Shiggaon bypoll

ಶಿಗ್ಗಾಂವಿಯಲ್ಲಿ 'ಕೈ'ಗೆ ಬಂಡಾಯದ ಬಿಸಿ: ನಾಮಪತ್ರ ಸಲ್ಲಿಸಿದ ಖಾದ್ರಿ, ಮನವೊಲಿಕೆಗೆ ಬಂದಿದ್ದ ಸಚಿವ ಜಮೀರ್ ಕಾರಿಗೆ ಕಲ್ಲೇಟು!
ಶಿಗ್ಗಾಂವಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಅನ್ನು ನಾಮಪತ್ರ ಸಲ್ಲಿಕೆಗೆ ಇನ್ನು 13 ನಿಮಿಷ ಬಾಕಿ ಇರುವಂತೆ ಬೈಕ್ ನಲ್ಲಿ ಬಂದ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ: ಗೆಲುವಿಗೆ ಕಾಂಗ್ರೆಸ್ ಕಸರತ್ತು, ಪೈಪೋಟಿ ನೀಡಲು BJP ಸಿದ್ಧತೆ
ಅಧಿಕಾರದಲ್ಲಿರುವುದರಿಂದ ಪಕ್ಷವು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕರು ನಿರೀಕ್ಷಿಸುತ್ತಿದ್ದರೆ, ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಬಿಜೆಪಿ ನಿರತವಾಗಿದೆ.

ಶಿಗ್ಗಾಂವಿ ಉಪಚುನಾವಣೆ: ಮಗನನ್ನು ಚುನಾವಣೆಗೆ ನಿಲ್ಲಿಸುವ ಇರಾದೆ ಇಲ್ಲ- ಸಂಸದ ಬಸವರಾಜ ಬೊಮ್ಮಾಯಿ
ಶಿಗ್ಗಾವಿಯಲ್ಲಿ ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಛೆ ಇಲ್ಲ. ಪ್ರಸ್ತಾವವನ್ನೂ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದ್ದು, ಆ ಸಭೆಯಲ್ಲಿ ನಾನು ಹಾಜರಿರಲಿಲ್ಲ. ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ.

ಶಿಗ್ಗಾಂವಿ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಕಣಕ್ಕೆ?
ಕ್ಷೇತ್ರದ ಸಮೀಕ್ಷೆಗಳ ಆಧಾರದ ಮೇಲೆ ಪಕ್ಷದ ನಾಯಕರು ಭರತ್ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದು, ಅವರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

