school

ಜುಲೈನಿಂದ ಶಾಲೆ ತೆರೆಯುವ ಸರ್ಕಾರದ ನಿರ್ಧಾರಕ್ಕೆ ತಜ್ಞರ ವಿರೋಧ, ಪೋಷಕರಿಂದ ಆನ್ ಲೈನ್ ಅಭಿಯಾನ!
ರಾಜ್ಯದಲ್ಲಿ ಕೊರೋನಾ ಸೋಂಕು ಆತಂಕಕಾರಿಯಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕರು, ಶಿಕ್ಷಕರು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಜು.1ರಿಂದ ಶಾಲೆ ಆರಂಭಕ್ಕೆ ಸರ್ಕಾರ ಸಿದ್ಧತೆ: ಪೋಷಕರ ಜೊತೆಗಿನ ಸಭೆ ಬಳಿಕ ದಿನಾಂಕ ಪ್ರಕಟಕ್ಕೆ ಚಿಂತನೆ
ಕೊರೋನಾ ಕಾರಣ ಶಾಲೆಗಳನ್ನು ಆರಂಭಿಸಬಾಹದು ಎಂದು ರಾಷ್ಟ್ರೀಯ ಮಟ್ಟದಲ್ಲಿ ಪೋಷಕರು ಆಂದೋಲನೆ ನಡೆಸುತ್ತಿರುವ ನಡುವಲ್ಲೇ ಸರ್ಕಾರ ರಾಜ್ಯದಲ್ಲಿ ಶಾಲೆಗಳನ್ನು ಜುಲೈ 1ರಿಂದ ಆರಂಭಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ವಾಟ್ಸಪ್ ಸಂದೇಶ ನೋಡಿ ಕನ್ನಡ ಶಾಲೆ ಉಳಿವಿಗೆ ಆಗಮಿಸಿದ ಸಚಿವ ಸುರೇಶ್ ಕುಮಾರ್
ವಾಟ್ಸಪ್ ಸಂದೇಶ ನೋಡಿ ಶಾಲೆ ಉಳಿವಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶತಮಾನದ ಇತಿಹಾಸ ಇರುವ ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಶಾಲೆಗೆ ಇಂದು ಭೇಟಿ ನೀಡಿದರು.

ಆಗಸ್ಟ್ 1ಕ್ಕೆ ಶಾಲಾ-ಕಾಲೇಜು ಪುನರಾರಂಭ ಎಂಬ ಸುದ್ದಿ ಸತ್ಯವಲ್ಲ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಶಾಲಾ-ಕಾಲೇಜುಗಳು ಎಂದಿನಂತೆ ಜೂನ್ ನಲ್ಲಿ ಆರಂಭವಾಗುವುದಿಲ್ಲ, ಆಗಸ್ಟ್ ನಿಂದ ಪ್ರಾರಂಭವಾಗುತ್ತವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

6-9ನೇ ತರಗತಿ ಮಕ್ಕಳಿಗೆ ಕೊರೋನಾ ವೈರಸ್ ಬರುವುದಿಲ್ಲವೇ?: ಸರ್ಕಾರಕ್ಕೆ ಪೋಷಕರ ಪ್ರಶ್ನೆ
ದೇಶದಲ್ಲೇ ಕೊರೋನಾಗೆ ಮೊದಲ ಬಲಿ ನಮ್ಮ ರಾಜ್ಯದಲ್ಲಿ ಆಗಿರುವ ಹಿನ್ನೆಲೆಯಲ್ಲಿ ವೈರಸ್ ಕುರಿತು ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿ ಮಕ್ಕಳಿಗೆ ಮಾತ್ರ ರಜೆ ಘೋಷಣೆ ಮಾಡಿರುವುದು ಟೀಕೆಗಳಿಗೆ ಕಾರಣವಾಗಿದೆ.

ಮಕ್ಕಳ ಪರೀಕ್ಷೆ ಮುಗಿಸುವ ಆತುರದಲ್ಲಿ ಶಾಲೆಗಳು: ಸರ್ಕಾರದ ಆದೇಶ ಕುರಿತು ಪೋಷಕರಲ್ಲಿ ಆತಂಕ
ಕೊರೋನಾ ವೈರಸ್ ಹರಡುವ ಭೀತಿಯ ಪರಿಣಾಮ ಖಾಸಗಿ ಶಾಲೆಗಳು ಆತುರಾತುರವಾಗಿ ಪರೀಕ್ಷಗಳನ್ನು ಮುಗಿಸಿ ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳಿಸುವ ಆತುರದಲ್ಲಿವೆ.

ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳಿ: ಶಾಲೆಗಳಿಗೆ ಸಲಹೆ ನೀಡಿದ ಆರೋಗ್ಯ ಸಚಿವಾಲಯ
ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಹೆಜ್ಜೆ ಇಟ್ಟಿದ್ದು, 29 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳುವಂತೆ ದೇಶದಲ್ಲಿರುವ ಎಲ್ಲಾ ಶಾಲೆಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.

ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆ: ಶಿಕ್ಷಣ ಕ್ಷೇತ್ರಕ್ಕೆ ಏನೇನು ಯೋಜನೆಗಳಿವೆ, 'ಉಚಿತ ಸೈಕಲ್'ರದ್ದು?
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವುದು 2010ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಿ ಎಸ್ ಯಡಿಯೂರಪ್ಪನವರ ಮಹಾತ್ವಾಕಾಂಕ್ಷಿ ಯೋಜನೆಯಾಗಿತ್ತು. ಆದರೆ ಮುಂದಿನ ತಿಂಗಳು 5ರಂದು ಮಂಡನೆಯಾಗುತ್ತಿರುವ ಬಜೆಟ್ ನಲ್ಲಿ ಅದು ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರ್ಕಾರದ ಖಜಾನೆಯಲ್ಲಿ ಹಣಕಾಸು ಕೊರತೆ ಸಮಸ್ಯೆ ಉಂಟಾಗಿದೆ.

70 ವರ್ಷದ ಹಳೆಯ ಶಾಲೆ: 3 ವರ್ಷವಾದರೂ ದುರಸ್ತಿ ಕೆಲಸ ಅಪೂರ್ಣ ಭೂದಾನಿಯ ಮಗನಿಂದಲೇ ಅಡ್ಡಿ!
ಭೂದಾನಿಯ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ದುರಸ್ತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಪರಿಣಾಮ ಮಕ್ಕಳು ಬಿಸಲಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಘಟನೆ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಡೆದಿದೆ.

