Russia

ಸ್ಕೂಟರ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟ: ರಷ್ಯಾದ ಪರಮಾಣು ರಕ್ಷಣಾ ಪಡೆ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಸಾವು!
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿದೆ. ಇಗೊರ್ ಕಿರಿಲ್ಲೋವ್ ಅವರ ಸಹಾಯಕ ಕೂಡ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ವಿಮಾನ ಪತನ? ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಆರೋಪಗಳ ಸತ್ಯಾಸತ್ಯತೆ ಏನು?
ವಿಮಾನವು ಡಮಾಸ್ಕಸ್‌ನಿಂದ ಟೇಕಾಫ್ ಆಗಿದ್ದು, ನಂತರ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿದೆ. ಈಗ ಬಂಡುಕೋರರು ಅಸ್ಸಾದ್‌ಗೆ ಏನಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಉಕ್ರೇನ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿ ದಾಳಿ: ಅಮೆರಿಕ, ಬ್ರಿಟನ್‌ಗೆ ರಷ್ಯಾ ನೇರ ಎಚ್ಚರಿಕೆ!
ಉಕ್ರೇನ್‌ಗೆ ಬೆಂಬಲ ನೀಡುವ ಪಶ್ಚಿಮ ರಾಷ್ಟ್ರಗಳ "ಅಜಾಗರೂಕ" ನಿರ್ಧಾರಗಳು ಮತ್ತು ಕ್ರಮಗಳಿಗೆ ಮಾಸ್ಕೋ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡುತ್ತಾ, ರಷ್ಯಾ ಹೊಸ ಕ್ಷಿಪಣಿಯನ್ನು ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳ ಮೇಲೆ ಹಾರಿಸಲಾಗಿದೆ.

2025 ರಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಸಾಧ್ಯತೆ
ಎರಡೂ ಕಡೆಯವರು ಭೇಟಿಯ ಸಾಧ್ಯತೆಯನ್ನು ನೋಡುತ್ತಿದ್ದಾರೆ ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಯತ್ನಿಸುತ್ತೇವೆ: ಡೊನಾಲ್ಡ್ ಟ್ರಂಪ್
ನಮ್ಮ ಸರ್ಕಾರದ ಆಡಳಿತವು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ತರಲು ಸಹ ಕೆಲಸ ಮಾಡುತ್ತದೆ. ಮಧ್ಯಪ್ರಾಚ್ಯದಲ್ಲಿ ವಿಚಾರದ ಬಗ್ಗೆ ಗಮನಹರಿಸಿ ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸುವತ್ತ ಪ್ರಯತ್ನಿಸಲಿದ್ದೇವೆ.

ಭಾರತದ 19 ಕಂಪನಿಗಳನ್ನು ನಿರ್ಬಂಧಿಸಿದ ಅಮೆರಿಕ: ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಸಮಸ್ಯೆಯನ್ನು ಪರಿಹರಿಸಲು ಭಾರತವು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಈ ಭಾರತೀಯ ಕಂಪನಿಗಳು ರಷ್ಯಾಕ್ಕೆ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಸರಬರಾಜು ಮಾಡಿವೆ ಎಂದು ಆರೋಪಿಸಲಾಗಿದೆ.

ಭಾರತಕ್ಕೆ ಸಾಕಷ್ಟು ಮೌಲ್ಯವಿದೆ... ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಝೆಲೆನ್ಸ್ಕಿ
ರಷ್ಯಾ ಜೊತೆಗಿನ ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸುವ ತಾಕತ್ತು ಇರುವುದು ಪ್ರಧಾನಿ ಮೋದಿಗೆ ಮಾತ್ರ. ಇದು ಭಾರತಕ್ಕೂ ಬಹಳ ಮಹತ್ವದ್ದಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಸಂಘರ್ಷ ನಿಲ್ಲಿಸುವ ಪ್ರಧಾನಿ ಮೋದಿ ಪಾತ್ರದ ಕುರಿತಂತೆ ಪುನರುಚ್ಚರಿಸಿದ್ದಾರೆ.

ನಿಜ್ಜರ್ ಹತ್ಯೆ ಪ್ರಕರಣ: ಭಾರತವನ್ನು ರಷ್ಯಾಗೆ ಹೋಲಿಸಿದ ಕೆನಡಾ, ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೆ!
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಕೆನಡಾದ ಸರ್ರೆಯಲ್ಲಿನ ಸಿಖ್ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಿಜ್ಜಾರ್‌ನನ್ನು 2020ರಲ್ಲಿ ಭಾರತ ಸರ್ಕಾರ 'ಉಗ್ರ' ಎಂದು ಘೋಷಿಸಿತ್ತು.

ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಲಬುರಗಿಯ 3 ಯುವಕರು ತವರಿಗೆ ವಾಪಸ್..!
ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್ ಕಾಲೊನಿ ನಿವಾಸಿ ಸಮೀರ್ ಅಹ್ಮದ್, ಮಿಜಗುರಿ ಪ್ರದೇಶದ ಅಬ್ದುಲ್ ನಯೀಮ್ ವಾಪಸ್ ಆದವರು.

