Srinagara

ಜಮ್ಮು-ಕಾಶ್ಮೀರದಲ್ಲಿ ನಕಲಿ ಉಗ್ರರ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರು, ಸೆಕ್ಯೂರಿಟಿ ಗಾರ್ಡ್ ಬಂಧನ
ಕಳೆದ ವಾರ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದ್ದ ನಕಲಿ ಉಗ್ರರ ದಾಳಿ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಶ್ರೀನಗರದಲ್ಲಿ ಡ್ರೋಣ್ ಗಳು, ಮಾನವ ರಹಿತ ವಾಹನಗಳಿಗೆ ನಿರ್ಬಂಧ
ಡ್ರೋಣ್ ಬಳಸಿ ಜಮ್ಮು ವಾಯುನೆಲೆ ಮೇಲೆ ದಾಳಿಯಾದ ನಂತರ ಡ್ರೋಣ್ ಗಳು ಮತ್ತು ಇದೇ ರೀತಿಯ ಮಾನವ ರಹಿತ ವೈಮಾನಿಕ ವಾಹನಗಳಿಗೆ ಶ್ರೀನಗರ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ.

ಈದ್ ಉಲ್ ಫಿತರ್ ಅಂಗವಾಗಿ ಗಡಿಯಲ್ಲಿ ಭಾರತ- ಪಾಕ್ ಸೈನಿಕರಿಂದ ಸಿಹಿ ವಿನಿಮಯ!
ಈದ್ -ಉಲ್ -ಫಿತರ್ ಹಬ್ಬದ ಅಂಗವಾಗಿ ಜಮ್ಮು- ಕಾಶ್ಮೀರದ ಎಲ್ ಒಸಿಯಲ್ಲಿ ಭಾರತ ಮತ್ತು ಪಾಕಿಸ್ತಾನಸೈನಿಕರು ಗುರುವಾರ ಸಿಹಿ ವಿನಿಮಯ ಮಾಡಿಕೊಂಡು, ಪರಸ್ಪರ ಶುಭ ಹಾರೈಸಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಪೊಲೀಸ್, ನಾಗರಿಕರಿಗೆ ಗಾಯ
ಶ್ರೀನಗರದಲ್ಲಿ ಭಾನುವಾರ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ನಾಗರಿಕರೊಬ್ಬರು ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘನೆ; ಭಾರತೀಯ ಸೇನೆ ಪ್ರತಿದಾಳಿಯಲ್ಲಿ 8 ಪಾಕ್ ಯೋಧರ ಹತ್ಯೆ; ವಿಡಿಯೋ
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ( ಎಲ್ ಒಸಿಯಲ್ಲಿ) ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದ ಭಾರತೀಯ ಸೇನಾಪಡೆ ಎರಡು- ಮೂರು ಪಾಕ್ ಸೇನೆಯ ಎಸ್ ಎಸ್ ಜಿ ಕಮಾಂಡೋ ಸೇರಿದಂತೆ 8 ಮಂದಿ ಸೈನಿಕರನ್ನು ಹತ್ಯೆ ಮಾಡಿದೆ.

ಶ್ರೀನಗರ: ಭದ್ರತಾ ಪಡೆಗಳ ಮೇಲೆ ಉಗ್ರರ ದಾಳಿ, ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿಗೆ ಗಾಯ
ಇಲ್ಲಿನ ನೌಗಾಮ್ ಪ್ರದೇಶದಲ್ಲಿ ಉಗ್ರರು ಇಂದು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋಪಿಯಾನ್ ಎನ್ ಕೌಂಟರ್: ಸಾಕ್ಷ್ಯ ಪತ್ತೆ, ಸೇನಾ ಕಾಯ್ದೆಯಡಿ ವಿಚಾರಣೆ ಆರಂಭ
ಈ ವರ್ಷದ ಜುಲೈನಲ್ಲಿ ನಡೆದ ಶೋಪಿಯಾನ್ ಎನ್ ಕೌಂಟರ್ ನಲ್ಲಿ ಮೂವರು ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದ್ದು, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ಅಧಿಕಾರವನ್ನು ಮೀರಿರುವುದು 'ಫ್ರೈಮಾ ಫೇಸಿ' ಸಾಕ್ಷ್ಯದಲ್ಲಿ ಕಂಡುಬಂದಿದ್ದು, ಶಿಸ್ತು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಜಮ್ಮು-ಕಾಶ್ಮೀರ:ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ
ಕಳೆದ ರಾತ್ರಿ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ 5 ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಯ ಫಾರ್ವರ್ಡ್ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಭಾರೀ ಗುಂಡಿನ ಮಳೆಗರೆದಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆಯಲ್ಲಿ ಭರ್ಜರಿ ಭೇಟಿ: ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರ ಹತ್ಯೆ- ಐಜಿ ವಿಜಯ್ ಕುಮಾರ್
ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ

