Ranji Trophy

ರಣಜಿ ಟ್ರೋಫಿ: ಕ್ವಾರ್ಟರ್ ಫೈನಲ್ಸ್ ನಲ್ಲಿ ರಾಜ್ಯಕ್ಕೆ ಜಮ್ಮು ಕಾಶ್ಮೀರ ಎದುರಾಳಿ
ರಣಜಿ ಟೂರ್ನಿ ಕ್ರಿಕೆಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕರ್ನಾಟಕ ತಂಡ, ಮಹತ್ವದ ಪಂದ್ಯದಲ್ಲಿ ಬರೋಡಾ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಸ್ ಹಂತ ಪ್ರವೇಶಿಸಿದೆ. ಎಂಟರ ಘಟ್ಟದ ಹೋರಾಟದಲ್ಲಿ ರಾಜ್ಯ ತಂಡ ಜಮ್ಮು ಕಾಶ್ಮೀರ್ ವಿರುದ್ಧ ಕಾದಾಟ ನಡೆಸಲಿದೆ.

ರಣಜಿ ಟ್ರೋಫಿ: ಬರೋಡ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ
ಪ್ರಸಿದ್ಧ ಕೃಷ್ಣ(45ಕ್ಕೆ 4) ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ (ಅಜೇಯ 71 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ, ಪಂದ್ಯ ಡ್ರಾನಲ್ಲಿ ಅಂತ್ಯ
ಶಿವಮೊಗ್ಗದ ಜವಾಹರ್ ಲಾಲ್ ನೆಹರು ಎಂಜಿನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಿನ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು.

ರಣಜಿ ಟ್ರೋಫಿ: 12 ಸಾವಿರ ರನ್ ಪೇರಿಸಿದ ಮೊದಲ ಆಟಗಾರ ವಸೀಮ್ ಜಾಫರ್
ರಣಜಿ ಕ್ರಿಕೆಟ್ ನಲ್ಲಿ ಹಿರಿಯ ಕ್ರಿಕೆಟಿಗ ವಾಸಿಂ ಜಾಫರ್ ದಾಖಲೆ ನಿರ್ಮಾಣ ಮಾಡಿದ್ದು, ಈ ಮಾದರಿಯ ಕ್ರಿಕೆಟ್ ನಲ್ಲಿ 12 ಸಾವಿರ ರನ್ ಪೇರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ರವಿ ಯಾದವ್
ಮಧ್ಯ ಪ್ರದೇಶ ಮಧ್ಯಮ ಕ್ರಮಾಂಕದ ಬೌಲರ್ ರವಿ ಯಾದವ್ ಚೊಚ್ಚಲ ಪ್ರಥಮ ದರ್ಜೆ ಪಂದ್ಯದ ಮೊದಲ ಓವರ್‌ನಲ್ಲಿಯೇ ಹಾಟ್ರಿಕ್ ವಿಕೆಟ್ ಪಡೆದು ನೂತನ ದಾಖಲೆ ಮಾಡಿದ್ದಾರೆ.

ಸಮರ್ಥ್, ಪಡಿಕ್ಕಲ್ ಅರ್ಧಶತಕ, ಸೌರಾಷ್ಟ್ರ-ಕರ್ನಾಟಕ ಪಂದ್ಯ ಡ್ರಾದಲ್ಲಿ ಅಂತ್ಯ
ರವಿಕುಮಾರ್ ಸಮರ್ಥ್ (74 ರನ್) ಹಾಗೂ ದೇವದತ್ ಪಡಿಕ್ಕಲ್ (ಔಟಾಗದೆ 53 ರನ್) ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಪಂದ್ಯವನ್ನು ಸೌರಾಷ್ಟ್ರ ವಿರುದ್ಧ ಡ್ರಾ ಸಾಧಿಸಿತು. ಪ್ರಥಮ ಇನಿಂಗ್ಸ್ ಮುನ್ನಡೆಯೊಂದಿಗೆ ಉನದ್ಕತ್ ಬಳಗ ಮೂರು ಅಂಕಗಳನ್ನು ತನ್ನ ಕಿಸೆಗೆ ಹಾಕಿಕೊಂಡಿತು. ಕನ್ನಡಿಗರಿಗೆ ಕೇವಲ ಒಂದು ಅಂಕ ಒಲ

ಹಸಿದ ಮಗುವಿನ ಜೊತೆ ಮೈದಾನದಲ್ಲೇ ಆಹಾರ ಹಂಚಿ ತಿಂದ ಭಾರತದ ಆಟಗಾರ, ಫೋಟೋ ವೈರಲ್!
ಹಸಿವು ಇಡೀ ಜಗತ್ತನ್ನೇ ಕಿತ್ತು ತಿನ್ನುತ್ತಿದೆ. ಕೆಲವರು ಹೊಟ್ಟೆ ತುಂಬ ತಿಂದರೆ ಇನ್ನು ಕೆಲವರು ಅರ್ಧ ಹೊಟ್ಟೆ ತಿನ್ನುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಹಸಿವಿನಿಂದಲೇ ನೀರು ಕುಡಿದು ಮಲಗುತ್ತಿದ್ದಾರೆ. ಹಸಿದ ಬಾಲಕನ ಜೊತೆ ಭಾರತದ ಆಟಗಾರರೊಬ್ಬರು ಮೈದಾನದಲ್ಲೇ ಆಹಾರ ಹಂಚಿ ತಿಂದಿರುವ ಫೋಟೋ ಇದೀಗ ವೈರಲ್ ಆಗಿದೆ.

ರಣಜಿ ಟೂರ್ನಿಯಲ್ಲಿ 200ನೇ ಗೆಲುವು ದಾಖಲಿಸಿದ ಕರ್ನಾಟಕ
ರಣಜಿ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ. ಮಾಜಿ ಚಾಂಪಿಯನ್ ಮುಂಬೈ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಕರುಣ್ ನಾಯರ್ ಪಡೆ ಅಬ್ಬರಿಸಿದೆ.

ಅಂಪೈರ್ ಔಟ್ ನೀಡಿದರೂ ಕ್ರೀಸ್ ತೊರೆಯದ ಶುಭಮನ್ ಗಿಲ್!
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಪಂಜಾಬ್ ಆರಂಭಿಕ ಶುಭಮನ್ ಗಿಲ್ ಅಂಪೈರ್ ನೀಡಿದ ಔಟ್ ನಿರ್ಧಾರವನ್ನು ತಿರಸ್ಕರಿಸಿ ಮೈದಾನದಿಂದ ಹೊರ ನಡೆಯಲು ನಿರಾಕರಿಸಿದ್ದರಿಂದ ವಿವಾದ ಉಂಟಾಯಿತು

