Sports

ಉದ್ದೀಪನ ಮದ್ದು ಸೇವನೆ: ಪ್ರಕರಣದಿಂದ ವೇಟ್‌ಲಿಫ್ಟರ್ ಸಂಜಿತಾ ಚಾನು ಆರೋಪ ಮುಕ್ತ
ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಟ್‌ಲಿಫ್ಟರ್ ಸಂಜಿತಾ ಚಾನು ಆರೋಪ ಮುಕ್ತವಾಗಿದ್ದಾರೆ.

ಈಜುಕೊಳ, ಜಿಮ್ ಹೊರತುಪಡಿಸಿ, ಪ್ರೇಕ್ಷಕರಿಲ್ಲದೇ ಕ್ರೀಡಾ ಚಟುವಟಿಕೆ ಆಯೋಜನೆಗೆ ಷರತ್ತು ಬದ್ಧ ಅವಕಾಶ: ಸಚಿವ ಸಿಟಿ ರವಿ
ಕೊರೋನಾ ವೈರಸ್ ಲಾಕ್ ಡೌನ್‌ನಿಂದಾಗಿ ಸಂಪೂರ್ಣ ಸ್ಥಗಿತಗೊಂಡಿರುವ ಕ್ರೀಡಾ ಚಟುವಟಿಕೆಗಳನ್ನು ಪುನಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ; 'ಮೊದಲ ಭಾರತೀಯ' ಎಂಬ ದಾಖಲೆ
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗುರುವಾರ ಅಪರೂಪದ ಗೌರವಕ್ಕೆ ಭಾಜನರಾಗಿದ್ದು, ಏಷ್ಯಾ / ಓಷಿಯಾನಿಯಾ ವಲಯದಿಂದ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ ನಿಧನ
ಭಾರತ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ ಗುರುವಾರ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಕೋವಿಡ್ ನಿಯಂತ್ರಣಕ್ಕೆ ಬಾರದಿದ್ದರೆ ಟೋಕಿಯೊ ಒಲಿಂಪಿಕ್ಸ್ ರದ್ದು: ಯೊಶಿರೊ
ಮುಂದಿನ ವರ್ಷ ಒಂದು ವೇಳೆ ಕೋವಿಡ್-19 ನಿಯಂತ್ರಣಕ್ಕೆ ಬಾರದಿದ್ದರೆ ಈಗಾಗಲೇ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಪಿಕ್ಸ್ ರದ್ದುಗೊಳ್ಳಲಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೊ ಮೋರಿ ಹೇಳಿದ್ದಾರೆ.

ಫೀಫಾದ ಕೋವಿಡ್-19 ಅರಿವು ಅಭಿಯಾನ: ಮೆಸ್ಸಿ ಜೊತೆ ಭಾರತದ ಸುನಿಲ್ ಛೆಟ್ರಿ ಆಯ್ಕೆ
ಕೋವಿಡ್-19 ವೈರಸ್ ಕುರಿತು ಅರಿವು ಮೂಡಿಸುವ ಅಭಿಯಾನಕ್ಕೆ ಆಯ್ಕೆ ಮಾಡಿರುವ 28 ಮಾಜಿ ಹಾಗೂ ಹಾಲಿ ಫುಟ್ಬಾಲ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಸಹ ಫಿಫಾ ಆಯ್ಕೆ ಮಾಡಿದೆ.

ಕೊರೋನಾ ವೈರಸ್ ಗೆ ಸ್ಪೇನ್ ಫುಟ್ಬಾಲ್ ತಂಡದ 21 ವರ್ಷದ ಕೋಚ್ ಬಲಿ!
ಮಾರಕ ಕೊರೋನಾ ವೈರಸ್ ಗೆ ಸ್ಪೇನ್ ದೇಶ ಕೂಡ ತತ್ತರಿಸಿ ಹೋಗಿದ್ದು, ಸ್ಪೇನ್ ಫುಟ್ಬಾಲ್ ತಂಡದ ಕೋಚ್ ಕೂಡ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಟೋಕಿಯಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಎಂಟು ಬಾಕ್ಸರ್‌ಗಳು
ಏಷ್ಯಾ/ಓಷಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ಭಾರತದ ಎಂಟು ಬಾಕ್ಸರ್‌ಗಳು, ಟೋಕಿಯೊ ಟಿಕೆಟ್ ಪಡೆದುಕೊಂಡಿದ್ದಾರೆ. ಇದು ಭಾರತ ಈ ಟೂರ್ನಿಯಲ್ಲಿ ನೀಡಿದ ಅತ್ಯುತಮ ಪ್ರದರ್ಶನವಾಗಿದೆ.

ಎಫ್‌ಐಎಚ್ ಹಾಕಿ ಶ್ರೇಯಾಂಕ: 4ನೇ ಸ್ಥಾನಕ್ಕೇರಿದ ಭಾರತ ಪುರುಷರ ತಂಡ
ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಎಚ್) ಬಿಡುಗಡೆ ಮಾಡಿರುವ ವಿಶ್ವ ಹಾಕಿ ಶ್ರೇಯಾಂಕದಲ್ಲಿ ಭಾರತ ಪುರುಷರ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದಿದೆ. ಆ ಮೂಲಕ 2003ರ ಬಳಿಕ ಎಫ್‌ಐಎಚ್ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆಯುವಲ್ಲಿ ಭಾರತ ಸಫಲವಾಯಿತು.

