RBI

ಡಿಜಿಟಲ್ ಇಂಡಿಯಾಕ್ಕೆ ಒತ್ತು: ಡಿ.16ರಿಂದ ದಿನದ 24 ಗಂಟೆಯೂ ನೆಫ್ಟ್ ಹಣ ವರ್ಗಾವಣೆ ಸೇವೆ ಲಭ್ಯ
ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್(ನೆಫ್ಟ್) ಸೇವೆ ಇನ್ನು ಮುಂದೆ ಗ್ರಾಹಕರಿಗೆ ದಿನಪೂರ್ತಿ ದೊರಕಲಿದೆ. ಡಿಸೆಂಬರ್ 16ರಿಂದ ಈ ಸೇವೆ ಚಾಲ್ತಿಗೆ ಬರಲಿದೆ.

ಜಿಡಿಪಿ ದರ ಶೇ.5ಕ್ಕೆ ಕಡಿತ, ನೀತಿ ದರದಲ್ಲಿ ವ್ಯತ್ಯಾಸವಿಲ್ಲ: ಆರ್ ಬಿಐ
ಪ್ರಮುಖ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 5.15ರಷ್ಟು ಮುಂದುವರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕತೆಯನ್ನು ಬೆಂಬಲಿಸುವ ತನ್ನ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ.

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! 2020ರಿಂದ NEFT ವಹಿವಾಟು ಶುಲ್ಕಕ್ಕೆ ಬ್ರೇಕ್
ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! ನೀವು ಎನ್.ಎ.ಎಫ್.ಟಿ. (NEFT ) ವಹಿವಾಟು ನಡೆಸುವುರಾದರೆ ಜನವರಿ 2020 ರಿಂದ, ಯಾವುದೇ ಶುಲ್ಕಗಳಿರುವುದಿಲ್ಲ. ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಗುರಿಯೊಡನೆ ಸರ್ಕಾರ ಈ ವಿನೂತನ ಉಪಕ್ರಮಕ್ಕೆ ಮುಂದಾಗಿದೆ.

ಪಿಎಂಸಿ ಬ್ಯಾಂಕ್ ವಿತ್ ಡ್ರಾ ಮಿತಿ 50 ಸಾವಿರಕ್ಕೆ ಹೆಚ್ಚಿಸಿದ ಆರ್ ಬಿಐ
ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ್ದು, ಇದರಿಂದ ಶೇ.78 ರಷ್ಟು ಗ್ರಾಹಕರ ತಮ್ಮ ಖಾತೆಯಿಂದ ಸಂಪುರ್ಣ ಹಣ ಹಿಂಪಡೆಯಬಹುದಾಗಿದೆ.

ಹೃದಯ ಶಸ್ತ್ರಚಿಕಿತ್ಸೆಗೆ ಹಣದ ಕೊರತೆ, ಮತ್ತೋರ್ವ ಪಿಎಂಸಿ ಬ್ಯಾಂಕ್ ಠೇವಣಿದಾರನ ಸಾವು
ಭಾರತೀಯ ರಿಸರ್ವ್ ಬ್ಯಾಂಕ್ ನ ಕೆಂಗಣ್ಣಿಗೆ ಗುರಿಯಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ ಬ್ಯಾಂಕ್) ಹಗರಣದ ತನಿಖೆ ಜಾರಿಯಲ್ಲಿರುವಂತೆಯೇ ಇಲ್ಲಿ ಠೇವಣಿ ಇಟ್ಟಿದ್ದ ಮತ್ತೋರ್ವ ಖಾತೆದಾರ ಸಾವನ್ನಪ್ಪಿದ್ದಾನೆ.

ಹಣ ಸೃಷ್ಟಿಸಲು ಕೂಡ ಹಣ ಬೇಕು! ಇದಕ್ಕಾಗುವ ಖರ್ಚೆಷ್ಟು?
ದಿನ ನಿತ್ಯ ನಾವೆಲ್ಲಾ ನಗದನ್ನ ವ್ಯವಹಾರಕ್ಕೆ ಬಳಸುತ್ತೇವೆ. ಡಿಜಿಟಲೈಸಷನ್ ಆಗಬೇಕು ಎಲ್ಲವೂ, ಎಲ್ಲರೂ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಗೆ ಒಗ್ಗಿಕೊಳ್ಳಬೇಕು ಎನ್ನುವ ಕೂಗು ಎಷ್ಟೇ ಪ್ರಬಲವಾಗಿದ್ದರೂ ಭಾರತದ ಮಟ್ಟಿಗೆ ಇಂದಿಗೂ 'ನಗದು' ಅಥವಾ 'ಕ್ಯಾಶ್' ರಾಜ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಪಿಎಂಸಿ ಬ್ಯಾಂಕ್ ಹಗರಣ; ಠೇವಣಿ ಇಟ್ಟಿದ್ದ ಮಹಿಳಾ ವೈದ್ಯೆ ಆತ್ಮಹತ್ಯೆ, ಸಾವಿನ ಸಂಖ್ಯೆ 3ಕ್ಕೆ ಏರಿಕೆ
ಮಹಾರಾಷ್ಟ್ರ-ಪಂಜಾಬ್ ಸಹಕಾರ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ. ತೀವ್ರ ಬಿಕ್ಕಟ್ಟಿಗೆ ಒಳಗಾಗಿರುವ ಪಿಎಂಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಮುಂಬೈ ಮೂಲದ ಮಹಿಳಾ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೇಶದಲ್ಲಿ 2000 ರೂ. ನೋಟುಗಳ ಮುದ್ರಣ ಸ್ಥಗಿತ- ಆರ್‌ಬಿಐ
ದೇಶಿಯ ಕರೆನ್ಸಿಯಲ್ಲಿ ಹೆಚ್ಚಿನ ಮೌಲ್ಯಹೊಂದಿರುವ 2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಮೇಲಿನ ನಿರ್ಬಂಧ ಸಡಲಿಸಿದ ಆರ್.ಬಿ.ಐ
ಅಕ್ರಮ ಹಣಕಾಸು ವಹಿವಾಟು ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿ. (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪ ಪ್ರಮಾಣದಲ್ಲಿ ನಿರ್ಬಂಧ ಸಡಲಿಸಿದೆ.

