Sputnik V

ಮೇ ಅಂತ್ಯದ ವೇಳೆಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಬೆಂಗಳೂರಿಗೆ
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗಿದ್ದರೂ, ಸೋಂಕು ನಿಯಂತ್ರಿಸಲು ಪರಿಣಾಮಕಾರಿಯಾಗಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಹಾಹಾಕಾರ ಶುರುವಾಗಿದೆ. ಈ ನಡುವಲ್ಲೇ ಬಹುನಿರೀಕ್ಷಿತ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಮೇ ಅಂತ್ಯ ವೇಳೆಗೆ ಬೆಂಗಳೂರಿನಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ.

ಕೋವಿಡ್-19: ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಧಾರವಾಡದಲ್ಲಿ ಉತ್ಪಾದನೆ
ಕೊರೋನಾ ಲಸಿಕೆಗಳಿಗೆ ದೇಶದಾದ್ಯಂತ ತೀವ್ರ ಕೊರತೆ ಎದುರಾಗಿರುವಾಗಲೇ, ವಿಶ್ವದ ಮೊದಲ ಕೋವಿಡ್ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್-ವಿ ಯನ್ನು ಕರ್ನಾಟಕದಲ್ಲಿ ಉತ್ಪಾದಿಸಲು ಕಂಪನಿಯೊಂದು ಮುಂದೆ ಬಂದಿದೆ.

ಅಪೊಲೊ ಆಸ್ಪತ್ರೆ, ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕಾ ಕಾರ್ಯಕ್ರಮ!
ಅಪೊಲೊ ಆಸ್ಪತ್ರೆಗಳು ಮತ್ತು ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಸಂಗ್ರಹ ಭಾರತಕ್ಕೆ, ದಕ್ಷತೆ ಉತ್ತಮವಾಗಿದೆ, ರಷ್ಯಾ ನಾಗರಿಕರ ಮೇಲೆ ಬಳಕೆ ಯಶಸ್ವಿ: ರಷ್ಯಾದ ಭಾರತ ರಾಯಭಾರಿ
ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ರವಾನೆ ಹೈದರಾಬಾದ್ ತಲುಪಿದೆ. ಈ ಸಂದರ್ಭದಲ್ಲಿ ರಷ್ಯಾದ ಭಾರತೀಯ ರಾಯಭಾರಿ ಎನ್ ಕುಡಶೇವ್ ಮಾತನಾಡಿ ಕೊರೋನಾ ರೂಪಾಂತರಿ ವಿರುದ್ಧ ಹೋರಾಡಲು ಸ್ಪುಟ್ನಿಕ್ ವಿ ಅತ್ಯಂತ ಪರಿಣಾಮಕಾರಿ ಲಸಿಕೆ ಎಂದು ರಷ್ಯಾದ ವಿಶೇಷ ತಜ್ಞರು ಘೋಷಿಸಿದ್ದಾರೆ ಎಂದಿದ್ದಾರೆ.

ಮಾರ್ಚ್ 2022 ರೊಳಗೆ 36 ಕೋಟಿ ಭಾರತೀಯರಿಗೆ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆ
ಮಾರ್ಚ್ 2022 ರೊಳಗೆ ರಷ್ಯಾದ ಸುಮಾರು 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೋನಾ ಲಸಿಕೆ ಭಾರತಕ್ಕೆ ಬರಲಿದ್ದು, ಅಂದಾಜು 36 ಕೋಟಿ ಭಾರತೀಯರಿಗೆ ಅದನ್ನು ನೀಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತಕ್ಕೆ ಬಂದ ಮೂರನೇ ಲಸಿಕೆ: ರಷ್ಯಾದಿಂದ 1.5 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳ ರವಾನೆ
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ನ ಸುಮಾರು 1.5 ಲಕ್ಷ ಡೋಸ್ ಲಸಿಕೆಗಳು ಇದೀಗ ಭಾರತಕ್ಕೆ ಬಂದಿಳಿದಿವೆ.

ಕೊರೋನಾಗೆ ಬಂತು ಮೂರನೇ ಲಸಿಕೆ: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್-ವಿ ತುರ್ತು ಬಳಕೆಗೆ ಅನುಮತಿ
ಮಹತ್ವದ ಬೆಳವಣಿಗೆಯಲ್ಲಿ, ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮತಿ ದೊರಕಿದೆ.

