Shivarajkumar

ಶಿವರಾಜ್ ಕುಮಾರ್ ಕನ್ನಡ ಸಿನಿಮಾದ ಶಾರೂಖ್ ಖಾನ್ - ಪಿ ವಾಸು
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅಭಿಯನದ, ಪಿ. ವಾಸು ನಿರ್ದೇಶನದ ಆಯುಷ್ಮಾನ್ ಭವ ಚಿತ್ರ ನವೆಂಬರ್ 15 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದ್ದು, ಕನ್ನಡ ಚಿತ್ರ ರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಆಯುಷ್ಮಾನ್‌ಭವ' ನ. ೧೫ರಂದು ತೆರೆಗೆ
ಅಂತೂ ಇಂತೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಪಿ ವಾಸು ನಿರ್ದೇಶನದ 'ಆಯುಷ್ಮಾನ್‌ಭವ’ ಚಿತ್ರ ಮುಂದಿನ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

'ಆಯುಷ್ಮಾನ್‌ಭವ' ಬಿಡುಗಡೆ ಮುಂದೂಡಿಕೆ, ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ
ಇದು ನಿಜಕ್ಕೂ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯಾಗಿದ್ದು, 'ಆಯುಷ್ಮಾನ್‌ಭವ' ಚಿತ್ರ ಬಿಡುಗಡೆ ಮುಂದೂಡಲಾಗಿದೆ ಎಂದು ಚಿತ್ರತಂಡ ಮಂಗಳವಾರ ತಿಳಿಸಿದೆ.

ಶಿವಣ್ಣನ ಮುಂದಿನ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ!
ನಟ ಶಿವರಾಜ್ ಕುಮಾರ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರಕ್ಕೆ ನಾಯಕ ನಟಿ ಇನ್ನೂ ಅಂತಿಮವಾಗಿಲ್ಲ ಎಂದು ಚಿತ್ರತಂಡ ಹೇಳಿದೆ.

ಶಿವಣ್ಣ- ರಚಿತಾ ರಾಮ್ ಅಭಿಯನದ 'ಆಯುಷ್ಮಾನ್ ಭವ' ಟ್ರೇಲರ್
ಪಿ. ವಾಸು ನಿರ್ದೇಶನದ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಆಯುಷ್ಮಾನ್ ಭವ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ದಸರಾ ವಿಶೇಷ: ಬಿಗ್ ಬಿ ಅಮಿತಾಬ್ ಜತೆ ನವರಾತ್ರಿ ಆಚರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆ ಸೇರಿ ನವರಾತ್ರಿ ಆಚರಿಸಿದ್ದಾರೆ.

ಸತ್ಯ ಜ್ಯೋತಿ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವಣ್ಣ
ಇತ್ತೀಚಿಗೆ ರುಸ್ತುಂ ಚಿತ್ರದಲ್ಲಿ ಖಾಕಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ಮತ್ತೊಂದು ಚಿತ್ರದಲ್ಲಿ ಖಾಕಿ ಸಮವಸ್ತ್ರ ಧರಿಸಲಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಪ್ರೇಕ್ಷಕರ ಮುಂದೆ ಶಿವಣ್ಣನ 'ಆಯುಷ್ಮಾನ್ ಭವ'
ಪಿ ವಾಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ "ಆಯುಷ್ಮಾನ್ ಭವ" ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ತೆರೆಗೆ ಬರಲು ಸಿದ್ದವಾಗಿದೆ. ದ್ವಾರಕೀಶ್ ಚಿತ್ರದ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರವನ್ನು ಯೋಗೀಶ್ ದ್ವಾರಕೀಶ್ ನಿರ್ಮಿಸಿದ್ದಾರೆ. ಚಿತ್ರದ ಕೆಲ ಸ್ಟಿಲ್ ಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.

ಶಸ್ತ್ರ ಚಿಕಿತ್ಸೆ ನಂತರ ನಟನೆಗೆ ಶಿವಣ್ಣ ಕಮ್ ಬ್ಯಾಕ್: ಭಜರಂಗಿ 2 ಚಿತ್ರೀಕರಣ ಪುನಾರಂಭ!
ಶಸ್ತ್ರ ಚಿಕಿತ್ಸೆ ನಂತರ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

