Russia Ukraine Conflict

ರಷ್ಯಾ-ಉಕ್ರೇನ್ ಸಂಘರ್ಷ: ಕ್ಷಿಪಣಿ ದಾಳಿಯ ಬಳಿಕ ಉಕ್ರೇನ್‌ನ 2ನೇ ದೊಡ್ಡ ನಗರದಲ್ಲಿ ವಿದ್ಯುತ್ ಕಡಿತ, ಮೂವರು ಸಾವು
ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡ ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ, ಯುದ್ಧದಿಂದ ಹಾನಿಗೊಳಗಾಗಿರುವ ರಾಷ್ಟ್ರದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಗಂಟೆಗಳ ಕಾಲ ವಿದ್ಯುತ್ ಇಲ್ಲದಂತಾಯಿತು.

ರಷ್ಯಾ- ಉಕ್ರೇನ್ ಸಂಘರ್ಷ: ಪರಮಾಣು ಯುದ್ಧದ ಬೆದರಿಕೆ ಹೆಚ್ಚುತ್ತಿದೆ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಪರಮಾಣು ಯುದ್ಧದ ಬೆದರಿಕೆ ಹೆಚ್ಚುತ್ತಿದೆ. ಆದರೆ, ಮಾಸ್ಕೋ ಅಂತಹ 'ಹುಚ್ಚುತನಕ್ಕೆ ಮುಂದಾಗಿಲ್ಲ' ಮತ್ತು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದರು.

ಈ ವರ್ಷಾಂತ್ಯದೊಳಗೆ ರಷ್ಯಾ ತನ್ನ 1 ಲಕ್ಷ ಸೈನಿಕರನ್ನು ಕಳೆದುಕೊಳ್ಳಲಿದೆ: ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ವಿರುದ್ಧ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವುದರಿಂದ ಈ ವರ್ಷದ ಅಂತ್ಯದ ವೇಳೆಗೆ ರಷ್ಯಾ ತನ್ನ ಕನಿಷ್ಠ 1,00,000 ಸೈನಿಕರನ್ನು ಕಳೆದುಕೊಳ್ಳಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಖೆರ್ಸನ್‌ನಲ್ಲಿ ರಷ್ಯಾ 'ದೌರ್ಜನ್ಯ' ಎಸಗಿದೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಖೆರ್ಸನ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಮುನ್ನ ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿದಂತೆ ರಷ್ಯಾದ ಪಡೆಗಳು ಅದೇ ರೀತಿಯ ದುಷ್ಕೃತ್ಯಗಳನ್ನು ಅಲ್ಲಿಯೂ ಮಾಡಿದೆ ಎಂದಿದ್ದಾರೆ.

ಉಕ್ರೇನ್‌ನಲ್ಲಿ 100,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ, ಗಾಯಗೊಂಡಿದ್ದಾರೆ: ಅಮೆರಿಕದ ಜನರಲ್ ಮಾರ್ಕ್ ಮಿಲ್ಲಿ
ಉಕ್ರೇನ್‌ನಲ್ಲಿ 1,00,000 ಕ್ಕೂ ಹೆಚ್ಚು ರಷ್ಯಾದ ಮಿಲಿಟರಿ ಸಿಬ್ಬಂದಿ ಹತ್ಯೆಯಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಉಕ್ರೇನ್‌ನ ಪಡೆಗಳು ಕೂಡ ಇದೇ ರೀತಿಯ ಸಾವುನೋವುಗಳ್ನು ಅನುಭವಿಸಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಬುಧವಾರ ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್‌ನ ಬಖ್‌ಮುಟ್‌ನಲ್ಲಿ ಏಳು ನಾಗರಿಕರ ಹತ್ಯೆಯಾಗಿದೆ ಎಂದ ಗವರ್ನರ್
ರಷ್ಯಾದ ದಾಳಿಯಿಂದಾಗಿ ಪೂರ್ವ ಡೊನೆಟ್ಸ್ಕ್ ಪ್ರದೇಶದ ಉಕ್ರೇನ್ ನಗರದ ಬಖ್ಮುಟ್‌ನಲ್ಲಿ ಏಳು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಮಂಗಳವಾರ ತಿಳಿಸಿದ್ದಾರೆ.

ಉಕ್ರೇನ್ ಗಡಿಯ ಜನವಸತಿ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಜೆಟ್ ಪತನ, 13 ಮಂದಿ ಸಾವು
ರಷ್ಯಾದ ಸೇನಾ ವಿಮಾನವೊಂದು ಉಕ್ರೇನ್ ಗಡಿಯ ಸಮೀಪವಿರುವ ನೈರುತ್ಯ ರಷ್ಯಾದ ಪಟ್ಟಣವಾದ ಯೆಸ್ಕ್‌ನ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಪರಿಣಾಮವಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಮಾಸ್ಕೊದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಮಾರಣಾಂತಿಕ ದಾಳಿ; ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಕ್ರಿಯೆ ಎಂದ ವ್ಲಾಡಿಮಿರ್ ಪುಟಿನ್
ರಷ್ಯಾ ಸೋಮವಾರ ಉಕ್ರೇನ್‌ನ ಹಲವು ನಗರಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ರಾಜಧಾನಿ ಕೀವ್ ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕೀವ್ ಮೇಲೆ ನಡೆಸಿರುವ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ.

