Samyukt Kisan Morcha

ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದ ರೈತ ಸಂಘಟನೆಗಳು; ಮೇ.27ರಂದು ಮುಷ್ಕರಕ್ಕೆ ಕರೆ
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ CACP, ಖಾರೀಫ್ ಮತ್ತು ರಬಿ ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ MSP ಶಿಫಾರಸು ಮಾಡುವ ತಜ್ಞ ಸಲಹಾ ಸಂಸ್ಥೆಯಾಗಿದೆ.

ಲೋಕಸಭೆ ಚುನಾವಣೆ: ಬಿಜೆಪಿ ವಿರುದ್ಧ ಪಂಜಾಬ್‌ನ ಎಲ್ಲ ಗ್ರಾಮಗಳಲ್ಲಿ ರೈತ ಸಂಘಟನೆ ಪೋಸ್ಟರ್ ಅಭಿಯಾನ
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈತ ಸಂಘಗಳ ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪಂಜಾಬ್‌ನಾದ್ಯಂತ ಎಲ್ಲ ಗ್ರಾಮಗಳಲ್ಲಿ ಪ್ರಶ್ನಾವಳಿಗಳೊಂದಿಗೆ ಪೋಸ್ಟರ್‌ಗಳು ಮತ್ತು ಕರಪತ್ರಗಳನ್ನು ವಿನ್ಯಾಸಗೊಳಿಸಿ ಹಾಕುತ್ತಿದೆ.
ಯಾವುದೂ ಹೊಸ ಬೇಡಿಕೆಯಲ್ಲ, ರೈತರ ಮೇಲೆ ಸರ್ಕಾರದ ದಾಳಿ ನಾಚಿಕೆಗೇಡು: ಪ್ರಧಾನಿಗೆ SKW ಪತ್ರ
ರೈತರು ಹಾಲಿ ಇಡುತ್ತಿರುವ ಯಾವುದೂ ಹೊಸ ಬೇಡಿಕೆಗಳಲ್ಲ.. ಈ ಹಿಂದೆ ಸರ್ಕಾರ ಈಡೇರಿಸುವ ಭರವಸೆ ನೀಡಿ ಅದನ್ನು ಮಾಡಿಲ್ಲದಿರುವುದರಿಂದಲೇ ರೈತರ ಮತ್ತೆ ಬೀದಿಗಿಳಿದಿದ್ದು, ಧರಣಿ ನಿರತ ರೈತರ ಮೇಲಿನ ಮೋದಿ ಸರ್ಕಾರದ ದಾಳಿ ನಾಚಿಕೆಗೇಡು ಎಂದು ರೈತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರೈತರ ಪ್ರತಿಭಟನೆ: ಸಂಸತ್ ಗೆ ನ.29 ರ ಟ್ರ್ಯಾಕ್ಟರ್ ಜಾಥ ರದ್ದುಗೊಳಿಸಿದ ಎಸ್ ಕೆಎಂ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಕೃಷಿ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚ ನ.29 ರಂದು ನಿಗದಿಪಡಿಸಿದ್ದ ಸಂಸತ್ ಗೆ ಟ್ರ್ಯಾಕ್ಟರ್ ಜಾಥವನ್ನು ರದ್ದುಗೊಳಿಸಿದೆ.

'ನಿಜಕ್ಕೂ ಅಮಾನವೀಯ'; ಸಿಂಘು ಗಡಿ ಕೊಲೆಗೂ ರೈತರಿಗೂ ಸಂಬಂಧವಿಲ್ಲ: ಸಂಯುಕ್ತ ಕಿಸಾನ್ ಮೋರ್ಚಾ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಿಂಘು ಗಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರೈತ ಪರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯಿಸಿದೆ.

ಸಂಸತ್ತಿನಲ್ಲಿ ರೈತರ ಬೇಡಿಕೆ ವಿಷಯ ಮುನ್ನೆಲೆಗೆ ತನ್ನಿ: ವಿರೋಧ ಪಕ್ಷಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯ
ಮುಂಬರುವ ಮುಂಗಾರು ಅಧಿವೇಶನದಲ್ಲಿ ಇತರ ಯಾವುದೇ ವಿಷಯಗಳ ಚರ್ಚೆಗೂ ಮುನ್ನ ನೂತನ ಮೂರು ಕೃಷಿ ಕಾಯ್ದೆ ಮತ್ತು ಎಂಎಸ್ಪಿಗಳ ಕುರಿತ ರೈತರ ಬೇಡಿಕೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ವಿರೋಧ ಪಕ್ಷಗಳು ಒತ್ತಡ ಹೇರುವಂತೆ ಒತ್ತಾಯಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೇಳಿದೆ.

ಪ್ರತಿಭಟನಾ ಮೆರವಣಿಗೆಗಾಗಿ ರೈತರ ವಿರುದ್ಧದ ಕೇಸ್ ಹಿಂಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯ
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಹೋರಾಟದ ಅಂಗವಾಗಿ ಶನಿವಾರ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ರೈತರ ಮೇಲೆ ದಾಖಲಾಗಿರುವ ಕೇಸ್ ಗಳನ್ನು ವಾಪಸ್ ಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಒತ್ತಾಯಿಸಿದೆ.

