Speaker

ಪಾಕ್ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್, ಕುಟುಂಬಕ್ಕೂ ತಟ್ಟಿದ ಕೊರೋನಾ
ಕೊರೋನಾ ವೈರಸ್ ಮಟ್ಟಹಾಕಲು ಪಾಕಿಸ್ತಾನ ಹೆಣಗಾಡುತ್ತಿದ್ದು, ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಚರ್ಚೆಗೆ ಅವಕಾಶ ನೀಡದ ರಾಕ್ಷಸ ಸರ್ಕಾರ ಇದು: ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕಿಡಿ
ಕೊರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಒಂಭತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಮಧ್ಯಪ್ರದೇಶ ಬಿಕ್ಕಟ್ಟು: ಆರು ಕಾಂಗ್ರೆಸ್ ಬಂಡಾಯ ಶಾಸಕರ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್
ಕಾಂಗ್ರೆಸ್ ಆಡಳಿತದ ಮಧ್ಯಪ್ರದೇಶದ ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ 22 ಕಾಂಗ್ರೆಸ್ ಬಂಡಾಯ ಶಾಸಕರ ಪೈಕಿಯಲ್ಲಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶ ಬಿಕ್ಕಟ್ಟು: 12 ಕಾಂಗ್ರೆಸ್ ಬಂಡಾಯ ಶಾಸಕರಿಗೆ ಸ್ಪೀಕರ್ ನೋಟಿಸ್, ನಾಳೆಯೊಳಗೆ ಪ್ರತಿಕ್ರಿಯೆಗೆ ಸೂಚನೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಧ್ಯಪ್ರದೇಶದ 12 ಕಾಂಗ್ರೆಸ್ ಬಂಡಾಯ ಶಾಸಕರುಗಳಿಗೆ ವಿಧಾನಸಭೆ ಸ್ಪೀಕರ್ ಎನ್. ಪಿ. ಪ್ರಜಾಪತಿ ನೋಟಿಸ್ ನೀಡಿದ್ದು, ನಾಳೆಯೊಳಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಮಾಧ್ಯಮಗಳ ಮೇಲೆ ಸ್ಪೀಕರ್ ಮತ್ತೊಂದು ನಿರ್ಬಂಧ: ಶಾಸಕರ ಭವನಕ್ಕೆ ನೋ ಎಂಟ್ರಿ
ವಿಧಾನಮಂಡಲ ಕಲಾಪದ ಚಿತ್ರೀಕರಣದಿಂದ ಮಾಧ್ಯಮಗಳ ಕ್ಯಾಮೆರಾವನ್ನು ದೂರ ಇಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮಾಧ್ಯಮಗಳ ಮೇಲೆ ಮತ್ತೊಂದು ರೀತಿಯಲ್ಲಿ ನಿರ್ಬಂಧ ಹೇರಿದ್ದು ಶಾಸಕರ ಭವನಕ್ಕೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ.

ಸ್ಪೀಕರ್ ನಡೆ ಸರ್ವಾಧಿಕಾರಿ ಧೋರಣೆ: ಡಿ.ಕೆ. ಶಿವಕುಮಾರ್ ಕಿಡಿ
ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಯಾವುದೇ ಸದಸ್ಯರು ಅಡ್ಡಿಪಡಿಸುವುದು ಇಲ್ಲವೇ ಕ್ರಿಯಾಲೋಪ ಎತ್ತಿದರೆ ಅಂತಹ ಸದಸ್ಯರನ್ನು ಅಮಾನತುಪಡಿಸುವುದಾಗಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊರಡಿಸಿರುವ ಅಧಿಸೂಚನೆಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಸಂಸದರು, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್'ಗೆ: ನಿರ್ಧಾರ ಕುರಿತು ಮರುಚಿಂತನೆ ನಡೆಸಲು 'ಸುಪ್ರೀಂ' ಸಲಹೆ
ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದ್ದು, ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೂಡ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತ ಮಾಡಬೇಕೆಂದು ಸುಪ್ರೀಂಕೋರ್ಟ್ ಪ್ರಯತ್ನ ನಡೆಸಿದ್ದು...

ನಾಗಾಲ್ಯಾಂಡ್ ಸ್ಪೀಕರ್ ನಿಧನ: ಪ್ರಧಾನಿ ಮೋದಿ ಸಂತಾಪ
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಾಗಾಲ್ಯಾಂಡ್ ವಿಧಾನಸಭೆ ಸ್ಪೀಕರ್ ವಿಖೊ-ಒ-ಯೊಶು (67) ನಿಧನಹೊಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಮಹಾರಾಷ್ಟ್ರ: ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧ ಆಯ್ಕೆ
ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

