restriction

ಕೇರಳ- ಕರ್ನಾಟಕ ಗಡಿ ಬಂದ್: ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!
ಗರ್ಭಿಣಿ ಮಹಿಳೆಯಿದ್ದ ಅಂಬ್ಯುಲೆನ್ಸ್ ನ್ನು ಮಂಗಳೂರಿನತ್ತ ಬರಲು ಪೊಲೀಸರು ಬಿಡದ ಕಾರಣ ಬಿಹಾರದಿಂದ ವಲಸೆ ಬಂದಿದ್ದ ಗರ್ಭೀಣಿ ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಗಡಿಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ನಾಳೆಯಿಂದ ಲಾಕ್ ಡೌನ್ ಮತ್ತಷ್ಟು ಬಿಗಿ: ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ- ಮುಖ್ಯಮಂತ್ರಿ
ಕೊರೋನಾವೈರಸ್ ವಿರುದ್ಧದ ಸಮರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ.ಹಾಗಾಗಿ ನಾಳೆಯಿಂದ ಲಾಕ್ ಡೌನ್ ನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಇನ್ನೆಷ್ಟು ದಿನ ನಿರ್ಬಂಧ ಮುಂದುವರೆಯಲಿದೆ: ಕೇಂದ್ರಕ್ಕೆ ಸುಪ್ರೀಂಕೋರ್ಟ್
ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೆಷ್ಟು ದಿನ ನಿರ್ಬಂಧ ಮುಂದುವರೆಯಲಿದೆ. ನಿರ್ಬಂಧ ಮುಂದುವರೆಸಲು ಇನ್ನೆಷ್ಟು ದಿನ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.

ಕ್ಷಿಪ್ರಗತಿಯಲ್ಲಿ ಜಮ್ಮು-ಕಾಶ್ಮೀರದಲ್ಲಿನ ನಿರ್ಬಂಧ ತೆರವುಗೊಳಿಸಲು ಭಾರತಕ್ಕೆ ಅಮೆರಿಕಾ ಒತ್ತಾಯ
ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಕ್ಷಿಪ್ರಗತಿಯಲ್ಲಿ ತೆರವುಗೊಳಿಸುವಂತೆ ಭಾರತವನ್ನು ಅಮೆರಿಕಾ ಒತ್ತಾಯಿಸಿದೆ.

ಮಾಧ್ಯಮಗಳಿಗೆ ಸ್ವಯಂ ನಿರ್ಬಂಧ ವಿಧಿಸಿಕೊಂಡ ಜೆಡಿಎಸ್
ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಂದ ಜೆಡಿಎಸ್ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದು...

ಯು.ಎಸ್ ರಾಜತಾಂತ್ರಿಕರಿಗೆ ನಿರ್ಬಂಧಗಳನ್ನು ಪ್ರಕಟಿಸಿದ ಪಾಕಿಸ್ತಾನ
ಯು.ಎಸ್. ರಾಜತಾಂತ್ರಿಕ ಅಧಿಕಾರಿಗಳಿಗೆ ಪಾಕಿಸ್ತಾನ ನಿರ್ಬಂಧಗಳನ್ನು ಪ್ರಕಟಿಸಿದೆ.ದೇಶದೊಳಗೆ ಇಂದಿನಿಂದ ಎಲ್ಲಾ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಮುಕ್ತವಾಗಿ ಸಂಚರಿಸದಂತೆ ಪಾಕಿಸ್ತಾನ ವಿದೇಶಾಂಗ ಇಲಾಖೆ ನಿರ್ಬಂಧಗಳನ್ನು ವಿಧಿಸಿದೆ.

ಜಮ್ಮು-ಕಾಶ್ಮೀರ: ಪ್ರತಿಭಟನೆಗೆ ಪ್ರತ್ಯೇಕತಾವಾದಿಗಳ ಕರೆ- ಶ್ರೀನಗರದ ಹಲವೆಡೆ ನಿರ್ಬಂಧ
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಪ್ರತಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಅಧಿಕಾರಿಗಳು ಶ್ರೀನಗರದ ಹಲವೆಡೆ ಬುಧವಾರ ನಿರ್ಬಂಧ ಹೇರಿದ್ದಾರೆ...

ಜಮ್ಮು-ಕಾಶ್ಮೀರ: ಪ್ರತಿಭಟನೆಗೆ ಪ್ರತ್ಯೇಕತಾವಾದಿಗಳ ಕರೆ- ಶ್ರೀನಗರದ ಹಲವೆಡೆ ನಿರ್ಬಂಧ
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಪ್ರತಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಅಧಿಕಾರಿಗಳು ಶ್ರೀನಗರದ ಹಲವೆಡೆ ಶನಿವಾರ ನಿರ್ಬಂಧ ಹೇರಿದ್ದಾರೆಂದು ತಿಳಿದುಬಂದಿದೆ...

ಪಾಕಿಸ್ತಾನಕ್ಕೆ ತೆರಳುವ ಯಾತ್ರಿಕರ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ: ವಿದೇಶಾಂಗ ಸಚಿವಾಲಯ
ಪಾಕಿಸ್ತಾನಕ್ಕೆ ತೆರಳುವ ಯಾತ್ರಾರ್ಥಿಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದು ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ...

