report

ಶಾಲೆಗಳ ಪುನಾರಂಭಕ್ಕೆ ಕಸರತ್ತು; ವರದಿ ನೀಡುವಂತೆ ಸೂಚನೆ
ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತನೆ ನಡೆಸಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರ ಪ್ರಕಾರ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭ ಮಾಡುವ ಕುರಿತು ವರದಿ ನೀಡಲು ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದ್ದಾರೆ.

ಕೊವಿಡ್-19 ನಿಂದ 30.3 ಲಕ್ಷ ಕೋಟಿ ರೂ. ಆರ್ಥಿಕ ನಷ್ಟ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಹಾನಿ: ವರದಿ
ಮಹಾಮಾರಿ ಕೊರೋನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದ್ದು, ಭಾರತ ಬರೋಬ್ಬರಿ 30.3 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಇದು ಕೇಂದ್ರ ಸರ್ಕಾರ ಘೋಷಿಸಿದ ಕೊವಿಡ್-19 ಪರಿಹಾರ ಪ್ಯಾಕೇಜ್(20 ಲಕ್ಷ ಕೋಟಿ) ನ ಶೇ. 50ಕ್ಕಿಂತಲೂ ಹೆಚ್ಚು ಎಂದು ಎಸ್‌ಬಿಐ ಇಕೋವ್ರಾಪ್ ನ ಇತ್ತೀಚಿನ ವರದಿ ಹೇಳಿದೆ.

ಬೆಂಗಳೂರು: ಮೇ 4ರಿಂದ ಕಾಲೇಜು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಕೊರೊನಾ ವೈರಸ್ ಲಾಕ್‌ಡೌನ್ ಮೇ 17ರವರೆಗೆ ಮುಂದುವರಿಕೆಯಾಗಿದ್ದರೂ ಕೂಡಾ, ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಅಪಾಯದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ 'ಕಿಮ್ ಜಾಂಗ್’ ಉನ್: ವರದಿ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆರೋಗ್ಯ ಸ್ಥಿತಿ ಅಪಾಯದಲ್ಲಿದೆ ಎಂದು ತಿಳಿದುಬಂದಿದೆ.

ಕೋವಿಡ್ -19: ನ್ಯೂಯಾರ್ಕ್ ನಲ್ಲಿ 1 ಸಾವಿರ ಗಡಿ ಮೀರಿದ ಸಾವಿನ ಪ್ರಕರಣಗಳು
ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನ್ಯೂಯಾರ್ಕ್ ರಾಜ್ಯದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರ ಗಡಿಯನ್ನು ದಾಟಿದೆ.

ನಾಲ್ಕು ತಿಂಗಳಲ್ಲೇ ಅಧಿಕ, ಫೆಬ್ರವರಿಯಲ್ಲಿ ಶೇ, 7.78ಕ್ಕೆ ಏರಿಕೆಯಾದ ನಿರುದ್ಯೋಗ ಪ್ರಮಾಣ!
ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನವರಿ ತಿಂಗಳಲ್ಲಿ ಶೇ. 7. 16 ರಷ್ಟಿದ್ದ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 78ಕ್ಕೆ ಏರಿಕೆಯಾಗಿದೆ.

ಕೊರೋನಾ ಶಂಕೆ: ಉಡುಪಿಯಲ್ಲಿ ಪರೀಕ್ಷೆಗೊಳಪಟ್ಟ ಮೂವರಲ್ಲೂ ಪತ್ತೆಯಾಗಿಲ್ಲ ವೈರಸ್
ಕೆಲ ದಿನಗಳ ಹಿಂದಷ್ಟೇ ಚೀನಾದಿಂದ ಉಡುಪಿಗೆ ವಾಪಸ್ಸಾಗಿದ್ದ ಮೂವರು ವ್ಯಕ್ತಿಗಳಲ್ಲಿ ಶಂಕಿಸಲಾಗಿದ್ದ ಕೊರೋನಾ ವೈರಸ್, ಪರೀಕ್ಷೆ ಬಳಿಕ ಇದೀಗ ಮೂವಲರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

'ಗೋಲಿ ಮಾರೋ' ವಿವಾದ: ಅನುರಾಗ್ ಘೋಷಣೆ ಕುರಿತು ವರದಿ ಕೇಳಿದೆ ದೆಹಲಿ ಸಿಇಒ ಕಚೇರಿ
ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂಬ ಕೇಂದ್ರದ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರ ಹೇಳಿಕೆ ವಿವಾದ ಸೃಷ್ಟಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಘೋಷಣಾ ವಾಕ್ಯ ಸಂಬಂಧ ವರದಿ ಸಲ್ಲಿಸುವಂತೆ ವಾಯುವ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೆಹಲಿ ಸಿಇಒ ಕಚೇರಿ ಸೂಚನೆ ನೀಡಿದೆ.

ಪ್ರತಿಭಟನೆ ನಡುವೆ ವಿಕೇಂದ್ರಿಕೃತ ಆಂಧ್ರ ಅಭಿವೃದ್ಧಿ ವರದಿಗೆ ಜಗನ್ ಸಂಪುಟ ಅನುಮೋದನೆ
ವಿಕೇಂದ್ರಿಕೃತ ಆಂಧ್ರ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಎನ್ ರಾವ್ ಕಮಿಟಿ ಮತ್ತು ಬೊಸ್ಟನ್ ಸಲಹಾ ಗ್ರೂಪ್ ( ಬಿಸಿಜಿ) ವರದಿ ಪರಿಶೀಲನೆಗೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ವರದಿಗೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

