report

ರೈಲುಗಳತ್ತ ಕಲ್ಲುತೂರಾಟ ಮಾಡುವುದನ್ನು ಇನ್ನು ಮುಂದೆ ಸಾರ್ವಜನಿಕರು ಇಲಾಖೆಗೆ ವರದಿ ಮಾಡಬಹುದು: ಹೇಗೆ ಅಂದರೆ...
ಬೆಂಗಳೂರು ರೈಲ್ವೆ ವಿಭಾಗದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಹೆಬ್ಬಾಳ-ಬಾನಸವಾಡಿ, ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ ಹಾಗೂ ಚನ್ನಸಂದ್ರ-ತುಮಕೂರು ಠಾಣೆಗಳನ್ನು ಟಾರ್ಗೆಟ್ ಮಾಡಿ ಕಲ್ಲುತೂರಾಟ ನಡೆಸಲಾಗುತ್ತಿದೆ.

ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲು ಕ್ರಮ: ಕ್ರೈಸ್ತ ಮಿಷನರಿಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ
ಬಲವಂತದ ಮತಾಂತರದ ವಿರುದ್ಧ ಕಠಿಣ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಸೂಚನೆ ನೀಡಿದೆ ತಿಳಿದುಬಂದಿದೆ.

ಕೇವಲ ಅರ್ಧದಷ್ಟು ಶಾಲೆಗಳಲ್ಲಿ ಮಾತ್ರ ಆಫ್ ಲೈನ್ ಕಲಿಕೆ ಪ್ರಾರಂಭ: ಹೈಬ್ರಿಡ್ ಮೋಡ್ ನಲ್ಲಿವೆ ಶೇ.34 ರಷ್ಟು ಶಾಲೆಗಳು!
ಕೋವಿಡ್-19 ಸಾಂಕ್ರಾಮಿಕ ಶಾಲೆಗಳನ್ನು ಮುಚ್ಚುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿ 19 ತಿಂಗಳು ಕಳೆದಿವೆ. ಈಗ ಜಾಗತಿಕವಾಗಿ ಕೇವಲ ಅರ್ಧದಷ್ಟು ಶಾಲೆಗಳು ಮಾತ್ರ ಆಫ್ ಲೈನ್ ತರಗತಿಗಳನ್ನು ನಡೆಸುತ್ತಿವೆ.

ಶಿಥಿಲಗೊಂಡ ಕಟ್ಟಡಗಳ ಕುರಿತು 30 ದಿನಗಳಲ್ಲಿ ವರದಿ ನೀಡಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಇರುವ ಶಿಥಿಲ ಕಟ್ಟಡಗಳ ಕುರಿತು ವಿಶೇಷ ಸಮೀಕ್ಷೆ ನಡೆಸಿ 30 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೂಚನೆ ನೀಡಿದ್ದಾರೆ.

ರಾಜ್ಯದ 20 ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು!
ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಕೋವಿಡ್-19 ಪ್ರಕರಣದ ಸಾವಿನ ದರವನ್ನು (ಸಿಎಫ್‌ಆರ್) ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆದಾಗ್ಯೂ, ರಾಜ್ಯ ಕೋವಿಡ್ -19 ವಾರ್ ರೂಮ್ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್ -19 ಮರಣ ಪ್ರಮಾಣ ಶೇಕಡಾ 1ಕ್ಕಿಂತ ಹೆಚ್ಚಿದೆ.

ಕಸ ಗುಡಿಸುವ ಯಾಂತ್ರಿಕ ಯಂತ್ರಗಳ ಕಾರ್ಯವೈಖರಿ ಬಗ್ಗೆ ವರದಿ ನೀಡಿ: ಗೌರವ್ ಗುಪ್ತಾ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 26 ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಕಾರ್ಯವೈಖರಿಯ ಕುರಿತು ತಾಂತ್ರಿಕ ಪರಿಣಿತಿ ಹೊಂದಿರುವವರಿಂದ ಪರಿಶೀಲನೆ ನಡೆಸಿ ನಿಖರ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದ್ದಾರೆ.

3 ಹಸುಳೆ ಸೇರಿ 19 ಮಂದಿ ಬಲಿ ಪಡೆದಿದ್ದ ವಿಮಾನ ಅಪಘಾತಕ್ಕೆ ಮಬ್ಬು, ವಿಂಡ್ ಶೀಲ್ಡ್ ವೈಪರ್ ಕಾರಣ
ಕಳೆದ ವರ್ಷ ಆಗಸ್ಟ್ 7 ರಂದು ದುಬೈಯಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು.

ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್-19 ಮೂರನೇ ಅಲೆ: ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆ ಎದುರಾಗಬಹುದು ಎಂದು ಕೋವಿಡ್-19 ತಡೆಗೆ ಕ್ರಮ ಕೈಗೊಳ್ಳಲು ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ ಇದೆ.

