Shakti scheme

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಬಸ್ ಪಾಸ್ ಬೇಡ; ಶಕ್ತಿ ಕಾರ್ಡ್ ವಿತರಿಸಲು ಸರ್ಕಾರ ಚಿಂತನೆ!
ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಯೋಜನೆ ಲಭಿಸುವಂತೆ ಮಾಡಲು ಸರ್ಕಾರ ಮುಂದಾಗಿದ್ದು, ಶಕ್ತಿ ಕಾರ್ಡ್ ಗಳ ವಿತರಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಶಕ್ತಿ ಯೋಜನೆ: ಬಸ್ ನಲ್ಲಿ ಬಿಎಂಟಿಸಿ ಎಂಡಿ ಸತ್ಯವತಿ ರೌಂಡ್ಸ್, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆಯಡಿಯಲ್ಲಿ ನಿರ್ವಾಹಕರು ಮಹಿಳೆಯರಿಕೆ ಟಿಕೆಟ್ ವಿತರಿಸುವ, ಮಹಿಳಾ ಪ್ರಯಾಣಿಕರ ಜೊತೆ ವರ್ತನೆ ಸೇರಿದಂತೆ ವಿವಿಧ ಅಂಶಘಳ ಬಗ್ಗೆ ನಿಗಮದ ವ್ಯವಸ್ಥಾಪ ನಿರ್ದೇಶಕಿ ಜಿ.ಸತ್ಯವತಿ ಅವರು ಖುದ್ದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಮೂಲಕ ಪರಿಶೀಲನೆ ನಡೆಸಿದರು.

ಶಕ್ತಿ ಯೋಜನೆ: ಜೂನ್ 18 ರಂದು ಬೆಂಗಳೂರಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ವೆಚ್ಚ 14 ಕೋಟಿ ರೂ.!
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವ ಶಕ್ತಿ ಯೋಜನೆಯಲ್ಲಿ ಜೂನ್ 18 ರಂದು ಟಿಕೆಟ್ ವೆಚ್ಚ 13.99 ಕೋಟಿ ರೂಪಾಯಿಗಳ ಹೊಸ ದಾಖಲೆ ಬರೆದಿದೆ. ಜೂನ್ 17 ರಂದು 12.88 ಕೋಟಿ ರೂ. ಮತ್ತು ಜೂನ್ 16 ರಂದು 12.45 ಕೋಟಿ ರೂ. ಆಗಿತ್ತು.
ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಸೀಟ್ ಸಿಗದೇ ಪುರುಷರ ಪರದಾಟ, ಬಸ್ ಬಾಗಿಲು-ಸರಳು ಮುರಿದು ಹರ ಸಾಹಸ
ರಾಜ್ಯದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಅಂದರೆ ಮಹಿಳೆಯರ ಉಚಿತ ಬಸ್ ಪ್ರಯಾಣದ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ರಾಜ್ಯಾದ್ಯಂತ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಸೇವೆ ವಂಚಿತ ಈ ಬುಡಕಟ್ಟು ಹಳ್ಳಿಗಳಿಗೆ 'ಶಕ್ತಿ ಯೋಜನೆ'ಯ ಪ್ರಯೋಜನವೇ ಸಿಗುತ್ತಿಲ್ಲ!
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಳಗಿನ ಗ್ರಾಮಗಳಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇವೆಗಳನ್ನು ಹೊಂದಿಲ್ಲದ ಕಾರಣ ಹಲವಾರು ಬುಡಕಟ್ಟು ಪ್ರದೇಶಗಳ ನಿವಾಸಿಗಳು ಈ ಪ್ರಯೋಜನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಶಕ್ತಿ ಯೋಜನೆ: ಮೇಲೆಯೇ ಬಸ್ ಹತ್ತಿಸಲು ಯತ್ನ, ಚಾಲಕನ ಅನಾಗರೀಕ ವರ್ತನೆಗೆ ಮಹಿಳೆಯರ ಹಿಡಿಶಾಪ!
ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ `ಶಕ್ತಿಯೋಜನೆ’ ಜಾರಿಯಾಗಿದ್ದು, ಮಹಿಳೆಯರು ರಾಜ್ಯದ್ಯಾಂತ ಉಚಿತ ಪ್ರಯಾಣ ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ.

ಶಕ್ತಿ ಯೋಜನೆ: ಈಗ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮಾತ್ರವಲ್ಲದೆ ಪುರುಷ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಳ!
ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದ ನಂತರ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಈ ಯೋಜನೆಯು ಮಹಿಳೆಯರಿಗೆ ಅನುಕೂಲಕರವಾಗಿದೆ.

ಶಕ್ತಿ ಯೋಜನೆಗೆ ಆಟೋರಿಕ್ಷಾ ಚಾಲಕರ ವಿರೋಧ!
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಬೆಳಗಾವಿಯ ಆಟೋರಿಕ್ಷಾಗಳ ಮಾಲೀಕರು ಹಾಗೂ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆ: ಆರ್ಥಿಕವಾಗಿ ಸದೃಢರಾಗಿರುವ ಮಹಿಳೆಯರಿಂದ ಟಿಕೆಟ್ ಖರೀದಿ, ಇತರರಿಗೆ ಮಾದರಿ!
ಕೊಟ್ಟ ಮಾತಿನಂತೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

