Ram Lalla

ಅಯೋಧ್ಯೆ ರಾಮಮಂದಿರದಲ್ಲಿ ದಿವ್ಯ ಕ್ಷಣ: ಬಾಲ ರಾಮನ ಹಣೆ ಬೆಳಗಿದ ಸೂರ್ಯ ತಿಲಕ..! Video
ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರ ಮನಸ್ಸಿನಲ್ಲಿ ದಿವ್ಯ ಅನುಭವವನ್ನು ಮೂಡಿಸಿತು.

ಶ್ರಾವಣ ಆಚರಣೆಗಾಗಿ ರಾಮಮಂದಿರಕ್ಕಾಗಿ 12 ಕೋಟಿ ವೆಚ್ಚದಲ್ಲಿ ಎರಡು ಶುದ್ಧ ಚಿನ್ನದ ಉಯ್ಯಾಲೆ ನಿರ್ಮಿಸುತ್ತಿರುವ ಚೆನ್ನೈನ ಕುಶಲಕರ್ಮಿಗಳು!
ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿ ಜೂಲನೋತ್ಸವದ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿ, ಜುಲೈ 29ರ ಶ್ರಾವಣ ಶುಕ್ಲ ತೃತೀಯದಿಂದ ಆಗಸ್ಟ್ 9ರ ಪೂರ್ಣಿಮೆಯವರೆಗೆ ರಾಮನಗರಿಯ ಸಾವಿರಾರು ದೇವಾಲಯಗಳಲ್ಲಿ ಜೂಲನೋತ್ಸವವನ್ನು ಕಾಣಬಹುದು.

ಶಿಲ್ಪಿ ಅರುಣ್ ಯೋಗಿರಾಜ್ ಗೆ ಅಮೇರಿಕ ವೀಸಾ ನಿರಾಕರಣೆ!
ನಿಬಂಧನೆಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅರುಣ್ ಯೋಗಿರಾಜ್ ಗೆ ವೀಸಾ ನಿರಾಕರಣೆ ಮಾಡಲಾಗಿದೆ.

ಅಯೋಧ್ಯೆ ಮಂದಿರ ಉದ್ಘಾಟನೆ ಬಳಿಕ ಮೊದಲ ಬಾರಿಗೆ ರಾಮಲಲ್ಲಾನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು!
ಅಯೋಧ್ಯೆ ಮಂದಿರ ಉದ್ಘಾಟನೆ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ರಾಮಲಲ್ಲಾನ ದರ್ಶನದ ನಂತರ ಸಂಜೆಯ ಆರತಿಯಲ್ಲಿಯೂ ಪಾಲ್ಗೊಂಡರು.

ಏಪ್ರಿಲ್ 17 ರಾಮ ನವಮಿ: ಅಯೋಧ್ಯೆಯಲ್ಲಿ 'ರಾಮ್ ಲಲ್ಲಾ' ಪ್ರತಿಷ್ಠಾಪನೆ ನಂತರ ಮೊದಲ ಉತ್ಸವ, ಸೂರ್ಯ ಅಭಿಷೇಕಕ್ಕೆ ಸಿದ್ಧತೆ
ಈ ಬಾರಿಯ ರಾಮ ನವಮಿ ಆಚರಣೆ ಅಯೋಧ್ಯೆ ರಾಮಮಂದಿರದಲ್ಲಿ ಜೋರಾಗಿದೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾನಲ್ಲಿ ನಾಳೆ ಏಪ್ರಿಲ್ 17ರಂದು 'ಸೂರ್ಯ ಅಭಿಷೇಕ'ಕ್ಕೆ ಸಿದ್ಧತೆ ನಡೆಯುತ್ತಿದೆ.

'ಮಿನುಗುವ' ರಾಮ್ ಲಲ್ಲಾ: ಕೋಟ್ಯಂತರ ರೂ. ಮೌಲ್ಯದ ಚಿನ್ನ-ರತ್ನಗಳ ಆಭರಣದಿಂದ ಅಲಂಕಾರ; ವಿವರ ಇಲ್ಲಿದೆ...
ಅಯೋಧ್ಯೆಯ ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ಮೊನ್ನೆ ಜನವರಿ 22ರಂದು ಸೋಮವಾರ ಶಂಕುಸ್ಥಾಪನೆಯ ನಂತರ ಕಾಣಿಸಿಕೊಂಡ ರಾಮಲಲ್ಲಾನ ಚಿತ್ರವು ತಲೆಯಿಂದ ಪಾದದವರೆಗೆ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ.

ಕನ್ನಡಿಗನ ಕೈಯಲ್ಲಿ ಅರಳಿದ ಅಯೋಧ್ಯೆಯ ಶ್ರೀರಾಮ: ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...
ವಿಶ್ವದ ಗಮನ ಸೆಳೆದಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮ ಮಂದಿರದಲ್ಲಿ ವೀರಾಜಮಾನನಾಗಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ: ಪ್ರಧಾನಿ ಮೋದಿ ಜೊತೆ ಇತರ 15 ಯಜಮಾನರು ಆಚರಣೆಯಲ್ಲಿ ಭಾಗಿ
ನಾಳೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಸಮಾರಂಭದ ‘ಮುಖ್ಯ ಯಜಮಾನ’ (ಪೂಜೆಯನ್ನು ಆಯೋಜಿಸುವವರು) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪೂಜಾ ಕೈಂಕರ್ಯದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಆಯ್ಕೆಯಾದ 15 ಯಜಮಾನರು ಅಂದರೆ ಆತಿಥೇಯರು ಭಾಗಿಯಾಗಲಿದ್ದಾರೆ.

ಸಾತ್ವಿಕ ಆಹಾರ, ಕಣ್ಣಿಗೆ ಗಾಯ... ಸವಾಲುಗಳನ್ನು ಎದುರಿಸಿ ರಾಮ್ ಲಲ್ಲಾ ವಿಗ್ರಹ ತಯಾರಿಸಿ ಯಶಸ್ವಿಯಾದ ಶಿಲ್ಪಿ ಅರುಣ್ ಯೋಗಿರಾಜ್!
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಇನ್ನು ಉಳಿದಿರುವುದು ಕೇವಲ ಎರಡು ದಿನ. ಅಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದು, ರಾಮಲಲ್ಲಾ ಮೂರ್ತಿಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಎಲ್ಲಿ ನೋಡಿದರೂ ಈಗ ಬಾಲ ರಾಮನ ವಿಗ್ರಹದ ಫೋಟೋ ಓಡಾಡುತ್ತಿದೆ.

