Sambhal

ನ್ಯಾಯಾಂಗ ಸಮಿತಿ ಸದಸ್ಯರು ಸಂಭಾಲ್ ಜಾಮಾ ಮಸೀದಿ ಹಿಂಸಾಚಾರ: ನ್ಯಾಯಾಂಗ ಸಮಿತಿ ಸದಸ್ಯರಿಂದ ತಪಾಸಣೆ
ಸಮಿತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡಿ ಘಟನೆಯ ಕುರಿತು ನಿವಾಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಸಮಿತಿಯೊಂದಿಗೆ ಭದ್ರತಾ ಸಿಬ್ಬಂದಿ ಇದ್ದರು. ಆದಾಗ್ಯೂ, ಬೆಳಗ್ಗೆ ಭೇಟಿಯ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಆಯೋಗದ ಸದಸ್ಯರು ಪ್ರತಿಕ್ರಿಯಿಸಲಿಲ್ಲ.

Jama Masjid Row: ಡಿಸೆಂಬರ್ 10ರವರೆಗೆ ಸಂಭಾಲ್ ಗೆ ಹೊರಗಿನವರಿಗೆ ಪ್ರವೇಶ ನಿಷೇಧ!
ಡಿಸೆಂಬರ್ 10 ರವರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲೆಯ ಗಡಿಯನ್ನು ಪ್ರವೇಶಿಸುವಂತಿಲ್ಲ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಹೇಳಿಕೆ ನೀಡಿದ್ದಾರೆ.

Sambhal mosque row: ಮಸೀದಿ ಸಮೀಕ್ಷೆ ಕುರಿತ ಟ್ರಯಲ್ ಕೋರ್ಟ್ ವಿಚಾರಣೆಗೆ 'ಸುಪ್ರೀಂ' ತಡೆ; ಶಾಂತಿ ಕಾಪಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ
ಸರ್ವೆ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಪಟ್ಟಿ ಮಾಡುವವರೆಗೆ ಸಂಭಾಲ್ ಜಾಮಾ ಮಸೀದಿ ವಿರುದ್ಧದ ಮೊಕದ್ದಮೆಯನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

Sambhal mosque row: 10 ದಿನಗಳಲ್ಲಿ ಸಮೀಕ್ಷಾ ವರದಿ ಸಲ್ಲಿಕೆಗೆ ಉತ್ತರ ಪ್ರದೇಶ ಕೋರ್ಟ್ ಆದೇಶ, ವಿಚಾರಣೆ ಜನವರಿ 8ಕ್ಕೆ ಮುಂದೂಡಿಕೆ
ಸಂಭಾಲ್ ನ ಜಾಮಾ ಮಸೀದಿಯನ್ನು ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆಗೆ ಉತ್ತರ ಪ್ರದೇಶ ಕೋರ್ಟ್ ಇಲ್ಲಿ ಸಮೀಕ್ಷೆಗೆ ಆದೇಶ ಸೂಚಿಸಿತ್ತು. ಇದಕ್ಕಾಗಿ ಸಮೀಕ್ಷಾ ತಂಡವನ್ನೂ ಕೂಡ ರಚನೆ ಮಾಡಿತ್ತು.

ಉತ್ತರ ಪ್ರದೇಶ: ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ; ಪೊಲೀಸರಿಂದ ಅಶ್ರುವಾಯು ಪ್ರಯೋಗ, 10 ಮಂದಿ ಬಂಧನ
ಸಮೀಕ್ಷಾ ತಂಡ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಸೀದಿಯ ಮುಖ್ಯಸ್ಥರು ಗುಂಪನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಪ್ರಯತ್ನಗಳು ವಿಫಲವಾದವು.

ಉತ್ತರ ಪ್ರದೇಶ: ಟ್ರಕ್ ಹರಿದು ಒಂದೇ ಕುಟುಂಬದ ನಾಲ್ವರು ಸಾವು, 5 ಮಂದಿಗೆ ಗಾಯ
ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ಆತನಿಗೂ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವು; ಉತ್ತರಾಖಂಡದಲ್ಲಿ ಇಬ್ಬರು ಮಾಲೀಕರ ಬಂಧನ
ಸಂಭಾಲ್‌ನ ಕೋಲ್ಡ್ ಸ್ಟೋರೇಜ್‌ನ ಕಟ್ಟಡದ ಛಾವಣಿ ಕುಸಿದು 14 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಇಬ್ಬರು ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕುಸಿದು ಬಿದ್ದ ಕೋಲ್ಡ್ ಸ್ಟೋರೇಜ್; 20ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ
ಸಂಭಾಲ್ ಜಿಲ್ಲೆಯಲ್ಲಿ ಗುರುವಾರ ಕೋಲ್ಡ್ ಸ್ಟೋರೇಜ್ ಕುಸಿದು ಬಿದ್ದಿದ್ದು, 20ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಈ ಘಟನೆಯು ಚಂದೌಸಿಯ ಮಾವಾಯಿ ಗ್ರಾಮದ ಕೋಲ್ಡ್ ಸ್ಟೋರೇಜ್‌ನಲ್ಲಿ ನಡೆದಿದೆ.

ಜೈ ಶ್ರೀ ರಾಮ್ ಎಂದು ಕೂಗುವವರೆಲ್ಲಾ ಸಾಧುಗಳಲ್ಲ: ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಉತ್ತರ ಪ್ರದೇಶ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಿಂದೂ ಧರ್ಮದ ಬಗ್ಗೆ ಅನಾವಶ್ಯಕ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ.

