Ram Mandir

ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ!
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರದ ಬಗ್ಗೆ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಜನರು ಕುತೂಹಲ ತೋರುತ್ತಿದ್ದಾರೆ. ಜನವರಿ 22 ರಂದು ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

ಇಲ್ಲಿನ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮನಸ್ಥಿತಿಯಿಂದ ಹೊರಬರಬೇಕು: ಬಿಜೆಪಿ ಮುಖಂಡ ಸಿಟಿ ರವಿ
ಘಜ್ನಿ, ಘೋರಿ ಮತ್ತು ಬಾಬರ್‌ನ ಮನಸ್ಥಿತಿ ಅಪಾಯಕಾರಿಯಾಗಿದ್ದು, 'ಇಲ್ಲಿನ ಮುಸ್ಲಿಮರು ಆ ಮನಸ್ಥಿತಿಯಿಂದ ಹೊರಬರಬೇಕು' ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಟಿ ರವಿ ಮಂಗಳವಾರ ಹೇಳಿದ್ದಾರೆ.

ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ: ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮಿಷಕ್ಕೊಂದು ಮಾತನಾಡುತ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ, ರಾಮ ಎರಡೂ ಇದೆ. ನೀವೇಕೆ ಬಿಜೆಪಿ ರಾಮಮಂದಿರ ಅಂತ ಅಂದುಕೊಳ್ಳುತ್ತೀರಾ? ರಾಮಮಂದಿರಕ್ಕೆ ಹೋಗಿ ನಿಮ್ಮ ಪಾಪ ತೊಳೆದುಕೊಂಡು ಬನ್ನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ವಿಗ್ರಹ ಪ್ರತಿಷ್ಠಾಪನೆಗೆ ನಿರ್ಧಾರ- ಟ್ರಸ್ಟ್ ಅಧಿಕೃತ ಘೋಷಣೆ
ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸೋಮವಾರ ಖಚಿತಪಡಿಸಿದೆ.

ಅಯೋಧ್ಯೆ: ನಾಳೆಯಿಂದ ಜ.22ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ!
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾನ ಸಮಾರಂಭ ಅಂಗವಾಗಿ ಹಳಿ ದ್ವಿಗುಣ ಹಾಗೂ ವಿದ್ಯುದ್ದೀಕರಣವನ್ನು ಆದ್ಯತೆ ಮೇಲೆ ಕೈಗೊಂಡಿರುವುದಾಗಿ ಜನವರಿ 16 ರಿಂದ 22ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಗೆ ಅಖಿಲೇಶ್ ಯಾದವ್‌ಗೆ ಆಹ್ವಾನ; ಜ. 22ರ ನಂತರ ಅಯೋಧ್ಯೆಗೆ ಭೇಟಿ ನೀಡಲು ನಿರ್ಧಾರ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಜನವರಿ 22 ರಂದು 'ಪ್ರಾಣ ಪ್ರತಿಷ್ಠಾಪನಾ' ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ರಾಮಮಂದಿರ ಟ್ರಸ್ಟ್‌ಗೆ ಶನಿವಾರ ಧನ್ಯವಾದ ತಿಳಿಸಿದ್ದಾರೆ. ಆದರೆ, ಕಾರ್ಯಕ್ರಮದ ನಂತರ ತಮ್ಮ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಚುನಾವಣೆಗಾಗಿ ರಾಮಮಂದಿರ ಉದ್ಘಾಟನೆ ಒಪ್ಪಲಾಗದು: ಸಚಿವ ಚಲುವರಾಯಸ್ವಾಮಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಓಲೈಸಲು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಬಳಸಿಕೊಳ್ಳತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಶುಕ್ರವಾರ ಹೇಳಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ: ಅಂಜನಾದ್ರಿಯಲ್ಲಿ ಬಿಗಿ ಭದ್ರತೆ
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಕೊಪ್ಪಳದ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರು: ಕಾಂಗ್ರೆಸ್ ನಾಯಕರ ನಿರ್ಧಾರ ಬೆಂಬಲಿಸುತ್ತೇನೆ- ಸಿಎಂ ಸಿದ್ದರಾಮಯ್ಯ
ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

