SC

ಸಲಿಂಗಕಾಮ ಅಪರಾಧವಲ್ಲ, ಆದರೆ, ಸಲಿಂಗ ವಿವಾಹ ಸಲ್ಲದು- ಆರ್ ಎಸ್ ಎಸ್
ಸಲಿಂಗ ಕಾಮ ಅಪರಾಧವಲ್ಲ . ಆದರೆ, ಅಸ್ವಾಭಾವಿಕವಾದ ಸಲಿಂಗ ವಿವಾಹವನ್ನೂ ಬೆಂಬಲಿಸುವುದಿಲ್ಲ ಎಂದು ಆರ್ ಎಸ್ ಎಸ್ ಹೇಳಿದೆ.

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ
ಪಶ್ಚಿಮ ಬಂಗಾಳದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ 20 ಸಾವಿರ ಸ್ಥಳೀಯ ಸಂಸ್ಥೆಗಳ ಚುನಾವಣೆ ರದ್ದುಪಡಿಸುವಂತೆ ಸಿಪಿಐ ( ಎಂ) ಹಾಗೂ ಬಿಜೆಪಿ ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆ ಆಗಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಉಸಿರು ಬಂದಂತಾಗಿದೆ.

ಅಳ್ವಾರ್ ಸಾಮೂಹಿಕ ಹಲ್ಲೆ :ರಾಜಸ್ತಾನ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ತ್ತೀಚಿಗೆ ರಾಜಸ್ತಾನದ ಅಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಆಗಸ್ಚ್ 28 ರಂದು ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಶಬರಿಮಲೆ ದೇವಾಲಯ ವಿವಾದ : ಪುರುಷರಂತೆ ಮಹಿಳೆಯರಿಗೂ ಪೂಜೆಯ ಸಮಾನ ಅವಕಾಶ -ಸುಪ್ರೀಂಕೋರ್ಟ್
ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದೆ.ಪುರುಷರಂತೆ ಮಹಿಳೆರಿಗೂ ಸಮಾನವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ತೀರ್ಪು ಪ್ರಕಟಿಸಿದೆ.

ಪತ್ರಕರ್ತರು ನ್ಯಾಯಾಲಯದೊಳಗೆ ಮೊಬೈಲ್ ಕೊಂಡೊಯ್ಯಲು ಸುಪ್ರೀಂ ಅನುಮತಿ
ಮಾನ್ಯತೆ ಪಡೆದ ಅಥವಾ ಪಡೆಯದೆ ಇರುವ ಪತ್ರಕರ್ತರು ನ್ಯಾಯಾಲಯದೊಳಗೆ ಮೊಬೈಲ್ ಕೊಂಡೊಯ್ಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ. ಮೊಬೈಲ್ ಗಳನ್ನು ಸೈಲೆಂಟ್ ಮೊಡ್ ನಲ್ಲಿ ಇಡುವಂತೆ ಸೂಚನೆ ನೀಡಲಾಗಿದೆ.

ಬಹುಪತ್ನಿತ್ವ, ನಿಖಾ ಹಲಾಲ ಪ್ರಕರಣಗಳ ತ್ವರಿತ ವಿಚಾರಣೆ ಇಲ್ಲ: ಸುಪ್ರೀಂ ಕೋರ್ಟ್
ಬಹುಪತ್ನಿತ್ವ ಹಾಗೂ ನಿಖಾ ಹಲಾಲ ಪ್ರಕರಣಗಳ ತ್ವರಿತ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಗಲ್ಲು ತ್ವರಿತ ಹಾಗೂ ಸುರಕ್ಷಿತ ರೀತಿಯ ಮರಣದಂಡನೆ ಶಿಕ್ಷೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ
ಗಲ್ಲು ಹಾಕುವುದು ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವುದಕ್ಕೆ ಇರುವ ಸುರಕ್ಷಿತ ಹಾಗೂ ತ್ವರಿತ ರೀತಿಯ ವಿಧಾನ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಅಮರಾನಾಥ ಗುಹೆ ದೇವಾಲಯದಲ್ಲಿ ಯಾತ್ರಾರ್ಥಿಗಳನ್ನು ನಿರ್ಬಂಧಿಸುವ ಎನ್ ಜಿಟಿ ಆದೇಶ ಸುಪ್ರೀಂಕೋರ್ಟ್ ನಿಂದ ವಜಾ
ಅಮರಾನಾಥ ಗುಹೆ ದೇವಾಲಯದಲ್ಲಿ ನೈಸರ್ಗಿಕವಾಗಿ ರೂಪುಗೊಂಡಿರುವ ಪವಿತ್ರ ಮಹಾ ಶಿವಲಿಂಗ ಎದುರು ನಿಶಬ್ದ ಕಾಪಾಡಬೇಕು ಎಂದು ಎನ್ ಜಿಟಿ ನೀಡಿದ್ದ ವಿವಾದಾತ್ಮಕ ಆದೇಶವನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಎಸ್ಸಿ/ಎಸ್ಟಿ ಕಾಯ್ದೆ ಸಂಬಂಧ ಭಾರತ್ ಬಂದ್: ಭಾರತದಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 8 ಜನರ ಸಾವು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ದೇಶಾದ್ಯಂತ ವಿವಿಧ ದಲಿತ ಪರ...

