Ram Navami

ರಾಮನವಮಿಯಂದು ಕತ್ತಿ ಮತ್ತು ದೊಣ್ಣೆಗಳ ಸಾಂಪ್ರದಾಯಿಕ ಪ್ರದರ್ಶನ ವೇಳೆ 700ಕ್ಕೂ ಹೆಚ್ಚು ಮಂದಿಗೆ ಗಾಯ!
ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಕತ್ತಿ ಮತ್ತು ದೊಣ್ಣೆಗಳ ಪ್ರದರ್ಶನದ ವೇಳೆ ಸುಮಾರು 700 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ಹಿಂಸಾರೂಪಕ್ಕೆ ತಿರುಗಿದ ರಾಮ ನವಮಿ ಆಚರಣೆ; ಹೌರಾ ಜಿಲ್ಲೆಯಲ್ಲಿ ಕಲ್ಲು ತೂರಾಟ, ಹಲವರಿಗೆ ಗಾಯ
ರಾಮನವಮಿಯಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂಸಾಚಾರ ನಡೆದ ಕೇವಲ ಒಂದು ದಿನದ ನಂತರ ಹೌರಾದಲ್ಲಿ ಇಂದು ಶುಕ್ರವಾರ ಮತ್ತೊಂದು ಕಲ್ಲು ತೂರಾಟದ ಘಟನೆ ನಡೆದಿದೆ.

ಮಹಾರಾಷ್ಟ್ರ: ಸಂಭಾಜಿನಗರದ ಅಹೇರಿ ಗ್ರಾಮದಲ್ಲಿ ಹಿಂಸಾಚಾರಕ್ಕೆ ತಿರುಗಿನ ರಾಮನವಮಿ ಆಚರಣೆ; ಓರ್ವ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕಿರಾದ್‌ಪುರ ಪ್ರದೇಶದಲ್ಲಿ ಮೊನ್ನೆ ಬುಧವಾರ ಮತ್ತು ನಿನ್ನೆ ಗುರುವಾರ ಮಧ್ಯರಾತ್ರಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಹಿಂಸಾತ್ಮಕ ರೂಪಕ್ಕೆ ತಿರುಗಿದ ಘಟನೆ ನಡೆದಿದೆ. ಜಿಲ್ಲೆಯ ಅಹೇರಿ ಗ್ರಾಮದಲ್ಲಿ ಇಂದು ನಸುಕಿನ ಜಾವ ಎರಡು ಗುಂಪುಗಳು ಹಿಂಸಾತ್ಮಕ ಕಲ್ಲು ತೂರಾಟದಲ್ಲಿ ತೊಡಗಿದ್ದವು.

ಇಂದೋರ್: ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ ಪ್ರಕರಣ; ಮೃತರ ಸಂಖ್ಯೆ 35ಕ್ಕೆ ಏರಿಕೆ
ರಾಮನವಮಿ ಆಚರಿಸುತ್ತಿದ್ದ ವೇಳೆ ಇಂದೋರ್'ನ ದೇವಸ್ಥಾನವೊಂದರ ಮೆಟ್ಟಿಲು ಬಾವಿ ಕುಸಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಶ್ರೀ ರಾಮನ ಜೀವನ ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿ: ದೇಶದ ಜನತೆಗೆ ಪ್ರಧಾನಿ ಮೋದಿ ರಾಮನವಮಿ ಶುಭಾಶಯ
ಶ್ರೀ ರಾಮನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.

ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ರಾಜ್ಯದಾದ್ಯಂತ ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ, ಜನತೆಗೆ ಸಿಎಂ ಬೊಮ್ಮಾಯಿ ಶುಭಾಶಯ
ನಾಡಿನಾದ್ಯಂತ ಶ್ರೀ ರಾಮ ಹುಟ್ಟಿದ ದಿನವನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರಾಜ್ಯದಾದ್ಯಂತ ಎಲ್ಲಾ ಆಂಜನೇಯನ, ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ರಾಮನವಮಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಒಡಿಶಾದ ಕೊನಾರ್ಕ್ ದೇಗುಲದಂತೆ, ರಾಮನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿಸುವಂತೆ ರಾಮಮಂದಿರ ನಿರ್ಮಾಣ!
ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರ ನಡುವೆಯೇ ದೇಗುಲ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಬಯಲಾಗಿದ್ದು, ಒಡಿಶಾದ ಕೊನಾರ್ಕ್ ದೇಗುಲದಂತೆ, ರಾಮನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿಸುವಂತೆ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.

ರಾಮನವಮಿ: ದೇಶದ ಜನತೆಗೆ ಶುಭಾಶಯ ಕೋರಿ, ಕೊರೋನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಪ್ರಧಾನಿ ಮೋದಿ ಮನವಿ
ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮದಿನವಾದ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ.

ಶ್ರೀರಾಮ ನವಮಿ ಹಬ್ಬದ ಮಹತ್ವವೇನು? ಆಚರಣೆ ಹೇಗೆ ಮಾಡಬೇಕು?
ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ.

