Santro Ravi

ಸ್ಯಾಂಟ್ರೋ ರವಿಯ ತನಿಖೆ ಮಾಡುತ್ತೇವೆಂಬ ಸಿಎಂ ಹೇಳಿಕೆ ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ: ಕಾಂಗ್ರೆಸ್
ವಂಚನೆ, ಅತ್ಯಾಚಾರ, ವೇಶ್ಯವಾಟಿಕೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣ ಕುರಿತು ತನಿಖೆ ಮಾಡುತ್ತೇವೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಸದಾರಮೆ ನಾಟಕದ ಡೈಲಾಗ್ ಇದ್ದಂತಿದೆ ಎಂದು ರಾಜ್ಯ ಕಾಂಗ್ರೆಸ್ ಬುಧವಾರ ವ್ಯಂಗ್ಯವಾಡಿದೆ.

ಹೈ -ಟೆಕ್ ಪಿಂಪ್ 'ಸ್ಯಾಂಟ್ರೋ ರವಿ' ಪರವಾಗಿ ಮಹಿಳೆಯ ವಿರುದ್ಧ ಸುಳ್ಳು ಕೇಸ್ : ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಅಮಾನತು
ಈ ಹಿಂದೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸ್ಯಾಂಟ್ರೋ ರವಿ ಪರವಾಗಿ ಕೆಲಸ ಮಾಡಿದ್ದ ಆರೋಪದ ಮೇಲೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

'ಸ್ಯಾಂಟ್ರೋ ರವಿ' ಬಂಧನಕ್ಕೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ: ಎಡಿಜಿಪಿ
ಅತ್ಯಾಚಾರ ಮತ್ತಿತರ ಆರೋಪ ಎದುರಿಸುತ್ತಿರುವ 'ಸ್ಯಾಂಟ್ರೋ' ರವಿ ಬಂಧನಕ್ಕೆ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

' ಸ್ಯಾಂಟ್ರೊ ರವಿ'ಯ ವಹಿವಾಟುಗಳೆಲ್ಲ ನಡೆಯುತ್ತಿದ್ದುದು ಕುಮಾರ ಕೃಪ ಗೆಸ್ಟ್ ಹೌಸ್ ನಿಂದ: ಕೆಎಸ್ ಟಿಡಿಸಿಯ ಮಾಜಿ ಅಧಿಕಾರಿಯ ಕೃಪಾ ಕಟಾಕ್ಷ!
ರಾಜ್ಯ ರಾಜಕೀಯದಲ್ಲಿ 'ಸ್ಯಾಂಟ್ರೋ ರವಿ'ಯ ಕರ್ಮಕಾಂಡ ಸದ್ದು, ಗದ್ದಲವೆಬ್ಬಿಸಿದೆ. ಸರ್ಕಾರದ ಮೂಗಿನ ನೇರಕ್ಕೆ ಸ್ಯಾಂಟ್ರೋ ರವಿ ವಿಧಾನ ಸೌಧ ಹತ್ತಿರವಿರುವ ಕುಮಾರ ಕೃಪ ಗೆಸ್ಟ್ ಹೌಸ್ ನ ಕೋಣೆಯಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾದರೆ ಈಗ ಏಳುತ್ತಿರುವ ಪ್ರಶ್ನೆ ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ಸರಿಸುಮಾರು ಶಾಶ್ವತವಾಗಿ ಸ್ಯ

ಸ್ಯಾಂಟ್ರೋ ರವಿ ಸರ್ಕಾರದ 'ಚೀಫ್ ಬ್ರೋಕರ್': ಕಾಂಗ್ರೆಸ್
ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ದಾಳಿ ಮುಂದುವರಿಸಿದ್ದು, ‘ಸ್ಯಾಂತ್ರೋ’ ರವಿ ವಿರುದ್ಧದ ಆರೋಪಗಳ ಕುರಿತು ಪೊಲೀಸರು ಸೂಕ್ತವಾಗಿ ತನಿಖೆ ನಡೆಸುತ್ತಾರೆಂಯೇ ಎಂದು ಪ್ರಶ್ನಿಸಿವೆ.

ಶೀಘ್ರವೇ ಸ್ಯಾಂಟ್ರೋ ರವಿ ಬಂಧನ, ದಾಖಲಾಗಿರುವ ಪ್ರಕರಣಗಳ ಬಗ್ಗೆ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಆತನ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಸದ್ಯ ಸ್ಯಾಂಟ್ರೋ ರವಿ ಹಿಂಬಾಲಕರ ವಿಚಾರಣೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸ್ಯಾಂಟ್ರೋ ರವಿಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ, ಸ್ಯಾಂಟ್ರೋ ರವಿ ದಂಧೆ ಕಾಂಗ್ರೆಸ್ ಅಧಿಕಾರದಲ್ಲಿಯೇ ನಡೆದಿರುವುದು : ಸಿಎಂ ಬೊಮ್ಮಾಯಿ
ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕುಮಾರಕೃಪಾ, ಬಾಲಬ್ರೂಯಿ ಅತಿಥಿ ಗೃಹಗಳೇ 'ಸ್ಯಾಂಟ್ರೋ ರವಿ' ಅಡ್ಡ!? ರಾತ್ರೋ ರಾತ್ರಿ ಪ್ರವೇಶ ನಿರ್ಬಂಧಿಸಿದ ಸರ್ಕಾರ!
ರಾಜಕಾರಣಿಗಳು ಮತ್ತು ಫಿಕ್ಸರ್ ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ.

ಸ್ಯಾಂಟ್ರೋ ರವಿ ವಿರುದ್ಧ ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ- ಯಡಿಯೂರಪ್ಪ
ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಮಗ್ರ ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

