RamRahim Verdict

ಪಂಚಕುಲ ಕೋರ್ಟ್ ಆವರಣ ಪ್ರಕ್ಷುಬ್ಧ: 45 ನಿಮಿಷದಲ್ಲಿ 56 ಹಿಂಸಾಚಾರ ಪ್ರಕರಣ
ದೇವಮಾನವ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣ ತೀರ್ಪು ಹೊರ ಬಿದ್ದ ಕೇವಲ 45 ನಿಮಿಷದಲ್ಲೇ ಸಿಬಿಐ ವಿಶೇಷ ಕೋರ್ಟ್ ಇರುವ ಪಂಚಕುಲ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, 56 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಹಿಂಸಾಚಾರಕ್ಕೆ ಪಂಚಕುಲದಲ್ಲಿ 10 ಬಲಿ; ಪಂಜಾಬ್, ಹರ್ಯಾಣದ ಹಲವೆಡೆ ಕರ್ಫ್ಯೂ ಜಾರಿ
ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಅವರ ಅನುಯಾಯಿಗಳು ಹಿಂಸಾಚಾರಕ್ಕಿಳಿದಿದ್ದು, ಪಂಚಕುಲದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರೋಹ್ಟಕ್ ಜೈಲು ತಲುಪಿದ ಬಾಬಾ ರಾಮ್ ರಹೀಮ್; ಭದ್ರತಾ ಮಾಹಿತಿ ಪಡೆದ ರಾಜ್ ನಾಥ್ ಸಿಂಗ್
ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ದೋಷಿಯಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಗುರ್ಮಿತ್ ಸಿಂಗ್ ಅವರನ್ನು ಬಿಗಿ ಭದ್ರತೆಯಲ್ಲಿ ರೋಹ್ಟಕ್ ನ ಸುನಾರಿಯಾ ಜೈಲಿಗೆ ಕರೆತರಲಾಗಿದೆ.

ರಾಮ್ ರಹೀಮ್ ಅತ್ಯಾಚಾರ ಪ್ರಕರಣ: ದೆಹಲಿ, ಉತ್ತರ ಪ್ರದೇಶಕ್ಕೂ ವ್ಯಾಪಿಸಿದ ಹಿಂಸಾಚಾರ
ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಹರ್ಯಾಣ ಮತ್ತು ಪಂಜಾಬ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ರಾಷ್ಟ್ರರಾಜಧಾನಿ ದೆಹಲಿ ಹಾಗೂ ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ.

ಹಿಂಸಾಚಾರ ನಷ್ಟಕ್ಕೆ ಬದಲಾಗಿ ಡೇರಾ ಸಚ್ಚಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ: ಹರ್ಯಾಣ ಹೈಕೋರ್ಟ್!
ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಹೊರ ಬಿದ್ದ ಬಳಿಕ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದು, ಪ್ರಕರಣ ಸಂಬಂಧ ಹರ್ಯಾಣ ಹೈಕೋರ್ಟ್ ಡೇರಾ ಸಚ್ಚಾ ಸೌಧ ಆಸ್ಚಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ.

ಹಿಂಸಾಚಾರ ನಿಯಂತ್ರಿಸಿ..ಇಲ್ಲ ಹುದ್ದೆಯಿಂದ ಕೆಳಗಿಳಿಯಿರಿ: ಸಿಎಂ ಖಟ್ಟರ್ ಗೆ ರಾಜನಾಥ್ ಸಿಂಗ್ ತರಾಟೆ
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಹಿಂಸಾಚಾರ ನಿಯಂತ್ರಿಸಿ ಇಲ್ಲ, ಹುದ್ದೆಯಿಂದ ಕೆಳಗಿಳಿಯಿರಿ ಎಂದು ಖಾರವಾಗಿ ಹೇಳಿದ್ದಾರೆ.

ರಾಮ್ ರಹೀಮ್ ಅತ್ಯಾಚಾರ ಪ್ರಕರಣದ ತೀರ್ಪು: ಹಿಂಸಾಚಾರದಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆ!
ಡೇರಾ ಸಚ್ಚಾ ಸೌಧ ಸಂಸ್ಥೆಯ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪಿನ ಸಂಬಂಧ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರದಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 200 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಮ್ ರಹೀಂ ಅತ್ಯಾಚಾರ ತೀರ್ಪು: ಪಂಚಕುಲ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 32ಕ್ಕೆ ಏರಿಕೆ!
ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಭುಗಿಲೆದ್ದಿದ್ದ ಹಿಂಸಾಚಾರ ಪ್ರಕರಣದಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಕೊಹ್ಲಿ, ವಿಜೇಂದರ್ ನನ್ನಿಂದಲೇ ಸಾಧನೆಯ ಶಿಖರವೇರಿರುವುದು: ಡೇರಾ ಮುಖ್ಯಸ್ಥ
ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲಾ ಸಿಬಿಐ...

