Rajinikanth

ರಜಿನಿಕಾಂತ್-ಶಿವರಾಜ್‌ಕುಮಾರ್-ಮೋಹನ್‌ಲಾಲ್ ಅಭಿನಯದ ಜೈಲರ್ ಸಿನಿಮಾ ಮೊದಲ ವಾರ ಗಳಿಸಿದ್ದೆಷ್ಟು?
ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅಭಿನಯದ ತಮಿಳು ಚಿತ್ರ ಜೈಲರ್, ಮೊದಲ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 375.40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರತಂಡ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.

ಜೈಲರ್: ಶಿವಣ್ಣನ ಅಭಿನಯಕ್ಕೆ ಮನಸೋತ ಪರಭಾಷಿಕರು! ಹೊಸ ಅಭಿಮಾನಿ ಬಳಗ ಉದಯ
ಗುರುವಾರ ಭರ್ಜರಿ ಓಪನಿಂಗ್ ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 'ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವಂತೆ ಕನ್ನಡದ ಸೆಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಅವರಿಗೆ ಹೊಸ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.

ಕರ್ನಾಟಕದಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಾಣಲಿದೆ ರಜಿನಿಕಾಂತ್-ಶಿವರಾಜ್‌ಕುಮಾರ್ ಅಭಿನಯದ ಜೈಲರ್!
ಕರ್ನಾಟಕದಾದ್ಯಂತ ಜಯಣ್ಣ ಫಿಲಂಸ್ ಜೈಲರ್ ಸಿನಿಮಾವನ್ನು ವಿತರಿಸಿದ್ದು, ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಬಹು ಭಾಷೆಗಳಲ್ಲಿ ಸರಿಸುಮಾರು 300 ಪರದೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 10ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಕಾದಾಡಲು 'ತೋತಾಪುರಿ 2' ಸಿದ್ಧ!
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಹೀಗಾಗಿ, ಆ ವಾರದಲ್ಲಿ ಯಾವುದೇ ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಆದರೆ, 'ತೋತಾಪುರಿ 2' ಸಿನಿಮಾ ಈ ಟ್ರೆಂಡ್ ಅನ್ನು ಮುರಿದು ಈಗ ಆಗಸ್ಟ್ 11ರಂದು ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

'ಸೂಪರ್ ಸ್ಟಾರ್’ ಟ್ಯಾಗ್ ಯಾವಾಗಲೂ ಸಮಸ್ಯೆಯೇ: ರಜನೀಕಾಂತ್ ಅಚ್ಚರಿ ಹೇಳಿಕೆ!
'ಸೂಪರ್ ಸ್ಟಾರ್' ರಜನಿಕಾಂತ್ ನಟಿಸಿರುವ, ಸನ್ ಪಿಕ್ಚರ್ಸ್ ನಿರ್ಮಾಣದ 'ಜೈಲರ್' ಚಿತ್ರದ ಆಡಿಯೋ ಲಾಂಚ್ ಅದ್ಧೂರಿಯಾಗಿ ಚೆನ್ನೈನಲ್ಲಿ ನಡೆದಿದೆ. ರಜನಿ ಸಿನಿಮಾಗಳ ಇವೆಂಟ್‌ನಲ್ಲಿ ಅವರ ಭಾಷಣವೇ ಹೈಲೈಟ್ ಆಗಿದೆ.

ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್!
ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೂಲಕ ಶಿವರಾಜಕುಮಾರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಈಮಧ್ಯೆ, ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಭಾಗವಾಗಿದ್ದ ಶಿವರಾಜ್‌ಕುಮಾರ್, ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ರಜಿನಿಕಾಂತ್- ಶಿವರಾಜ್‌ಕುಮಾರ್ ನಟನೆಯ 'ಜೈಲರ್' ಬಿಡುಗಡೆಗೆ ದಿನಾಂಕ ನಿಗದಿ
ಮೆಗಾಸ್ಟಾರ್ ರಜಿನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 'ಜೈಲರ್' ಆಗಸ್ಟ್ 10 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಮುಂಬೈ: ಉದ್ಧವ್ ಠಾಕ್ರೆ ಭೇಟಿಯಾದ ಸೂಪರ್ ಸ್ಟಾರ್ ರಜನಿಕಾಂತ್!
ಸೂಪರ್‌ಸ್ಟಾರ್ ರಜನಿಕಾಂತ್ ಶನಿವಾರ ಶಿವಸೇನೆ-ಯುಬಿಟಿ ನಾಯಕ ಉದ್ಧವ್ ಠಾಕ್ರೆ ಅವರನ್ನು ಮುಂಬೈಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.

ಒಪ್ಪಿಗೆಯಿಲ್ಲದೆ ಹೆಸರು, ಪೋಟೊ, ಧ್ವನಿ ಬಳಕೆ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟ ರಜನಿಕಾಂತ್
ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದು, ಅವರ ಒಪ್ಪಿಗೆಯನ್ನು ಪಡೆಯದೆ ನಟನ ಹೆಸರು, ಪೋಟೊ, ಧ್ವನಿ ಇತ್ಯಾದಿಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

