selfie

ಸಕಲೇಶಪುರ: ಹೇಮಾವತಿ ನದಿ ಸಮೀಪ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದ ನವದಂಪತಿಗಳು ನೀರುಪಾಲು
ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ನದಿಯ ಸಮೀಪ ಸೆಲ್ಫಿ ಕ್ಲಿಕ್ಕಿಸಲು ಹೋದಾಗ ಜಾರಿ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.

ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ಬಿಕೋ ಎನ್ನುತ್ತಿದ್ದ ರಸ್ತೆಗಳು, ಸ್ಮಾರಕಗಳ ಮುಂದೆ ಸೆಲ್ಫೀ ತೆಗೆದುಕೊಂಡ ಜನತೆ
ಕೊರೋನಾ ವೈರಸ್'ನ್ನು ಮಟ್ಟ ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸದಾಕಾಲ ಜನರಿಂದ ಗಿಜುಗುಡುತ್ತಿದ್ದ ಮೈಸೂರಿನ ಬಹುತೇಕ ರಸ್ತೆಗಳು ಹಾಗೂ ಸ್ಮಾರಕಗಳು ಭಾನುವಾರ ಬಿಕೋ ಎನ್ನುತ್ತಿದ್ದವು.

ತೆಲಂಗಾಣ: ನಿವೃತ್ತ ಪೊಲೀಸ್ ಅಧಿಕಾರಿ ಕೊಂದು, ಸೆಲ್ಫೀ ತೆಗದುಕೊಂಡ ಆರೋಪಿ!
ನಿವೃತ್ತ ಪೊಲೀಸ ಅಧಿಕಾರಿಯನ್ನು ಹತ್ಯೆಗೈದು, ಮೃತದೇಹದ ಮುಂದೆ ನಿಂತು ಆರೋಪಿಯೊಬ್ಬ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ಸೆಲ್ಫೀ ತೆಗೆದುಕೊಳ್ಳುವ ವೇಳೆ ಬಾವಿಗೆ ಬಿದ್ದು ಮಹಿಳೆ ಸಾವು
ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಮಹಿಳೆಯೊಬ್ಬರು ಸೆಲ್ಫೀ ತೆಗೆದುಕೊಳ್ಳುವ ವೇಳೆ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಪಟ್ಟಾಭಿರಾಮದಲ್ಲಿ ಸೋಮವಾರ ನಡೆದಿದೆ.

ಟಾಯ್ಲೆಟ್'ನಲ್ಲಿ ವರ ಸೆಲ್ಫೀ ಕ್ಲಿಕ್ಕಿಸಿದರೆ ವಧುಗೆ ಸಿಗುತ್ತೆ ರೂ.51, 000!
ವಿವಾಹಕ್ಕೂ ಮುನ್ನ ಗಂಡು-ಹೆಣ್ಣು ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವುದು ಸಾಮಾನ್ಯ. ಆದರೆ, ಮದುವೆಗೂ ಮುನ್ನ ವರ ಟಾಯ್ಲೆಟ್ ನಲ್ಲಿ ಸೆಲ್ಫೀ ಕ್ಲಿಕ್ಕಿಸಿದರೆ, ವಧುವಿಗೆ ಸರ್ಕಾರದಿಂದ ರೂ.51,000 ಸಿಗಲಿದೆ.

ಡಾರ್ಜಿಲಿಂಗ್: ಸೆಲ್ಫಿ ಕ್ರೇಜ್ಗೆ ಪ್ರಾಣತೆತ್ತ ಪ್ರವಾಸಿಗ
ಸೆಲ್ಫಿ ಕ್ರೇಜ್ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಡಾರ್ಜಿಲಿಂಗ್ ಪ್ರವಾಸದಲ್ಲಿದ್ದ 53 ವರ್ಷದ ವ್ಯಕ್ತಿಯೊಬ್ಬ ಟಾಯ್ ಟ್ರೈನ್ ಮೇಲಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.

ವಿಶ್ವದ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ!
ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಾರ್ಕಳ: ನಿಟ್ಟೆ ಅರ್ಬಿ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋದ ಯುವಕ ನೀರುಪಾಲು
ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

ಭೀಕರ ದೃಶ್ಯ: ಚಾರ್ಮುಡಿ ಘಾಟ್ ನ 100 ಅಡಿ ಮೇಲಿನಿಂದ ಜಾರಿದ ಯುವಕ!
ಚಾರ್ಮುಡಿ ಘಾಟ್ ನ ಬೆಟ್ಟದ ಮೇಲೆ ಸೆಲ್ಫಿ ಹಿಡಿದುಕೊಳ್ಳಲು ಹೋದ ಯುವಕ 100 ಅಡಿ ಮೇಲಿನಿಂದ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

