satellite

ಉಪಗ್ರಹ ಆಧಾರಿತ ಟೋಲ್ ಸಂಗ್ರಹಣೆ ಇನ್ನೂ ಕೆಲವು ವರ್ಷ ವಿಳಂಬ: NHAI
ಅಸ್ತಿತ್ವದಲ್ಲಿರುವ ಟೋಲ್ ಸಂಗ್ರಹ ಸೌಲಭ್ಯಕ್ಕೆ ಹೋಲಿಸಿದರೆ, GNSS-ಆಧಾರಿತ ವ್ಯವಸ್ಥೆಯು ಪ್ರಯಾಣಿಸಿದ ದೂರವನ್ನು ಆಧರಿಸಿ ಶುಲ್ಕವನ್ನು ಮಾತ್ರ ಸಂಗ್ರಹಿಸುತ್ತದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ FDI ನಿಯಮ ಸಡಿಲಿಕೆ; ಶೇ.100 ರಷ್ಟು ನೇರ ಬಂಡವಾಳ ಹೂಡಿಕೆಗೆ ಅವಕಾಶ
ಉಪಗ್ರಹಗಳ ಬಿಡಿಭಾಗಗಳನ್ನು ತಯಾರಿಸುವಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.

ಇಸ್ರೊದಿಂದ 'SSLV-D2' ಯಶಸ್ವಿ ಉಡಾವಣೆ: ಮೂರು ಉಪಗ್ರಹಗಳು ಕಕ್ಷೆಗೆ ಸೇರ್ಪಡೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಸಣ್ಣ ಉಪಗ್ರಹ ಉಡಾವಣಾ ವಾಹಕ-SSLV-D2ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಮೂರು ಉಪಗ್ರಹಗಳನ್ನು ನಿಖರ ಕಕ್ಷೆಗೆ ಸೇರಿಸಿದೆ.

ಇಸ್ರೊದ SSLV-D1/EOS-02 ಮಿಷನ್: ಮೊದಲ ಹಂತದ ಉಡಾವಣೆ ಪೂರ್ಣ, ಟರ್ಮಿನಲ್ ಹಂತದಲ್ಲಿ ಡೇಟಾ ನಷ್ಟ
ಇಸ್ರೊ ಸಂಸ್ಥೆಯ ಚೊಚ್ಚಲ ಸಣ್ಣ ಉಪಗ್ರಹ ಉಡಾವಣಾ ವಾಹಕ(SSLV) ಟರ್ಮಿನಲ್ ಹಂತದಲ್ಲಿ ಡೇಟಾ ಕಳೆದುಕೊಂಡಿದ್ದು ಅದಕ್ಕೆ ಮೊದಲು ಮೂರು ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ತೋರಿ ವಾಹಕದಿಂದ ಕಕ್ಷೆಗೆ ಬೇರ್ಪಟ್ಟಿತು ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.

ವರ್ಷಾಂತ್ಯದಲ್ಲಿ ನಭಕ್ಕೆ ನೆಗೆಯಲಿರುವ 'ಪುನೀತ್' ಉಪಗ್ರಹ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಸ್ರೊದಿಂದ EOS-02 ಮತ್ತು Azaadisat ಉಪಗ್ರಹಗಳ ಉಡಾವಣೆ
ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೊ ಸಂಸ್ಥೆ ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-02 (EOS-02)ವನ್ನು ಎಸ್ ಎಸ್ ಎಲ್ ವಿ-ಡಿ1 ಉಡಾವಣಾ ವಾಹಕ ಮೂಲಕ ಉಡಾಯಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳು ನಿರ್ಮಿಸಿರುವ ಆಜಾದಿ ಸ್ಯಾಟ್ ಸ್ಯಾಟಲೈಟ್ ನ್ನು ಕೂಡ ಉಡಾಯಿಸಿದೆ.

ಇಒಎಸ್-03 ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಜಿಎಸ್ ಎಲ್ ವಿ ಎಫ್-10 ವಿಫಲ, ಇಸ್ರೊ ಉಡಾವಣೆಗೆ ಹಿನ್ನಡೆ
ಭಾರತವು ತನ್ನ ಅತ್ಯಾಧುನಿಕ ಭೂಮಿ ವೀಕ್ಷಣಾ ಉಪಗ್ರಹ ಇಒಎಸ್-03ಯನ್ನು ಹೊತ್ತೊಯ್ದ ಜಿಎಸ್ ಎಲ್ ವಿ-ಎಫ್ 10 ಗುರುವಾರ ನಸುಕಿನ ಜಾವ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಂಡಿದೆಯಾದರೂ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ.

ಇಸ್ರೊದಿಂದ ಮತ್ತೊಂದು ಉಪಗ್ರಹ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ಇಒಎಸ್-03 ನ್ನು ಹೊತ್ತೊಯ್ಯಲಿದೆ ಜಿಎಸ್ ಎಲ್ ವಿ-ಎಫ್ 10
ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03ಯನ್ನು ನಾಳೆ(ಆ.12)ಬೆಳಗ್ಗೆ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾಯಿಸಲಿದೆ. ಉಡಾವಣೆಗೆ 26 ಗಂಟೆಗಳ ಕ್ಷಣಗಣನೆ ಇಂದು ಬುಧವಾರ ನಸುಕಿನ ಜಾವ 3.43 ಕ್ಕೆ ಆರಂಭವಾಯಿತು.

ಪೂರ್ಣ ಕಾರ್ಯಕ್ಕೆ ಮರಳಿದ ಇಸ್ರೋ: ಆಗಸ್ಟ್ 12 ರಂದು ಜಿಯೋ ಇಮೇಜಿಂಗ್ ಉಪಗ್ರಹ ಉಡಾವಣೆಗೆ ಯೋಜನೆ
ಆಗಸ್ಟ್ 12 ರಂದು ಜಿಎಸ್ಎಲ್ ವಿ-ಎಫ್ 10 ರಾಕೆಟ್ ನಿಂದ ಜಿಯೋ ಇಮೇಜಿಂಗ್ ಉಪಗ್ರಹ ಜಿಸ್ಯಾಟ್-1 ಉಡಾವಣೆ ಮಾಡಲು ಯೋಜನೆ ರೂಪಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಪೂರ್ಣವಾಗಿ ಉಡಾವಣಾ ಚಟುವಟಿಕೆಗೆ ಮರಳುತ್ತಿದೆ.

