Ravi Basrur

ಶಿವಣ್ಣನ ಕಣ್ಣುಗಳಲ್ಲಿ ಅತ್ಯದ್ಭುತ ವಿಸ್ಮಯ: 'ಭೈರತಿ ರಣಗಲ್' ಸಂಗೀತ ನಿರ್ದೇಶಕ ರವಿ ಬಸ್ರೂರು
ಶಿವರಾಜಕುಮಾರ್ ಅಭಿನಯದ ಮತ್ತು ನರ್ತನ್ ನಿರ್ದೇಶನದ ಬಹು ನಿರೀಕ್ಷಿತ ಭೈರತಿ ರಣಗಲ್ ಚಿತ್ರದ ರೀ- ರೆಕಾರ್ಡಿಂಗ್ ಪ್ರಕ್ರಿಯೆಯಲ್ಲಿ ರವಿ ನಿರತರಾಗಿದ್ದಾರೆ.

'ಕ್ಲಿಕ್' ಚಿತ್ರದ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಪವನ್ ನಾಯಕನಾಗಿ ಪದಾರ್ಪಣೆ
ಶಶಿಕುಮಾರ್ ನಿರ್ದೇಶನದ 'ಕ್ಲಿಕ್' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮಗ ಮಾಸ್ಟರ್ ಪವನ್ ಬಸ್ರೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಶಶಿಕಿರಣ್ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿದ್ದಾರೆ.

ಪ್ರಭಾಸ್ ಅಭಿನಯದ 'ಸಲಾರ್' ರೀ-ರೆಕಾರ್ಡಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್-ರವಿ ಬಸ್ರೂರ್ ಬ್ಯುಸಿ
'ಸಲಾರ್- ಸೀಸ್ ಫೈರ್' ಎಂಬ ಶೀರ್ಷಿಕೆಯ ಚಿತ್ರದ ಮೊದಲ ಭಾಗದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರಶಾಂತ್ ನೀಲ್ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಸದ್ಯ ಕುಂದಾಪುರದ ಬಸ್ರೂರು ಗ್ರಾಮದ ಲ್ಯಾಟರ್ಸ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

'ಕ್ಲಿಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ರವಿ ಬಸ್ರೂರು ಪುತ್ರ 'ಪವನ್' ಎಂಟ್ರಿ!
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಪುತ್ರ ಪವನ್ ಬಸ್ರೂರ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ರವಿ ಬಸ್ರೂರ್ ನಿರ್ದೇಶನದ 'ಕಡಲ್' ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಸೀಮಿತ!
ಇದೊಂದು ತಂದೆ-ಮಗನ ನಡುವಿನ ಭಾವನಾತ್ಮಕ ಕಥೆಯುಳ್ಳ ಸಿನಿಮಾವಾಗಿದ್ದು ಮೇ 19 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಕಡಲ್ ಸಿನಿಮಾ ಕೇವಲ ಖಾಸಗಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ

ಧ್ರುವ ಸರ್ಜಾಗೆ ಜೊತೆಯಾದ ಕೆಜಿಎಫ್ ಕಲಿ: ಮಾರ್ಟಿನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ
ಧ್ರುವ ಸರ್ಜಾ ಅವರ ಮುಂಬರುವ ಬಹುಭಾಷಾ ಆಕ್ಷನ್ ಎಂಟರ್ಟೈನರ್ ಮಾರ್ಟಿನ್ ನ ಟಾಕಿ ಭಾಗಗಳು ಪೂರ್ಣಗೊಂಡಿವೆ. ನಿರ್ದೇಶಕ ಎಪಿ ಅರ್ಜುನ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ, ಹಿನ್ನೆಲೆ ಸಂಗೀತ ಮತ್ತು ಧ್ವನಿ ವಿನ್ಯಾಸವನ್ನು ನೋಡಿಕೊಳ್ಳಲು ತಯಾರಕರು ರವಿ ಬಸ್ರೂರ್ ಅವರನ್ನು ಸಂಪರ್ಕಿಸಿದ್ದಾರೆ.

ಭೋರ್ಗರೆವ ಘರ್ಜನೆ ನಡುವೆ ಮಾನವೀಯ ಎಳೆಗಳ ಸಿಂಚನ, ಫಾರ್ಮುಲಾಗಳ ಅನುರಣನ: ಮದಗಜ ಚಿತ್ರ ವಿಮರ್ಶೆ
ಸ್ಯಾಂಡಲ್ ವುಡ್ ನಲ್ಲಿ ಉಗ್ರಂ, ಕೆ.ಜಿ.ಎಫ್ ಸಿನಿಮಾಗಳ ಮೂಲಕ ತಮ್ಮದೇ genre ಅನ್ನು ಹುಟ್ಟು ಹಾಕಿದವರು ನಿರ್ದೇಶಕ ಪ್ರಶಾಂತ್ ನೀಲ್. 'ಮದಗಜ' ನಿರ್ದೇಶಕ ಎಸ್. ಮಹೇಶ್ ಕುಮಾರ್ ಅದೇ ಹಾದಿಯಲ್ಲಿ ಸಾಗಿದ್ದಾರೆ. ಮುರಳಿ ನಟನೆಯ ಈ ಸಿನಿಮಾ ಅವರ ಫ್ಯಾನ್ಸ್ ಗೆ ಮಾತ್ರವಲ್ಲದೆ ಮನೆಮಂದಿಗೆ ಇಷ್ಟವಾಗಲು ಹಲವು ಕಾರಣಗಳಿವೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಗೆ ಬಾಲಿವುಡ್ ನಲ್ಲಿ ಡಿಮ್ಯಾಂಡ್: ಸಲ್ಮಾನ್ ಖಾನ್ ಸಿನಿಮಾಗೆ ಸಂಗೀತ ನಿರ್ದೇಶನ
ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಕೆಜಿಎಫ್ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಕೆಜಿಎಫ್ ಸಕ್ಸಸ್ ಬಳಿಕ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಚಿತ್ರಗಳಲ್ಲಿ ರವಿ ಬಸ್ರೂರ್; ಯುಧ್ರಾ ಬೆನ್ನಲ್ಲೇ ಇದೀಗ 'ಗರುಡ್'!
ಕೆಜಿಎಫ್ ಚಿತ್ರದ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇದೀಗ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯುಧ್ರಾ ಬಳಿಕ ಇದೀಗ 'ಗರುಡ್' ಚಿತ್ರಕ್ಕೂ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

