Srinagar

ಜಮ್ಮು-ಕಾಶ್ಮೀರ: ಶ್ರೀನಗರದ ಬೊರಿಕದಲ್ ನಲ್ಲಿ ಉಗ್ರರಿಂದ ಓರ್ವನ ಹತ್ಯೆ
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯ ಪ್ರಕರಣವೊಂದು ಮತ್ತೆ ವರದಿಯಾಗಿದೆ. ನ.09 ರಂದು ಶ್ರೀನಗರದ ಬೋರಿಕದಲ್ ನಲ್ಲಿ ವ್ಯಕ್ತಿಯೋರ್ವನನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಶ್ರೀನಗರದಲ್ಲಿ ಉಗ್ರರಿಂದ ಪೊಲೀಸ್ ಪೇದೆ ಹತ್ಯೆ
ಕಾಶ್ಮೀರದಲ್ಲಿ ಭಯೋತ್ಪಾದಕರು ಪೊಲೀಸ್ ಪೇದೆಯನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ವರದಿಯಾಗಿದೆ.

ಭಾರತ ತಂಡದ ಸೋಲು: ಜಮ್ಮು-ಕಾಶ್ಮೀರದ ಕೆಲವೆಡೆ ಸಂಭ್ರಮ, ಕೋಪ ಏಕೆ ಎಂದ ಮೆಹಬೂಬಾ ಮುಫ್ತಿ!
ಕಳೆದ ಭಾನುವಾರ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಬಾಬರ್ ನೇತೃತ್ವದ ಪಾಕ್ ತಂಡದ ಗೆಲುವನ್ನು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಸಂಭ್ರಮಿಸಲಾಯಿತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ವರದಿಯಾಗಿದೆ.

ಅಭಿವೃದ್ಧಿಗಾಗಿ ಕಾಶ್ಮೀರದ ಯುವ ಜನರೊಂದಿಗೆ ಮಾತುಕತೆ: ಪಾಕ್ ಜೊತೆ ಚರ್ಚೆ ಮಾಡಿ ಎಂದ ಫಾರೂಖ್ ಅಬ್ದುಲ್ಲಾಗೆ ಅಮಿತ್ ಶಾ ತಿರುಗೇಟು
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಕೋರುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿನ ಅತ್ಯಂತ ಪ್ರಮುಖವಾದ ಪ್ರದೇಶವಾಗಿ ಇದನ್ನು ಅಭಿವೃದ್ಧಿಪಡಿಸಲು ಜಮ್ಮು-ಕಾಶ್ಮೀರದ ಯುವಕರೊಂದಿಗೆ ಸರ್ಕಾರ ಮಾತನಾಡಲು ಬಯಸುತ್ತದೆ ಎಂದಿದ್ದಾರೆ.

ಆರ್ಟಿಕಲ್ 370 ರದ್ಧತಿ ಬಳಿಕ ಕಾಶ್ಮೀರಕ್ಕೆ ಅಮಿತ್ ಶಾ ಮೊದಲ ಭೇಟಿ; ಹುತಾತ್ಮ ಪೊಲೀಸ್ ಅಧಿಕಾರಿ ಕುಟುಂಬಸ್ಥರಿಗೆ ಸಾಂತ್ವನ
2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ವೇಳೆ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೈಜ್ ಅವರ ಮನೆಗೆ ಭೇಟಿ ನೀಡಿದರು.

30 ವರ್ಷಗಳಲ್ಲಿ ಇದೇ ಮೊದಲು: ಶ್ರೀನಗರದಲ್ಲಿ ಸಿಆರ್ ಪಿಎಫ್ ನಿಂದ ಮಹಿಳೆಯರ ತಪಾಸಣೆ
ಜಮ್ಮು-ಕಾಶ್ಮೀರದಲ್ಲಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಆರ್ ಪಿಎಫ್ ನ ಮಹಿಳಾ ಪೇದೆಗಳು ಮಹಿಳೆಯರನ್ನು ತಪಾಸಣೆಗೊಳಪಡಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಬಳಿಕ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರ ಹತ್ಯೆ- ಐಜಿಪಿ ವಿಜಯ್ ಕುಮಾರ್
ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ನಾಗರಿಕರ ಹತ್ಯೆ ಬಳಿಕ ಉಗ್ರರು ಹಾಗೂ ಭದ್ರತಾ ಪಡೆ ನಡೆದ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಶನಿವಾರ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ, ಮತ್ತೆ ಇಬ್ಬರನ್ನು ಗುಂಡಿಕ್ಕಿ ಕೊಂದ ಉಗ್ರರು
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರೆದಿದ್ದು, ಶ್ರೀನಗರ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಸ್ಥಳೀಯರಲ್ಲದ ಮತ್ತೆ ಇಬ್ಬರು ನಾಗರಿಕರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ...

ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಪೊಲೀಸರಿಂದ ಎಲ್ ಇಟಿ ಉಗ್ರರ ಅಡಗುತಾಣ ಪತ್ತೆ
ಶ್ರೀನಗರ ಜಿಲ್ಲೆಯ ರಾಜೌರಿಕಾದಲ್ ಪ್ರದೇಶದಲ್ಲಿ ಭಯೋತ್ಪಾದಕ ಅಡಗು ತಾಣವೊಂದನ್ನು ಪತ್ತೆ ಹಚ್ಚಲಾಗಿದ್ದು, ಇಬ್ಬರು ಉಗ್ರರ ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

