restrictions

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆ: ಇನ್ನಷ್ಟು ಅನ್'ಲಾಕ್ ಸುಳಿವು ನೀಡಿದ ಸಿಎಂ ಯಡಿಯೂರಪ್ಪ!
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿದ್ದು, ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದಲ್ಲಿ ಮುಂದಿನ ವಾರದಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಕೆ ಮಾಡುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ನೀಡಿದ್ದಾರೆ.

ಜೂನ್ 15ರ ವರೆಗೆ ನಿರ್ಬಂಧ ಮುಂದುವರಿಸಿದ ಮಹಾರಾಷ್ಟ್ರ ಸರ್ಕಾರ: ಪಾಸಿಟಿವ್ ದರ, ಆಕ್ಸಿಜನ್ ಬೆಡ್ ಲಭ್ಯತೆ ಆಧಾರದಲ್ಲಿ ಸಡಿಲಿಕೆ
ಜೂನ್ 15ರವರೆಗೆ ಲಾಕ್ ಡೌನ್ ರೀತಿಯ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ತಮಿಳುನಾಡು: ಮುಂದಿನ ಆದೇಶದವರೆಗೂ ಕೋವಿಡ್ ನಿರ್ಬಂಧ ವಿಸ್ತರಣೆ, ಮತ ಎಣಿಕೆ ದಿನ ಸಂಪೂರ್ಣ ಲಾಕ್ ಡೌನ್
ಏಪ್ರಿಲ್ 20ರಿಂದ ಜಾರಿಯಲ್ಲಿರುವ ಕೋವಿಡ್-19 ನಿರ್ಬಂಧಗಳನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದ್ದು, ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಮೇ 2 ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಲಾಗಿದೆ.

ಕೊರೋನಾ ಕರ್ಫ್ಯೂ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಜಿಲ್ಲಾಡಳಿತದ ಜವಾಬ್ದಾರಿ: ಸಿಎಂ ಯಡಿಯೂರಪ್ಪ ಆದೇಶ
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿತರಿದ್ದು ಕೊರೋನಾ ಎರಡನೇ ಅಲೆ ತೀವ್ರತೆಯನ್ನು ತಗ್ಗಿಸಲು ರಾಜ್ಯ ಸರ್ಕಾರ ಮೇ 12ರವರೆಗೆ ಕೊರೋನಾ ಕರ್ಫ್ಯೂವನ್ನು ಹೇರಿದೆ.

ಕಠಿಣ ಕೊರೋನಾ ಕರ್ಫ್ಯೂ: ಬಿಎಂಟಿಸಿಯಿಂದ ಅಗತ್ಯ ಸಾಮಾನ್ಯ ಸಾರಿಗೆ ಸೇವೆ
ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆ ಹಾಗೂ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ರಾಜ್ಯ ಸರ್ಕಾರ ಇಂದು ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ಕಠಿಣ ಕರ್ಫ್ಯೂವನ್ನು ಜಾರಿಗೊಳಿಸಿ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಸಾರಿಗೆ ಸೇವೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ

ಬೇಲದಕುಪ್ಪೆ ಮಹದೇಶ್ವರ ಜಾತ್ರೆ ಆಚರಣೆ, ಸಾರ್ವಜನಿಕರಿಗೆ ನಿರ್ಬಂಧ: ರೋಹಿಣಿ ಸಿಂಧೂರಿ ಆದೇಶ
ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಬೇಲದಕುಪ್ಪೆ ಮಹದೇಶ್ವರ ಜಾತ್ರೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕರ್ತಾರ್ಪುರ ಕಾರಿಡಾರ್: ಕೋವಿಡ್ ನಿಯಮಗಳ ಅನುಸಾರ ನಿರ್ಬಂಧ ಸಡಿಲಿಕೆ ಕುರಿತು ನಿರ್ಧಾರ- ಕೇಂದ್ರ ಸರ್ಕಾರ
ಕರ್ತಾರ್ಪುರ ಕಾರಿಡಾರ್'ನ್ನು ಪಾಕಿಸ್ತಾನ ಪುನರಾರಂಭ ಮಾಡಿದ್ದು, ಭಾರತೀಯ ಯಾತ್ರಾರ್ಥಿಗಳ ಪ್ರಯಾಣ ಕುರಿತು ಕೋವಿಡ್ ನಿಯಮಗಳ ಅನುಸಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋವಿಡ್-19 ಏರಿಕೆ ಹಿನ್ನೆಲೆ, ಭಕ್ತಾದಿಗಳ ಭೇಟಿಗೆ ಮುರುಘ ಮಠದಿಂದ ನಿರ್ಬಂಧ!
ಕೋವಿಡ್-19 ಏರಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿರುವ ಮುರುಘ ಮಠಕ್ಕೆ ಭಕ್ತಾದಿಗಳ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದ್ದಾರೆ.

ಕಣಿವೆ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಿರ್ಬಂಧ ತೆರವಿಗೆ ಯುರೋಪಿಯನ್ ಒಕ್ಕೂಟದ ನಿಯೋಗ ಕರೆ
ಜಮ್ಮು- ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿರುವ ಯುರೋಪಿಯನ್ ಒಕ್ಕೂಟದ ನಿಯೋಗ ತ್ವರಿತಗತಿಯಲ್ಲಿ ನಿರ್ಬಂಧ ತೆರವುಗೊಳಿಸಲು ಕರೆ ನೀಡಿದೆ.

