Rakesh Tikait
ರೈತ ನಾಯಕರಿಂದ ವಂಚನೆ: ಸ್ಪಷ್ಟೀಕರಣ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ, ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ!!
ಹೋರಾಟ ನಿಲ್ಲಿಸಲು ಹಣ ಕೇಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಮುಂದಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಲಾಗಿದೆ.

ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರೈತ ನಾಯಕ ರಾಕೇಶ್ ಟಿಕಾಯತ್
ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ರೈತ ನಾಯಕ ರಾಕೇಶ್ ಟಿಕಾಯತ್ ರನ್ನು ಉಗ್ರಗಾಮಿ ಎಂದು ಕರೆದ ಬಿಜೆಪಿ ನಾಯಕ
ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗುವ ಹಾಗೆ ರಾಕೇಶ್ ಟಿಕಾಯತ್ ಮಾಡಿದ್ದಾರೆ ಎಂದು ಹರಿನಾರಾಯಣ್ ಆರೋಪಿಸಿದ್ದಾರೆ.

ಎಂಎಸ್ ಪಿ ಕಾನೂನು ಜಾರಿಗೊಳಿಸಿ ಅಥವಾ ಗಣರಾಜ್ಯ ದಿನದಂದು ಮತ್ತೊಂದು ಪ್ರಬಲ ಪ್ರತಿಭಟನೆ ಎದುರಿಸಿ: ಟಿಕಾಯತ್
ರೈತರಿಗೆ ಎಂಎಸ್ ಪಿ ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ನಾಲ್ಕು ಲಕ್ಷ ಟ್ರಾಕ್ಟರ್ ಗಳನ್ನೊಳಗೊಂಡ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು ಎದುರಿಸಬೇಕು-ಟಿಕಾಯತ್

ಮುಂಬೈನಲ್ಲಿ ಬಿಕೆಯು ರ‍್ಯಾಲಿ: ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 700ಕ್ಕೂ ಹೆಚ್ಚು ರೈತರಿಗೆ ಗೌರವ ಸಮರ್ಪಣೆ
ಅಕ್ಟೋಬರ್ 3 ರಂದು ನಡೆದ ಲಖೀಂಪುರ ಖೇರಿ ಘಟನೆಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮವನ್ನು ತಂದು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ಸಹ ಯೋಜಿಸಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಕೃಷಿ ಕಾಯ್ದೆ ಒಂದೇ ಅಲ್ಲ, ನಮ್ಮ ಬೇಡಿಕೆ ಈಡೇರುವತನಕ ರೈತ ಪ್ರತಿಭಟನೆ ನಿಲ್ಲದು: ರಾಕೇಶ್ ಟಿಕಾಯತ್ ಗುಡುಗು
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದಾಗಿ ಘೋಷಿಸಿದ್ದರೂ, ಕನಿಷ್ಠ ಬೆಂಬಲ ಬೆಲೆ ಮೇಲಿನ ಕಾನೂನು ಖಾತರಿ ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ರೈತ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಪುನರುಚ್ಚರಿಸಿದ್ದಾರೆ.

ಸಂಸತ್ತಿನಲ್ಲಿ ಮಸೂದೆ ರದ್ದಾಗುವವರೆಗೂ ಪ್ರತಿಭಟನೆ ಮುಂದುವರೆಯಲಿದೆ: ರಾಕೇಶ್ ಟಿಕಾಯತ್
ಸಂಸತ್ತಿನಲ್ಲಿ 3 ಕೃಷಿ ಮಸೂದೆ ರದ್ದಾಗುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಶುಕ್ರವಾರ ಹೇಳಿದ್ದಾರೆ.

ಯುಪಿ ಆಸೆಂಬ್ಲಿ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿ ವಿರೋಧಿಸಲಿದೆ: ರಾಕೇಶ್ ಟಿಕಾಯತ್
ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾದ ಅರುಣ್ ನರವರ್ ಕುಟುಂಬವನ್ನು ಸೋಮವಾರ ಭೇಟಿಯಾದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಹಾಗೂ 40 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಮೃತಪಟ್ಟ 750 ರೈತರಿಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸಂತಾಪ ಸೂಚಿಸಬೇಕು: ರಾಕೇಶ್ ಟಿಕಾಯತ್
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 750 ರೈತರ ಮೃತಪಟ್ಟಿದ್ದಾರೆ.

