Rajya Sabha polls

ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ 19 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷಾಂತರಿ ಶಾಸಕರನ್ನು ಚಪ್ಪಲಿಯಿಂದ ಹೊಡೆಯಿರಿ: ಹಾರ್ದಿಕ್ ಪಟೇಲ್
ಪಕ್ಷಾಂತರ ಮಾಡಿದ ಶಾಸಕರನ್ನು ಸಾರ್ವಜನಿಕರು ಚಪ್ಪಲಿಗಳಿಂದ ಹೊಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನಲ್ಲಿ ಕೆಲ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಪಟೇಲ್ ಪ್ರತಿಕ್ರಯಿಸಿದ್ದಾರೆ.

ಜೆಡಿಎಸ್ ಬೆಂಬಲಿಸುವ ಬಗ್ಗೆ ಇನ್ನೂ ನಿರ್ಣಯವಾಗಿಲ್ಲ: ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿಸುವ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದು, ಜೆಡಿಎಸ್ ಅನ್ನು ಬೆಂಬಲಿಸುವ ಬಗ್ಗೆ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುಜರಾತ್ ಕಾಂಗ್ರೆಸ್ ಗೆ ಮತ್ತೆ ಆಘಾತ: ಇನ್ನೊಬ್ಬ ಶಾಸಕ ರಾಜೀನಾಮೆ
ಜೂನ್ 19ರ ರಾಜ್ಯಸಭೆ ಚುನಾವಣೆಗೆ ಮುನ್ನ ಗುಜರಾತ್ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಿದೆ. ಬುದವಾರವಷ್ಟೇ ಇಬ್ಬರು ಕೈ ಶಾಸಕರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಶಾಸಕ ಬ್ರಿಜೇಶ್ ಮೆರ್ಜಾ ಸಹ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಗುಜರಾತ್: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಇಬ್ಬರು ಕೈ ಶಾಸಕರ ರಾಜೀನಾಮೆ
ಜೂನ್ 19 ರ ರಾಜ್ಯಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗುಜರಾತ್ ಕಾಂಗ್ರೆಸ್ ನಲ್ಲಿ ಬೇಗುದಿ ಪ್ರಾರಂಬವಾಗಿದೆ. ಚುನಾವಣೆಗೆ ಮುನ್ನ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜ್ಯಸಭೆ ಚುನಾವಣೆ: ಸೋಲಿನ ಆತಂಕದಲ್ಲಿ ದೇವೇಗೌಡರು; ದೊಡ್ಡಗೌಡರ ನಡೆ ಇನ್ನೂ ನಿಗೂಢ!
ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣಾ ಅಖಾಡ ಪ್ರವೇಶಿಸುವ ಅಸಕ್ತಿ ಹೊಂದಿರುವ ಗೌಡರು, ಚುನಾವಣಾ ಕಣ ಪ್ರವೇಶಿಸುವುದನ್ನು ಇನ್ನೂ ಖಚಿತಪಡಿಸಿಲ್ಲ. ವಿಧಾನಪರಿಷತ್ತಿನ ಚುನಾವಣೆ ಹಾಗೂ ರಾಜ್ಯಸಭೆ ಚುನಾವಣೆ ಎರಡೂ ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿವೆ. ಕಾಂಗ್ರೆಸ್ ಬೆಂಬಲವಿಲ್ಲದೇ ರಾಜ್ಯಸಭೆ ಪ್ರವೇಶಿಸುವುದು ಸುಲಭ ಸಾಧ್ಯವಲ್ಲ.

ರಾಜ್ಯಸಭೆ ಚುನಾವಣೆ: ಕೊರೋನಾ ಭೀತಿಯ ನಡುವೆಯೂ ರಾಜಕೀಯ ಚಟುವಟಿಕೆಗಳಿಗೆ ರೆಕ್ಕೆಪುಕ್ಕ!
ಜೂನ್ 19 ರಂದು ರಾಜ್ಯದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ರಾಜೀವ್ ಗೌಡ ಬಿಕೆ ಹರಿಪ್ರಸಾದ್, ಪ್ರಭಾಕರ್ ಕೋರೆ, ಕುಪೇಂದ್ರ ರೆಡ್ಡಿ ಅವರ ಅಧಿಕಾರ ಅವಧಿ ಜೂನ್ 25ಕ್ಕೆ ಮುಗಿಯಲಿದೆ.

ಬಿಜೆಪಿ ಬೇಗುದಿ: ರಾಜ್ಯಸಭೆ ಟಿಕೆಟ್ ಗಾಗಿ 'ಕತ್ತಿ' ಕೊತ ಕೊತ; 'ಕೋರೆ' ಶಾಂತ!
ರಾಜ್ಯಸಭೆ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಲಾಬಿ ಮುಂದುವರಿದಿದೆ, ಹಾಲಿ ಸಂಸದ ಪ್ರಭಾಕರ ಕೋರೆ ಯಾವುದೇ ಲಾಬಿ ಮಾಡದೇ ಹೈಕಮಾಂಡ್ ಮೇಲೆ ಭಾರ ಹಾಕಿ ಶಾಂತವಾಗಿ ಕುಳಿತಿದ್ದಾರೆ.

ರಾಜ್ಯಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಪತ್ನಿ ಆಸ್ತಿ ಎಷ್ಟು ಗೊತ್ತಾ?
ಡಿಸೆಂಬರ್ 12ಕ್ಕೆ ನಡೆಯುವ ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

