ಹೋಗುತ್ತಿದ್ದು, ಈ ನಡುವಲ್ಲೇ ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುತ್ತಿರುವುದು ಜನತೆ ಕಂಗಾಲಾಗುವಂತೆ ಮಾಡಿದೆ.

ಏರುತ್ತಲೇ ಇದೆ ಬಿಸಿಲಿನ ಝಳ, ಪ್ರಾಣಿ-ಪಕ್ಷಿ ಸಂಕುಲ ತತ್ತರ
ಎಲ್ಲಿ ನೋಡಿದರಲ್ಲಿ ಈಗ ಸೆಖೆ, ಬಿಸಿಲಿನ ಮಾತು. ಬಿಸಿಲಿನ ತಾಪಕ್ಕೆ ಜನರು ಬೆಂದು ಬಸವಳಿದು ಹೋಗಿದ್ದಾರೆ. ಪ್ರಾಣಿ ಪಕ್ಷಿ ಸೇರಿದಂತೆ ಜೀವಸಂಕುಲವೇ ಕಷ್ಟದಲ್ಲಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ 36 ಡಿಗ್ರಿ, ಕಲಬುರಗಿಯಲ್ಲಿ 41 ಡಿಗ್ರಿ ತಾಪಮಾನ; ಬೇಸಿಗೆ ಧಗೆಗೆ ರಾಜ್ಯದ ಜನ ತತ್ತರ!
ರಾಜ್ಯದಲ್ಲಿ ಬೇಸಿಗೆ ಅಬ್ಬರ ಜೋರಾಗಿದ್ದು, ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ.

