S Jaishankar

'ಇನ್ನು ಕೈಕಟ್ಟಿ ಕುಳಿತಿರುವುದು ಅಸಾಧ್ಯ...': ಭಯೋತ್ಪಾದನೆ ಕುರಿತು ಪಾಕಿಸ್ತಾನಕ್ಕೆ ಎಸ್ ಜೈಶಂಕರ್ ನೇರ ಎಚ್ಚರಿಕೆ!
ಭಯೋತ್ಪಾದನೆಯನ್ನು ಉತ್ತೇಜಿಸುವ ವಿಷಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನಮ್ಮ ಬಿಡುಗಡೆಯಲ್ಲಿ ಪ್ರಧಾನಿ ಮೋದಿ ಖುದ್ದು ಭಾಗಿಯಾಗಿದ್ದರು' ಭಾರತಕ್ಕೆ ಮರಳಿದ ನೌಕಾಪಡೆ ಯೋಧನ ಮನದಾಳದ ಮಾತು...
ಕತಾರ್‌ನಿಂದ ಬಿಡುಗಡೆಯಾದ ಎಂಟು ಮಂದಿ ಭಾರತೀಯ ನೌಕಾಪಡೆಯ ಯೋಧರಲ್ಲಿ ಒಬ್ಬರಾದ ಸೌರಭ್ ವಶಿಷ್ಟ್ ಅವರು ಉತ್ತರಾಖಂಡದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕೂಡಿಕೊಂಡಿದ್ದಾರೆ.

ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲು: ಆಂಥೋನಿ ಬ್ಲಿಂಕೆನ್'ಗೆ ಕರೆ ಮಾಡಿ ಜೈಶಂಕರ್ ಕಳವಳ
ಕಡಲ ಭದ್ರತೆಯು ಭಾರತ ಮತ್ತು ಜಗತ್ತಿನಾದ್ಯಂತ ಕಾಳಜಿಯ ಪ್ರಮುಖ ವಿಷಯವಾಗಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವ ಆಂಥೋನಿ ಬ್ಲಿಂಕೆನ್'ಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಾಚೀನರ ಕ್ಲಬ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಗ್ಗೆ ಎಸ್ ಜೈಶಂಕರ್ ತೀವ್ರ ಟೀಕಾ ಪ್ರಹಾರ!
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಟೀಕಾ ಪ್ರಹಾರ ನಡೆಸಿದ್ದು, ಅದನ್ನು ಪ್ರಾಚೀನ ಕ್ಲಬ್ (ಓಲ್ಡ್ ಕ್ಲಬ್) ಎಂದು ಹೇಳಿದ್ದಾರೆ.

ನಿಜ್ಜರ್ ಹತ್ಯೆ: ತನಿಖೆಗೆ ನಿರಾಕರಿಸುತ್ತಿಲ್ಲ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ; ಭಾರತ ತಿರುಗೇಟು
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ್ದು, ಕೆನಡಾ ಆರೋಪ ಸಂಬಂಧ ಭಾರತ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

ಭಾರತ-ಕೆನಡಾ ಸಂಬಂಧ ಕಠಿಣ ಹಂತದಲ್ಲಿ ಸಾಗುತ್ತಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಕೆನಡಾದ ರಾಜತಾಂತ್ರಿಕ ಸಿಬ್ಬಂದಿ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಕಳವಳವನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಭಾರತವು ಸಮಾನತೆಯನ್ನು ಒದಗಿಸುವಂತೆ ಒತ್ತಾಯಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದಾರೆ.

ಅಂತಿಮ ಗಡುವಿನ ಹೊರತಾಗಿಯೂ ದೇಶದಲ್ಲೇ ಉಳಿದಿರುವ ಕೆನಡಾ ರಾಯಭಾರಿಗಳು..!: ಕಾರಣ?
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಉಭಯ ದೇಶಗಳೂ ಆಯಾ ದೇಶಗಳ ರಾಯಭಾರಿಗಳನ್ನು ದೇಶದಿಂದ ಉಚ್ಛಾಟನೆ ಮಾಡಿದ್ದವು. ಆದರೆ ಭಾರತದಲ್ಲಿರುವ ಕೆನಡಾ ರಾಯಭಾರಿಗಳು ಮಾತ್ರ ಇನ್ನೂ ದೇಶ ಬಿಟ್ಟು ತೆರಳಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್
ಭಾರತ-ಅಮೆರಿಕ ಸಂಬಂಧವು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ, ಚಂದ್ರಯಾನದಂತೆ ದ್ವಿಪಕ್ಷೀಯ ಸಂಬಂಧಗಳು ಚಂದ್ರನಷ್ಟು ಎತ್ತರಕ್ಕೆ ಮತ್ತು ಅದಕ್ಕಿಂತಲೂ ಮೀರಿ ಹೋಗುತ್ತದೆ ಎಂದರು.

ಭಾರತ-ಕೆನಡಾ ರಾಜತಾಂತ್ರಿಕ ಸಮಸ್ಯೆ: ಇಂದು ಸಚಿವ ಜೈಶಂಕರ್- ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಭೇಟಿ
ಖಲಿಸ್ತಾನಿ ಪ್ರತ್ಯೇಕತಾವಾದಿ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ನಡುವೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಂದು ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾಗಲಿದ್ದಾರೆ.

