rescued

ಚಾಮರಾಜನಗರದಲ್ಲಿ ಯಶಸ್ವಿ ಕಾರ್ಯಾಚರಣೆ: ಗಂಡು ಹುಲಿ ರಕ್ಷಣೆ; ಮರಿಗಳಿಗಾಗಿ ಮುಂದುವರಿದ ಶೋಧ
ಡಿಸೆಂಬರ್ 20ರಂದು ಗ್ರಾಮದ ಪ್ರಶಾಂತ್ ಎಂಬುವರ ತೋಟದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದವು. ಅಂದಿನಿಂದ ಅರಣ್ಯಾಧಿಕಾರಿಗಳು ಹುಲಿಗಳ ಸೆರೆಗೆ ಆನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವ ಯತ್ನ: ತಿಂಗಳ ಕಾರ್ಯಾಚರಣೆಯ ನಂತರ ಹುಲಿ ಮತ್ತು ಮೂರು ಮರಿಗಳ ರಕ್ಷಣೆ!
ಜಾನುವಾರುಗಳ ಮೇಲೆ ದಾಳಿ ನಡೆದ ಬಗ್ಗೆ ಹಲವಾರು ವರದಿಗಳ ನಂತರ ಪ್ರಾಣಿಗಳ ಮೇಲೆ ನಿಗಾ ಇಟ್ಟಿದ್ದ ಅರಣ್ಯ ಇಲಾಖೆಯು ಒಂದು ತಿಂಗಳಿನಿಂದ ಕಾರ್ಯಾಚರಣೆ ನಡೆಸಿತ್ತು.

ಚಾಕು ನುಂಗಿದ ನಾಗರ ಹಾವು; ಜೀರ್ಣವಾಗದೆ-ಹೊರಕ್ಕೂ ಹಾಕಲಾರದೇ ವಿಲವಿಲ ಒದ್ದಾಟ! Video
ಅಡುಗೆಮನೆಯೊಳಗಿನ ಕಿಟಕಿಯ ಬಳಿ ಚಾಕು ಇಡಲಾಗಿತ್ತು. ಚಾಕು ಹೊರಗಿ ಬಿದ್ದಿತ್ತು. ಬಳಿಕ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಸಮಯದ ಬಳಿಕ ಸ್ಥಳದಲ್ಲಿ ನೋಡಿದಾಗ ಚಾಕು ಇರಲಿಲ್ಲ.

ಕನ್ನೌಜ್ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಹಂತದ ಛಾವಣಿ ಕುಸಿತ; 28 ಜನರ ರಕ್ಷಣೆ, ಆರು ಮಂದಿಗೆ ಗಂಭೀರ ಗಾಯ
ಇಲ್ಲಿಯವರೆಗೂ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಇನ್ನೂ ಕೆಲ ಗಂಟೆಗಳಲ್ಲಿ ಅವಶೇಷಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತುಮಕೂರು: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ರಕ್ಷಣೆ
ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಯೊಂದರಲ್ಲಿ ಸಿಲುಕಿಕೊಂಡಿದ್ದಳು. ಸೋಮವಾರ ಆಕೆಯನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.

ನಿರ್ಜನ ಪ್ರದೇಶದಲ್ಲಿ ಅಳುವ ಶಬ್ಧ ಕೇಳಿ ಅದರತ್ತ ತೆರಳಿದ ಜನರಿಗೆ ಕಾದಿತ್ತು ಶಾಕ್!
ಶಬ್ಧವನ್ನು ಹುಡುಕಿ ಬಂದ ಜನರಿಗೆ ಕಣ್ಣಿಗೆ ಕಂಡಿದ್ದು ಗುಂಡಿಯೊಂದರಲ್ಲಿ ಜೀವಂತವಾಗಿ ಅರ್ಧ ಸಮಾಧಿ ಮಾಡಿದ್ದ ನವಜಾತ ಶಿಶು. ಅದನ್ನು ನೋಡಿದ ಜನರ ಎದೆ ಒಮ್ಮೆ ಝಲ್ ಎಂದಿದೆ.

ಕೇರಳ ಕರಾವಳಿಯಲ್ಲಿ ಸಮುದ್ರದ ಮಧ್ಯದಲ್ಲಿ ಸಿಲುಕಿದ್ದ 43 ಮೀನುಗಾರರ ರಕ್ಷಣೆ
ಕೊಯಿಲಾಂಡಿ ಮತ್ತು ಬೇಪೋರ್ ಬಂದರುಗಳಿಂದ ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿದ್ದ ಎರಡು ದೋಣಿಗಳು ಇಂಜಿನ್‌ಗಳು ಕೆಲಸ ಮಾಡದೇ ಸಮುದ್ರದಲ್ಲಿ ಮಧ್ಯದಲ್ಲಿ ಸಿಲುಕಿದ್ದವು.

ಕೇರಳ: ನದಿ ಮಧ್ಯದ ಬಂಡೆ ಮೇಲೆ ಸಿಲುಕಿದ್ದ ಮೈಸೂರಿನ ನಾಲ್ವರ ರಕ್ಷಣೆ!
ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ, ಕೆಲಸ ಅರಸಿ ಪಾಲಕ್ಕಾಡ್‌ಗೆ ಬಂದಿದ್ದ ಕರ್ನಾಟಕದ ಮೈಸೂರು ನಿವಾಸಿಗಳಾದ ನಾಲ್ವರು ಎಚ್ಚರಿಕೆ ಅರಿಯದೆ ನದಿಗೆ ಇಳಿದಿದ್ದು, ಏಕಾಏಕಿ ನೀರಿನ ಮಟ್ಟ ಹೆಚ್ಚಾದಾಗ ಸಿಕ್ಕಿಬಿದ್ದಿದ್ದಾರೆ.

ಮಂಗಳೂರು: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ!
ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರವಿಕುಮಾರ್, ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಬಸ್ಸಿನಲ್ಲಿ ಪುಲಿಕುಕ್ಕುಗೆ ತೆರಳಿದ್ದಾರೆ. ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಇಟ್ಟು ಆಯುಧದಿಂದ ಮಣಿಕಟ್ಟು ಕತ್ತರಿಸಿಕೊಂಡು ನದಿಗೆ ಹಾರಿದ್ದಾರೆ.

