SIT

ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಲು ಸಚಿವ ಸಂಪುಟ ಅಸ್ತು
ಕೊವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು.

ಏನೇ ದುರ್ಬಳಕೆ ಆಗಿದ್ದರೂ, ವಾಲ್ಮೀಕಿ ನಿಗಮದ ಅನುದಾನ ಕಡಿತ ಮಾಡದಂತೆ ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ
ಈ ವರ್ಷ ವಾಲ್ಮೀಕಿ ನಿಗಮಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಸಂಪೂರ್ಣವಾಗಿ ನೀಡುವಂತೆ ಸೂಚಿಸಿದ್ದೇನೆ. 'ಪರಿಶಿಷ್ಟ ಪಂಗಡದ ಶಾಸಕರು ಹಾಗೂ ಸ್ವಾಮೀಜಿಗಳ ಜತೆಗಿನ ಸಭೆಯಲ್ಲಿ ಎರಡು ವಿಷಯಗಳ ಬಗ್ಗೆ ಚರ್ಚೆಯಾಗಿದೆ.

ಕೋವಿಡ್ ಹಗರಣ: SIT ರಚನೆಗೆ ಸಂಪುಟ ಸಭೆ ತೀರ್ಮಾನ, ಇದು ದ್ವೇಷ ರಾಜಕಾರಣ ಎಂದ BJP
ಎಸ್ಐಟಿ ತನಿಖೆಗೆ ಕೊಡಲು ಮತ್ತು ಅದಕ್ಕೂ ಮೊದಲು ಉಪ ಸಮಿತಿ ಮಾಡಲು ನಮ್ಮ ವಿರೋಧವಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದು ಹೊರಗಡೆ ಬರಲಿ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷಕ್ಕಿಂತ ಜಾಸ್ತಿ ಆಗಿದೆ. ಇದುವರೆಗೆ ಈ ಸರಕಾರ ಏನು ಮಾಡುತ್ತಿತ್ತು?

ಬಿಟ್ ಕಾಯಿನ್ ಹಗರಣ: ಸಾಕ್ಷ್ಯ ತಿರುಚಿದ ಆರೋಪ Dysp ಶ್ರೀಧರ್ ಪೂಜಾರಿ ಬಂಧಿಸಿದ ಎಸ್ಐಟಿ
ಇಂದು ವಿಚಾರಣೆಗಾಗಿ ಸಿಐಡಿ ಕಚೇರಿಗೆ ಬಂದಿದ್ದಾಗ ಶ್ರೀಧರ್ ಪೂಜಾರಿಯನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.

ಶಾಸಕ ಮುನಿರತ್ನ ಮನೆಯಲ್ಲಿ ಸಿಕ್ಕ ಪೆನ್ಡ್ರೈವ್ನಲ್ಲಿ ಬಿಜೆಪಿ ಸೇರಿ ಪ್ರಮುಖ ನಾಯಕರ ಖಾಸಗಿ ವಿಡಿಯೋ ಪತ್ತೆ?
ಈ ವಿಡಿಯೊಗಳನ್ನು ಹನಿಟ್ರ್ಯಾಪ್ ಮೂಲಕ ಚಿತ್ರೀಕರಿಸಿಕೊಂಡಿರುವ ಶಂಕೆಯಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣ: SIT ಕಸ್ಟಡಿಗೆ BJP ಶಾಸಕ ಮುನಿರತ್ನ
ಶಾಸಕ ಮುನಿರತ್ನ ವಿರುದ್ದ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಮುನಿರತ್ನ ಅವರನ್ನು ಕಳೆದ ಶುಕ್ರವಾರ ಬಂಧಿಸಿತ್ತು.

ಮುನಿರತ್ನ ವಿರುದ್ಧ ತನಿಖೆ ನಡೆಸಲು SITಗೆ ಸಂಪೂರ್ಣ ಸ್ವಾತಂತ್ರ್ಯವಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯ ಪಾಲರು ಆರ್ಕವತಿ ವರದಿ ಕೇಳಿದ ವಿಚಾರ ಕುರಿತು ಮಾತನಾಡಿ, ರಾಜ್ಯಪಾಲರು ಬರೆದಿರುವ ಪತ್ರ ನಾನಿನ್ನು ಗಮನಿಸಿಲ್ಲ, ವಿಚಾರಿಸುವೆ ಎಂದರು.

ತಿರುಪತಿ ಲಡ್ಡು ವಿವಾದ: ತನಿಖೆಗೆ ಎಸ್ಐಟಿ ರಚನೆ- ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿದ ಬಗ್ಗೆ, ಅಧಿಕಾರದ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ಎಸ್ಐಟಿ ವರದಿ ನೀಡುತ್ತದೆ.


