Salman Khurshid

ನಾವು ಕೂಡ ಬಿಜೆಪಿಯವರಂತೆ ದೊಡ್ಡದಾಗಿ ಯೋಚಿಸಿದರೆ ಗೆಲುವು ಸಾಧ್ಯ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್
ಕಾಂಗ್ರೆಸ್ ಕೂಡ ಬಿಜೆಪಿಯಂತೆ ದೊಡ್ಡದಾದ ಯೋಚನೆ ಮಾಡಬೇಕಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಸಧ್ಯದ ತಯಾರಿ ಬಹಳ ಸಣ್ಣದಿದೆ ಹಾಗೂ ದುರ್ಬಲವಾಗಿದೆ. ಕಳೆದುಕೊಂಡದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ "ನಿರಾಶಾವಾದಿ ದೃಷ್ಟಿಕೋನವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ವಿವಾದಾತ್ಮಕ ಪುಸ್ತಕ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಆದೇಶ
ಸನಾತನ ಹಿಂದೂ ಧರ್ಮವನ್ನು ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲಖನೌ ಕೋರ್ಟ್ ಬುಧವಾರದಂದು ಆದೇಶ ನೀಡಿದೆ.

ಓದಬೇಡಿ, ಅಷ್ಟು ಸೂಕ್ಷ್ಮವಾದರೆ ನಾವೇನು ಮಾಡೋಕಾಗುತ್ತೆ?: ಖುರ್ಷಿದ್ ಪುಸ್ತಕ ನಿಷೇಧಕ್ಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್
ಜನರು ಈ ಮಟ್ಟದಲ್ಲಿ ಸೂಕ್ಷ್ಮವಾದರೆ ತಾನೇನು ಮಾಡುವುದಕ್ಕೆ ಸಾಧ್ಯ? ಎಂದು ದೆಹಲಿ ಹೈಕೋರ್ಟ್ ಪ್ರಶ್ನೆ ಮಾಡಿದ್ದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯೆಗೆ ಸಂಬಂಧಿಸಿದಂತೆ ಬರೆದಿದ್ದ ಪುಸ್ತಕದ ಮುದ್ರಣ, ಮಾರಾಟಕ್ಕೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಸಲ್ಮಾನ್ ಖುರ್ಷಿದ್ ಹಿಂದೂಗಳ ಕ್ಷಮೆ ಕೇಳಬೇಕು: ಅಖಾಡ ಪರಿಷತ್ ಬಿಗಿ ಪಟ್ಟು
ಹಿಂದುತ್ವವನ್ನು ಐಎಸ್ಐಎಸ್ ಹಾಗೂ ಬೊಕೊ ಹರಾಮ್ ನಂತಹ ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಸಲ್ಮಾನ್ ಖುರ್ಷಿದ್ ಹಿಂದೂಗಳ ಕ್ಷಮೆ ಕೋರಬೇಕು ಎಂದು ಅಖಾಡ ಪರಿಷತ್ ಬಿಗಿ ಪಟ್ಟು ಹಿಡಿದಿದೆ.

ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆಗೆ ಹೋಲಿಸಿದ ಖುರ್ಷಿದ್; ಗುಲಾಂ ನಬಿ ಆಜಾದ್ ಆಕ್ಷೇಪ
ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಹಾಗೂ ಬೊಕೊ ಹರಾಮ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಈಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸುಪ್ರೀಂ ಕೋರ್ಟಿನ ಅಯೋಧ್ಯೆ ತೀರ್ಪನ್ನು ನನ್ನ ಬಾಂಧವರಿಗೆ ವಿವರಿಸಬೇಕಾಗಿದ್ದು ನನ್ನ ಹೊಣೆಯಾಗಿತ್ತು: ಸಲ್ಮಾನ್ ಖುರ್ಷಿದ್
ಅಯೋಧ್ಯೆ ತೀರ್ಪು ಹೊರಬೀಳಲು 100 ವರ್ಷಗಳು ಬೇಕಾಗುತ್ತದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದರೆ ಅಯೋಧ್ಯೆ ತೀರ್ಪು ಹೊರಬಿದ್ದ ನಂತರ ಜನರು ತೀರ್ಪಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆಯೇ ಅದರ ಬಗ್ಗೆ ನಾನಾ ರೀತಿಯಲ್ಲಿ ಮಾತಾಡಿಕೊಂಡರು.

ಸುಧಾರಣೆ ತ್ಯಾಗದಿಂದ ಬರುತ್ತದೆಯೇ ಹೊರತು ಪ್ರಶ್ನಿಸುವುದರಿಂದ ಅಲ್ಲ: ಜಿ-23 ಗೆ ಸಲ್ಮಾನ್ ಖುರ್ಷಿದ್ ತರಾಟೆ
ಕಾಂಗ್ರೆಸ್ ನ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದ ಜಿ-23 ರ ನಾಯಕರ ವಿರುದ್ಧ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ನಾಯಕ ಸಲ್ಮಾನ್ ಖುರ್ಷಿದ್ ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್ ಲ್ಲಿ ನಾಯಕತ್ವದ ಬಿಕ್ಕಟ್ಟು ಇಲ್ಲ, ಸೋನಿಯಾ-ರಾಹುಲ್ ಗಾಂಧಿಯವರಿಗೆ ಬೆಂಬಲ ಇದೆ: ಸಲ್ಮಾನ್ ಖುರ್ಷಿದ್
ಬಿಹಾರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ನಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಹೆಚ್ಚಾಗಿರುವುದರ ಮಧ್ಯೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮತ್ತೆ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ನಾಯಕತ್ವದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.

ಉ.ಪ್ರ ಚುನಾವಣೆ ಸಿದ್ಧತೆಗೆ ಕಾಂಗ್ರೆಸ್ ವೇದಿಕೆ ಸಜ್ಜು: ಸಲ್ಮಾನ್ ಖುರ್ಷಿದ್ ಗೆ ಉಸ್ತುವಾರಿ, ಭಿನ್ನಮತೀಯರಿಗೆ ಕೊಕ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿಯಿದೆ. ಆಗಲೇ ಸಿದ್ದತೆ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು ಅದರ ನೇತೃತ್ವವನ್ನು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ವಹಿಸಿಕೊಳ್ಳಲಿದ್ದಾರೆ.

