robbery

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಮತ್ತೆ ದರೋಡೆ: ಕಾರು ಅಡ್ಡಗಟ್ಟಿ ದಂಪತಿಗಳ ಬೆದರಿಸಿ ಸುಲಿಗೆ!
ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯ ಬಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಕುಟುಂಬದವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಹಲ್ಲೆ, ಚಿನ್ನದ ಸರ ಕಸಿದು ದುಷ್ಕರ್ಮಿಗಳು ಪರಾರಿ
ಜೆಪಿ ನಗರ 7ನೇ ಹಂತದ ಬ್ರಿಗೇಡ್ ಮಿಲೇನಿಯಂ ರಸ್ತೆಯಲ್ಲಿ ಮಂಗಳವಾರ ಮುಂಜಾನೆ 54 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿರುವ ಕಳ್ಳರು ಆಟೋದಲ್ಲಿ ಪರಾರಿಯಾಗಿದ್ದಾರೆ. 5.15 ರಿಂದ 5.30 ರ ನಡುವೆ ಆರ್ ವಸಂತಾ ಎಂಬುವವರು ಬೆಳಗಿನ ವಾಕ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ವೃದ್ಧ ಮಹಿಳೆ ಕಟ್ಟಿ ಹಾಕಿ ದರೋಡೆ!
ಹಾಡಹಗಲೇ ಮನೆಗೆ ನುಗ್ಗಿ ವೃದ್ಧ ಮಹಿಳೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಹಣವನ್ನು ದರೋಡೆ ಮಾಡಿರುವ ಘಠನೆಯೊಂದು ಕೆಂಗೇರಿಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ: ಕೊಡಿಗೆಹಳ್ಳಿ ಪೋಲೀಸರಿಂದ ಗ್ವಾಲಿಯರ್ ನಲ್ಲಿ ನಾಲ್ವರ ಬಂಧನ
ಮಧ್ಯಪ್ರದೇಶ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಕೊಡಿಗೇಹಳ್ಳಿ ಪೊಲೀಸರು ಕಳೆದ ಗುರುವಾರ ದೇವಿನಗರದ ಲಕ್ಷ್ಮಿ ಬ್ಯಾಂಕರ್ ಮತ್ತು ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ದರೋಡೆ ಯತ್ನದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು: ಪಶ್ಚಿಮ ಬಂಗಾಳದ ಇಬ್ಬರ ಮೇಲೆ ದಾಳಿ ನಡೆಸಿದ ಗ್ಯಾಂಗ್, ದರೋಡೆ ಮಾಡಿ ಪರಾರಿ
ಪಶ್ಚಿಮ ಬಂಗಾಳದ 22 ವರ್ಷದ ಕಾರ್ಮಿಕರ ಗುತ್ತಿಗೆದಾರ ಮತ್ತು ಅವರ ಸ್ನೇಹಿತನ ಮೇಲೆ ಇತ್ತೀಚೆಗೆ ವರ್ತೂರು ಪ್ರದೇಶದಲ್ಲಿ ಒಂಬತ್ತು ಅಪರಿಚಿತ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದ್ದು, ದರೋಡೆ ಮಾಡಿದೆ.

ಸಾರ್ವಜನಿಕರ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಹೊಂಚು ಹಾಕಿದ್ದ 6 ಮಂದಿ ಬಂಧನ
ರಸ್ತೆಯಲ್ಲಿ ತೆರಳುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ, ಬೆಲೆ ಬಾಳುವ ವಸ್ತುಗಳನ್ನು ದೋಚಲು ಹೊಂಚು ಹಾಕುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಪೊಲೀಸರ ವೇಷದಲ್ಲಿ ಉದ್ಯಮಿಯೊಬ್ಬರ ಮನೆಯಿಂದ 1 ಕೋಟಿ ರೂ. ದರೋಡೆ ಮಾಡಿದ್ದ ಎಂಟು ಮಂದಿ ಬಂಧನ
ಎಚ್‌ಎಂಟಿ ಲೇಔಟ್‌ನಲ್ಲಿರುವ ಉದ್ಯಮಿಯೊಬ್ಬರ ನಿವಾಸವನ್ನು ಲೂಟಿ ಮಾಡಿದ್ದ ಎಂಟು ನಕಲಿ ಪೊಲೀಸರ ತಂಡವನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಿಸೆಂಬರ್ 4 ರಂದು ರಾತ್ರಿ 7.30ರ ಸುಮಾರಿಗೆ ಮನೋಹರ್ ಮನೆಗೆ ನುಗ್ಗಿದ್ದರು. ಪಾಲಿ ಫಿಲ್ಮ್ ಸಂಸ್ಥೆಯ ಮಾಲೀಕ ಮನೋಹರ್ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ.

ಮಡಿಕೇರಿ: ಕೇರಳ ಮೂಲದ ಇಬ್ಬರ ಕಾರನ್ನು ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ ಮಾಡಿದ ದುಷ್ಕರ್ಮಿಗಳು
ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ದೇವರಪುರದಲ್ಲಿ ಕೇರಳ ಮೂಲದ ಇಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು 50 ಲಕ್ಷ ರೂ. ದೋಚಿ, ಕಾರನ್ನು ಹೈಜಾಕ್ ಮಾಡಿದೆ.

ಬೆಂಗಳೂರು: ಪರಿಹಾರ ಕೇಳುವ ನೆಪದಲ್ಲಿ ಬಂದು ಮಹಿಳೆಯ ಕತ್ತು ಸೀಳಿ ಚಿನ್ನದ ಸರ ದರೋಡೆ!
ನಗರದ ಹೊರವಲಯದ ಆನೇಕಲ್‌ನಲ್ಲಿ ಸೋಮವಾರ ವಯೋವೃದ್ಧ ಮಹಿಳೆಯೊಬ್ಬರ ಕತ್ತು ಸೀಳಿ ಚಿನ್ನದ ಸರ ದೋಚಿರುವ ಘಟನೆ ನಡೆದಿದೆ.

