Rajnath Singh

ಕಾಶ್ಮೀರಿ ನಾಗರೀಕರ ಸಾವು: 'ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ'; ಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿವಿಮಾತು
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ನಾಗರಿಕರ ಅನುಮಾನಾಸ್ಪದ ಸಾವುಗಳ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಗೆ ದೇಶವನ್ನು ಮಾತ್ರವಲ್ಲದೆ ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು ಎಂದು ಹೇಳಿದ್ದಾರೆ. ಇನ್ನಾದರೂ ಜಾಗೃತರಾಗಬೇಕು ಎಂದು ಹೇಳಿದ್ದಾರೆ.

ರಾಜನಾಥ್ ಸಿಂಗ್ ಸತ್ತವರನ್ನು ಮರಳಿ ತರಬಹುದೇ?: ಫಾರೂಕ್ ಅಬ್ದುಲ್ಲಾ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಬಗ್ಗೆ ತಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, ಸತ್ತವರನ್ನು ವಾಪಸ್ ಕರೆತರುಬಹುದೇ? ಎಂದು...

ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರ ಪತ್ತೆ ಮಾಡಿ ಹೆಡೆಮುರಿ ಕಟ್ಟುತ್ತೇವೆ: ಕೇಂದ್ರ ಸಚಿವ ರಾಜನಾಥ್ ಸಿಂಗ್
ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರು ಎಲ್ಲೆ ಅಡಗಿದ್ದರೂ ಅವರನ್ನು ಪತ್ತೆ ಮಾಡಿ ಹೆಡೆಮುರಿ ಕಟ್ಟುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸತ್ತಿನಲ್ಲಿ ವಿಪಕ್ಷಗಳ ಕೋಲಾಹಲ; ಎಚ್ಚರಿಕೆ ಅಗತ್ಯ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಹೇಳಿಕೆ ನೀಡಿದ್ದಾರೆ, ಅಲ್ಲದೇ ಎಲ್ಲರಿಗೂ ಪ್ರವೇಶ ಪಾಸ್‌ಗಳನ್ನು ನೀಡದಂತೆ ಎಲ್ಲಾ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

ಗಡಿಯಲ್ಲಿ ಸೇನಾ ಯೋಧರೊಂದಿಗೆ ರಾಜನಾಥ ಸಿಂಗ್ ದಸರಾ ಹಬ್ಬ ಆಚರಣೆ: ಶಸ್ತ್ರ ಪೂಜೆ ಮಾಡಿ ಸೈನಿಕರ ಶ್ಲಾಘನೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ದಸರಾದ ಸಾಂಪ್ರಾದಾಯಿಕ 'ಶಸ್ತ್ರ' ಪೂಜೆ ನೆರವೇರಿಸಿದರು. ಚೀನಾದ ಗಡಿಯ ಸಮೀಪವಿರುವ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಸೇನಾ ಯೋಧರೊಂದಿಗೆ ದಸರಾ ಆಚರಿಸಿದರು.

ಭಾರತೀಯ ವಾಯುಸೇನೆಗೆ ಮೊದಲ C-295 ವಿಮಾನ ಸೇರ್ಪಡೆ!
ಭಾರತೀಯ ವಾಯುಪಡೆಯ ಬಲ ದ್ವಿಗುಣಗೊಂಡಿದೆ. ಇಂದು C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು. ಘಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಿದರು.

ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಮೈತೇಯಿ ಸಮುದಾಯ; ಮಣಿಪುರದಿಂದ ಅಸ್ಸಾಂ ರೈಫಲ್ಸ್ ಹಿಂಪಡೆಯಲು ಒತ್ತಾಯ
ಇಂಫಾಲ್ ಕಣಿವೆ ಮೂಲದ ನಾಗರಿಕ ಸಮಾಜ ಸಂಘಟನೆಗಳ ಛತ್ರಿ ಸಂಸ್ಥೆಯಾದ COCOMIಯ ಪ್ರತಿನಿಧಿಗಳು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಅಸ್ಸಾಂ ರೈಫಲ್ಸ್ ಅನ್ನು ರಾಜ್ಯದಿಂದ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು ಮತ್ತು ಪಡೆ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಮೈಸೂರು ದಸರಾದಲ್ಲಿ ಏರ್ ಶೋ ನಡೆಸುವಂತೆ ರಾಜನಾಥ್ ಸಿಂಗ್‌ಗೆ ಸಿಎಂ ಸಿದ್ದರಾಮಯ್ಯ ಮನವಿ
ಮೈಸೂರು ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರ ಮನವಿ ಮಾಡಿದ್ದಾರೆ.

ಕಾರ್ಗಿಲ್ ವಿಜಯ ದಿನ: ಹುತಾತ್ಮ ಯೋಧರಿಗೆ ರಕ್ಷಣಾ ಸಚಿವರ ಗೌರವಾರ್ಪಣೆ, ತ್ಯಾಗ ಬಲಿದಾನದ ಒಂದು ಮೆಲುಕು
ನಮ್ಮ ದೇಶದ ಗಡಿ ಭಾಗದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯರಿಗಾಗಿ ಬಿಸಿಲು, ಚಳಿ ಹಾಗೂ ಮಳೆ ಎನ್ನದೇ ಸೈನಿಕರು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ. ಜುಲೈ 26, ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ.

