state

ಕೆಎಸ್ ಆರ್-ಕೆಐಎ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು 3 ವರ್ಷದ ಅವಧಿ
ರಾಜ್ಯ

ಕೆಎಸ್ ಆರ್-ಕೆಐಎ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು 3 ವರ್ಷದ ಅವಧಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ(ಕಾರಿಡಾರ್1)ರ 41.4 ಕಿಲೋ ಮೀಟರ್ ಉದ್ದದ 15 ಸಾವಿರದ 767 ಕೋಟಿ ರೂಪಾಯಿಯ ಉಪನಗರ ರೈಲು ಸಂಪರ್ಕದ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸಚಿವ ಸಂಪುಟ ಮೂರು ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.

ಜಿಎಸ್ಟಿ ಪರಿಹಾರ ಪ್ರಕ್ರಿಯೆ: ಕೇಂದ್ರ ಹಣಕಾಸು ಸಚಿವಾಲಯದ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ
ರಾಜ್ಯ

ಜಿಎಸ್ಟಿ ಪರಿಹಾರ ಪ್ರಕ್ರಿಯೆ: ಕೇಂದ್ರ ಹಣಕಾಸು ಸಚಿವಾಲಯದ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ

ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯ ಸಾಧಕ-ಬಾಧಕಗಳನ್ನು ಅಳೆದುತೂಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಭವಿಷ್ಯದಲ್ಲಿ ತೆರಿಗೆ ಸಂಗ್ರಹದಿಂದ ಸಾಲ ಮರುಪಾವತಿ ಮತ್ತು ಬಡ್ಡಿದರ ಪಾವತಿಗೆ ಸಂಬಂಧಿಸಿದಂತೆ ಅಧಿಕಾರವನ್ನು ನೀಡಿದ್ದಾರೆ.

ರಾಜ್ಯಗಳ ಜಿಎಸ್ಟಿ ಕೊರತೆ ಸರಿತೂಗಿಸಲು 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದು!
ವಾಣಿಜ್ಯ

ರಾಜ್ಯಗಳ ಜಿಎಸ್ಟಿ ಕೊರತೆ ಸರಿತೂಗಿಸಲು 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದು!

ರಾಜ್ಯಗಳ ಜಿಎಸ್ಟಿ ಆದಾಯದ ಕೊರತೆಯನ್ನು ನಿವಾರಿಸಲು ವಿಶೇಷ ಅವಕಾಶದಡಿ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಿಎಸ್ಟಿ ಪರಿಹಾರ: ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಪತ್ರದ ಮನವಿಯನ್ನು ಪರಿಶೀಲಿಸುತ್ತಿರುವ ರಾಜ್ಯ ಸರ್ಕಾರ
ರಾಜ್ಯ

ಜಿಎಸ್ಟಿ ಪರಿಹಾರ: ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಪತ್ರದ ಮನವಿಯನ್ನು ಪರಿಶೀಲಿಸುತ್ತಿರುವ ರಾಜ್ಯ ಸರ್ಕಾರ

ಭವಿಷ್ಯದ ಜಿಎಸ್ಟಿ ಪರಿಹಾರಕ್ಕೆ ಬಡ್ಡಿ ಪಾವತಿ ಮತ್ತು ಸಾಲವನ್ನು ಹಿಂತಿರುಗಿಸಿರುವ ಬಗ್ಗೆ ಅಧಿಕೃತ ಪತ್ರ ನೀಡಬೇಕೆಂದು ಕೇಂದ್ರ ಸರ್ಕಾರ ಮಾಡಿರುವ ಮನವಿ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಅಧ್ಯಯನ ನಡೆಸುತ್ತಿದೆ.

ರಾಜ್ಯದಲ್ಲಿ 2ನೇ ಬಾರಿ 10,000 ಕೊರೋನಾ ಕೇಸ್: ರಾಜ್ಯವಾರು ಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಕರ್ನಾಟಕ
ರಾಜ್ಯ

ರಾಜ್ಯದಲ್ಲಿ 2ನೇ ಬಾರಿ 10,000 ಕೊರೋನಾ ಕೇಸ್: ರಾಜ್ಯವಾರು ಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಕರ್ನಾಟಕ

ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಏರಿಕೆಯೊಂದಿಗೆ ಸೋಂಕಿತರ ಪ್ರಮಾಣ ಕೂಡ ಹೆಚ್ಚಾಗತೊಡಗಿದ್ದು, ರಾಜ್ಯದಲ್ಲಿ ಎರಡನೇ ಬಾರಿಗೆ 10,000ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯವಾರು ಅತೀ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಪ್ರವಾಹದಿಂದ  ರಾಜ್ಯಕ್ಕೆ 8071 ಕೋಟಿ ರೂ.ಗಳ ನಷ್ಟ: ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳ ಮಾಹಿತಿ
ರಾಜ್ಯ

ಪ್ರವಾಹದಿಂದ  ರಾಜ್ಯಕ್ಕೆ 8071 ಕೋಟಿ ರೂ.ಗಳ ನಷ್ಟ: ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳ ಮಾಹಿತಿ

ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಗೆಂದು  ಕೇಂದ್ರ ಗೃಹ ಮಂತ್ರಾಲಯದ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಆಗಮಿಸಿರುವ ತಂಡವು ಇಂದು ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು. 

ಜೂ.18ಕ್ಕೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಸರ್ವ ಸಿದ್ಧತೆ
ರಾಜ್ಯ

ಜೂ.18ಕ್ಕೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಸರ್ವ ಸಿದ್ಧತೆ

ಇದೇ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸುಮಾರು 5.95 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಜನರು ಬಹಳ ಕಷ್ಟದಲ್ಲಿದ್ದಾರೆ, ಸಹಾಯ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ: ಡಿ.ಕೆ. ಶಿವಕುಮಾರ್
ರಾಜಕೀಯ

ಜನರು ಬಹಳ ಕಷ್ಟದಲ್ಲಿದ್ದಾರೆ, ಸಹಾಯ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ: ಡಿ.ಕೆ. ಶಿವಕುಮಾರ್

ಕೋವಿಡ್-19 ಬಿಕ್ಕಟ್ಟನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವಕಾಶಕ್ಕೆ ಬಳಸುತ್ತಿರುವಂತೆ ಕಾಣುತ್ತಿದೆ.ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಯಶಸ್ಸಿನ ಎಳೆಯನ್ನು ತೆಗೆದುಕೊಂಡು ಕೊರೋನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಹತ್ತಿರವಾಗಲು ಡಿ ಕೆ ಶಿವಕುಮಾರ್ ನೋಡುತ್ತಿದ್ದಾರೆ.

ತ್ರಿಪುರಾ'ಕೋವಿಡ್-19 ಮುಕ್ತ ರಾಜ್ಯ':ಅಧಿಕೃತ ಘೋಷಣೆ
ದೇಶ

ತ್ರಿಪುರಾ'ಕೋವಿಡ್-19 ಮುಕ್ತ ರಾಜ್ಯ':ಅಧಿಕೃತ ಘೋಷಣೆ

ತ್ರಿಪುರಾದಲ್ಲಿ ಎರಡನೇ ಕೋವಿಡ್ -19 ಸೋಂಕಿತ ರೋಗಿಯನ್ನು ಇಲ್ಲಿನ ಜಿಬಿಪಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದರೊಂದಿಗೆ ರಾಜ್ಯವನ್ನು ‘ಕೋವಿಡ್ ಮುಕ್ತ ರಾಜ್ಯ’ವೆಂದು ಶನಿವಾರ ಅಧಿಕೃತವಾಗಿ ಘೋಷಿಸಲಾಗಿದೆ