Relief package

ಅತಿವೃಷ್ಟಿಯಿಂದ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ; 1,033 ಕೋಟಿ ರೂ ಪರಿಹಾರ ಪ್ಯಾಕೇಜ್: ಸಿಎಂ ಸಿದ್ದರಾಮಯ್ಯ ಘೋಷಣೆ
ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅವರು ಇಲ್ಲಿಗೆ ಕೇಂದ್ರ ತಂಡವನ್ನು ಕಳಿಸಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ನೀಡುತ್ತಾರೆ ಎಂಬ ಭರವಸೆ ನಮಗಿದೆ. 17 ಲಕ್ಷ ಹೆಕ್ಟೇರ್‌ಗೆ ಆರ್ಥಿಕ ನೆರವು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಪ್ರಕಟಿಸಿದರು.

ಪ್ರವಾಹ ಪೀಡಿತರಿಗೆ ಸಿಎಂ ಬೊಮ್ಮಾಯಿ ನೆರವು: ಹೆದ್ದಾರಿ ದುರಸ್ತಿಗೆ ರೂ.200 ಕೋಟಿ ಘೋಷಣೆ
ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಗುರುವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಭೇಟಿ ನೀಡಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಅತಿವೃಷ್ಟಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಮುಖ್ಯಮಂತ್ರಿಗಳು ರೂ.200 ಕೋಟಿ ನೆರವು ಘೋಷಿಸಿದರು.

ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ; ಎನ್ ಡಿಎಂ ಕಾಯ್ದೆ ಪ್ರಕಾರ ಪರಿಹಾರ ನೀಡಲಿ: ಕಾಂಗ್ರೆಸ್
ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂತ್ರಸ್ತರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ.

ಸರ್ಕಾರದ ಆರ್ಥಿಕ ಪ್ಯಾಕೇಜ್'ನ್ನು 'ಬೋಗಸ್' ಎಂದ ಕಾಂಗ್ರೆಸ್ ನಾಯಕರು
ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕೋವಿಡ್-19 ಆರ್ಥಿಕ ಪ್ಯಾಕೇಜ್'ನ್ನು ರಾಜ್ಯ ಕಾಂಗ್ರೆಸ್ ನಾಯಕರು ಕಣ್ಣೊರೆಸುವ ಪ್ಯಾಕೇಜ್ ಎಂದು ಟೀಕಿಸಿದ್ದಾರೆ.

ಕರ್ನಾಟಕ ಸೇರಿದಂತೆ 22 ರಾಜ್ಯಗಳಿಗೆ ಕೇಂದ್ರದಿಂದ 2ನೇ ಹಂತದ ಕೊರೋನಾ ಪರಿಹಾರ ಪ್ಯಾಕೇಜ್ ಬಿಡುಗಡೆ
ಕರ್ನಾಟಕ ಸೇರಿದಂತೆ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 890. 32 ಕೋಟಿ ರೂ. ಮೊತ್ತದ ಎರಡನೇ ಹಂತದ ಕೋವಿಡ್-19 ತುರ್ತು ಪರಿಹಾರದ ಪ್ಯಾಕೇಜ್ ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

20 ಲಕ್ಷ ಕೋಟಿಯಲ್ಲಿರುವ 13 ಸೊನ್ನೆಗಳಲ್ಲಿ ಯಾರಿಗೆ ಯಾವ ‘ಸೊನ್ನೆ’?: ಮೋದಿ ಪ್ಯಾಕೇಜ್ ಟೀಕಿಸಿದ ಸಿದ್ದರಾಮಯ್ಯ
ಅಪ್ಪಟ ಸುಳ್ಳು, ಅತಿರಂಜಿತ ವಿಷಯಗಳನ್ನೇ ಮುಂದಿಟ್ಟುಕೊಂಡು ಜನರನ್ನು ವಂಚಿಸುವ ಆಡಳಿತದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೊರೋನ ಪರಿಹಾರ ಪ್ಯಾಕೇಜ್ ನಮ್ಮ ಮುಂದಿದೆ. ಹೀಗಾಗಿ 20 ಲಕ್ಷ ಕೋಟಿಯಲ್ಲಿರುವ 13 ಸೊನ್ನೆಗಳಲ್ಲಿ ಯಾರಿಗೆ ಯಾವ ‘ಸೊನ್ನೆ’ ಸಿಗಲಿದೆ ಎನ್ನುವುದು ಈಗ ಮೂಡಿರುವ ಪ್ರಶ್ನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮ

ಮೆಕ್ಕೆಜೋಳ ಬೆಳೆದ ರೈತರಿಗೆ 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ
ಪ್ರಾಕೃತಿಕ ವಿಕೋಪಗಳಲ್ಲಿ ಮೃತಪಟ್ಟ ಕುರಿ, ಮೇಕೆ, ಜಾನುವಾರುಗಳಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ಮುಂದುವರೆಸಲಾಗುವುದು. ಮೆಕ್ಕೆಜೋಳ ಬೆಳೆದ ರಾಜ್ಯದ 10 ಲಕ್ಷ ರೈತರಿಗೆ ತಲಾ ಐದು ಸಾವಿರ ರೂಪಾಯಿಯಂತೆ ಪರಿಹಾರ ನೀಡಲಾಗುವುದು. ಈ ಯೋಜನೆಗೆ 500 ಕೋಟಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಲಾಕ್ ಡೌನ್: ಸಂಕಷ್ಟದಲ್ಲಿರುವವರಿಗೆ ಹೆಚ್ಚುವರಿಯಾಗಿ 162 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ ರಾಜ್ಯ ಸರ್ಕಾರ
ಕಳೆದ ಒಂದು ವಾರದ ಹಿಂದಷ್ಟೇ ಲಾಕ್ ಡೌನ್ ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ 1, 610 ಕೋಟಿ ರೂ. ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಇದೀಗ ಹೆಚ್ಚುವರಿಯಾಗಿ 162 ಕೋಟಿ ರೂ. ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೋವಿಡ್-19 ರಿಲೀಫ್ ಪ್ಯಾಕೇಜ್: ಸಣ್ಣ ರೈತರಿಗೆ ಘೋಷಿಸಿರುವ ಆರ್ಥಿಕ ನೆರವು ಕೃಷಿಕರ ಮನಗೆದ್ದಿದೆಯೇ?
ಆತ್ಮ ನಿರ್ಭರ ಭಾರತ ಅಭಿಯಾನದ ಪರಿಹಾರ ಕ್ರಮಗಳ ಎರಡನೇ ಭಾಗವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ವಲಯಕ್ಕೆ ಒಂದಷ್ಟು ಆರ್ಥಿಕ ನೆರವನ್ನು ಘೋಷಿಸಿದ್ದರು.

