shivaSena

'ಮಹಾ' ರಾಜಕೀಯ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೈ, ಎನ್ ಸಿಪಿ, ಶಿವಸೇನಾ ನಾಯಕರ ಸರಣಿ ಮಾತುಕತೆ
ಮಹಾರಾಷ್ಟ್ರ ರಾಜಕೀಯದಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರೆದಿದ್ದು, ಮುಖ್ಯಮಂತ್ರಿ ಸ್ಥಾನ ಕುರಿತಂತೆ ಕಾಂಗ್ರೆಸ್ , ಎನ್ ಸಿಪಿ ಹಾಗೂ ಶಿವಸೇನಾ ನಾಯಕರಿಂದ ಸರಣಿ ಮಾತುಕತೆ ನಡೆಯುತ್ತಿದೆ.

'ಮಹಾ' ಕಗ್ಗಂಟು: ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ, ಸುಪ್ರೀಂ ಮೊರೆ ಹೋದ ಶಿವಸೇನೆ
ಮಹಾರಾಷ್ಟ್ರದಲ್ಲಿನ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಮಹಾ ಬಿಕ್ಕಟ್ಟು: ಕಾಂಗ್ರೆಸ್ ಜೊತೆಗೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ- ಶರದ್ ಪವಾರ್
ಮಹಾರಾಷ್ಟ್ರ ರಾಜಕಾರಣ ದಿನಕ್ಕೊಂದು ರೀತಿಯಲ್ಲಿ ಪ್ರಹಸನಕ್ಕೆ ಸಾಕ್ಷಿಯಾಗುವಂತಿರುವಂತೆ ಶಿವಸೇನಾ ಮುಖಂಡ ಹಾಗೂ ಕೇಂದ್ರ ಭಾರೀ ಕೈಗಾರಿಕಾ ಸಚಿವ ಅರವಿಂದ್ ಸಾವಂತ್ ತಮ್ಮ ಸಚಿವ ಸ್ಥಾನ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.

ಆರ್ ಎಸ್ ಎಸ್ ಮಧ್ಯ ಪ್ರವೇಶಿಸಬೇಕು: ಮೋಹನ್ ಭಾಗವತ್ ಗೆ ಪತ್ರ ಬರೆದ ಶಿವಸೇನಾ ಮುಖಂಡ
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವೆ ಸಮಾನ ಅಧಿಕಾರ ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ ಇದೀಗ ಆರ್ ಎಸ್ ಎಸ್ ಮಧ್ಯ ಪ್ರವೇಶಿಸುವಂತೆ ಶಿವಸೇನಾ ಮುಖಂಡರೊಬ್ಬರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಮಹಾ ಕಗ್ಗಂಟು: ಶಿವಸೇನಾ ನಾಯಕರಿಂದ ಇಂದು ಸಂಜೆ ರಾಜ್ಯಪಾಲರ ಭೇಟಿ
ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿರುವಂತೆ ಶಿವಸೇನೆಯ ಹಿರಿಯ ಮುಖಂಡರು ಇಂದು ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಲಿದ್ದಾರೆ.

ಮಹಾ ಕಗ್ಗಂಟು: ಫಡ್ನವೀಸ್, ಶಿವಸೇನಾ ಮುಖಂಡರಿಂದ ಪ್ರತ್ಯೇಕವಾಗಿ ರಾಜ್ಯಪಾಲರ ಭೇಟಿ!
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದು ಒಂದು ವಾರ ಕಳೆಯುತ್ತಿದ್ದರೂ ಬಿಜೆಪಿ ಹಾಗೂ ಶಿವಸೇನಾ ನಡುವಣ ಹಗ್ಗಜಗ್ಗಾಟದಿಂದಾಗಿ ಸರ್ಕಾರ ರಚನೆ ಮಹಾ ಕಗ್ಗಂಟಾಗಿ ಪರಿಣಮಿಸಿದೆ.

ಮಹಾರಾಷ್ಟ್ರ ಸರ್ಕಾರ ರಚನೆ ವಿಳಂಬ: ಬುಧವಾರ ಉದ್ದವ್ ಠಾಕ್ರೆ, ಅಮಿತ್ ಶಾ ಭೇಟಿ?
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಬಿಜೆಪಿ ಹಾಗೂ ಶಿವಸೇನೆ ಹಗ್ಗಜಗ್ಗಾಟದಿಂದಾಗಿ ಸರ್ಕಾರ ರಚನೆ ವಿಳಂಬವಾಗಿದೆ.

ಯಾವುದೇ ರಾಜಕೀಯ ಪಕ್ಷ ಸೇರಲ್ಲ- ಉರ್ಮಿಳಾ ಮಾತೋಂಡ್ಕರ್
ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದಿದ್ದ ಬಾಲಿವುಡ್ ನಟಿ, ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳನ್ನು ಅಲ್ಲಗಳೆದಿರುವ ಉರ್ಮಿಳಾ, ತಾನು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಶಿವಸೇನಾ ಸಂಸದರೊಂದಿಗೆ ಉದ್ಧವ್ ಠಾಕ್ರೆ ವಿಶೇಷ ಪೂಜೆ
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 18 ನೂತನ ಶಿವಸೇನಾ ಸಂಸದರೊಂದಿಗೆ ಪಕ್ಷದ ಅಧ್ಯಕ್ಷ ಉದ್ದವ್ ಠಾಕ್ರೆ ಇಂದು ಅಯೋಧ್ಯೆಯಲ್ಲಿನ ರಾಮ್ ಲಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

