stampede

ತಮಿಳುನಾಡಿನಲ್ಲಿ ಉಚಿತ ಸೀರೆಗೆ ಮುಗಿಬಿದ್ದ ಮಹಿಳೆಯರು; ಕಾಲ್ತುಳಿತದಲ್ಲಿ ನಾಲ್ವರು ಸಾವು!
ತಿರುಪತ್ತೂರಿನ ವಾಣಿಯಂಬಾಡಿಯಲ್ಲಿ ಉಚಿತ ಸೀರೆಗೆ ಮಹಿಳೆಯರು ಮುಗಿಬಿದ್ದಿದ್ದರಿಂದ ಹಠಾತ್ ಕಾಲ್ತುಳಿತ ಸಂಭವಿಸಿದ್ದು ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಒಡಿಶಾದಲ್ಲಿ ಮಕರ ಮೇಳದ ವೇಳೆ ಕಾಲ್ತುಳಿತ; ಓರ್ವ ಸಾವು, 20 ಮಂದಿಗೆ ಗಾಯ
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಶನಿವಾರ ನಡೆದ ಮಕರ ಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಕಾರ್ಯಕ್ರಮದಲ್ಲಿ ಕಾಲ್ತುಳಿತ; ತನಿಖೆ ನಡೆಸಲು ಸಮಿತಿಯನ್ನು ನೇಮಿಸಿದ ಆಂಧ್ರ ಸರ್ಕಾರ
ವಿಧಾನಸಭೆ ವಿರೋಧ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರ ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಸಂಭವಿಸಿದ ಕಂದುಕೂರು ಮತ್ತು ಗುಂಟೂರು ಕಾಲ್ತುಳಿತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಆಂಧ್ರ ಪ್ರದೇಶ ಸರ್ಕಾರ ಶನಿವಾರ ನ್ಯಾಯಾಂಗ ಸಮಿತಿಯನ್ನು ನೇಮಿಸಿದೆ.

ಮೂರು ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಹೊಣೆ; ಟಿಡಿಪಿ ಆರೋಪ
ಕಾಲ್ತುಳಿತ ದುರಂತಕ್ಕೆ ಆಂಧ್ರಪ್ರದೇಶ ಸರ್ಕಾರವೇ ಹೊಣೆ ಎಂದು ತೆಲುಗು ದೇಶಂ ಪಕ್ಷವು (ಟಿಡಿಪಿ) ಆರೋಪಿಸಿದ್ದು, ದುರಂತದ ಬಗ್ಗೆ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಚಂದ್ರಬಾಬು ನಾಯ್ಡು ರ್ಯಾಲಿಯಲ್ಲಿ ಕಾಲ್ತುಳಿತ: 3 ಸಾವು ಹಲವರಿಗೆ ಗಾಯ
ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಟಿಡಿಪಿ ರ್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.

ನೆಲ್ಲೂರು: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ ಸಭೆಯಲ್ಲಿ ಕಾಲ್ತುಳಿತ, ಏಳು ಮಂದಿ ದುರ್ಮರಣ
ಟಿಡಿಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ ಏಳು ಮಂದಿ ದುರ್ಮರಣ ಹೊಂದಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೊರ್ ನಲ್ಲಿ ಸಾರ್ವಜನಿಕ ಸಭೆಗೆ ಚಂದ್ರಬಾಬು ನಾಯ್ಡು ಆಗಮಿಸಿದಾಗ ಆ ದುರ್ಘಟನೆ ನಡೆದಿದೆ.

ಬಂಗಾಳದಲ್ಲಿ ಬ್ಲಾಂಕೆಟ್ ವಿತರಣೆ ವೇಳೆ ಕಾಲ್ತುಳಿತ: 3 ಸಾವು
ಬಂಗಾಳದಲ್ಲಿ ಬ್ಲಾಂಕೆಟ್ ವಿತರಣೆ ವೇಳೆ ಕಾಲ್ತುಳಿತ ಉಂಟಾಗಿ 3 ಮಂದಿ ಸಾವನ್ನಪ್ಪಿದ್ದಾರೆ.

ಸಿಯೋಲ್ ಹ್ಯಾಲೋವೀನ್ ಕಾಲ್ತುಳಿತ: 19 ಮಂದಿ ವಿದೇಶಿಯರು ಸೇರಿ ಸಾವಿನ ಸಂಖ್ಯೆ 151ಕ್ಕೆ ಏರಿಕೆ
ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ಹ್ಯಾಲೋವೀನ್ ಹಬ್ಬಗಳ ಸಂದರ್ಭದಲ್ಲಿ ಕಿರಿದಾದ ರಸ್ತೆಯಲ್ಲಿ ಭಾರೀ ಜನಸಮೂಹ ಸೇರಿ ಉಂಟಾದ ಕಾಲ್ತುಳಿತಕ್ಕೆ(Seoul Halloween stampede) ಕಳೆದ ರಾತ್ರಿ ಮೃತಪಟ್ಟವರ ಸಂಖ್ಯೆ 151ಕ್ಕೇರಿದೆ. ಅವರಲ್ಲಿ 19 ಮಂದಿ ವಿದೇಶಿಯರು ಎಂದು ದೃಢಪಟ್ಟಿದೆ.

ದಕ್ಷಿಣ ಕೊರಿಯಾದಲ್ಲಿ ಭೀಕರ ದುರಂತ: 120 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!
ಶನಿವಾರ ತಡರಾತ್ರಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನಡೆದ ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 120 ಮಂದಿ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

