rajanath singh

ಮಮತಾ ಬ್ಯಾನರ್ಜಿ,ಪಿಣರಾಯ್, ಸ್ಟಾಲಿನ್ ಗೆ ರಾಜನಾಥ್ ಸಿಂಗ್ ಅಭಿನಂದನೆ
ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಕ್ರಮವಾಗಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಎಲ್ ಡಿಎಫ್ ಮುಖಂಡ ಪಿಣರಾಯ್ ವಿಜಯನ್ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಅಭಿನಂದಿಸಿದ್ದಾರೆ.

ಆತ್ಮ ಗೌರವಕ್ಕೆ ಧಕ್ಕೆಯಾದರೆ ಭಾರತ ಎಂದಿಗೂ ಸಹಿಸುವುದಿಲ್ಲ, ನಮ್ಮ ಭೂಮಿ ಬೇರೆಯವರ ಪಾಲಾಗಲು ಬಿಡುವುದಿಲ್ಲ: ರಾಜನಾಥ್ ಸಿಂಗ್
ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಯಶಸ್ಸು ಇದುವರೆಗೆ ಕಂಡಿಲ್ಲ. ಮುಂದಿನ ಹಂತದ ಮಿಲಿಟರಿ ಮಟ್ಟದ ಮಾತುಕತೆ ಯಾವ ಸಮಯದಲ್ಲಾದರೂ ನಡೆಯಬಹುದು. ಇದುವರೆಗೆ ಯಾವುದೇ ಮಾತುಕತೆ, ಸಂಧಾನ ಫಲಪ್ರದವಾಗಿಲ್ಲ.

ರೈತರು ಅನ್ನದಾತರು, ಸರ್ಕಾರ ಅವರಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ: ರಾಜನಾಥ್ ಸಿಂಗ್
ರೈತರು ನಮ್ಮ ಅನ್ನದಾತರು, ಈ ದೇಶದ ಆರ್ಥಿಕತೆಯ ಬೆನ್ನೆಲುಬು ಹೀಗಿರುವಾಗ ಯಾರೂ ಕೂಡ ಪ್ರತಿಭಟನಾ ನಿರತರ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಬಾರದು, ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರೈತರು ಮುಕ್ತ ಮನಸ್ಸಿನಿಂದ ನೂತನ ಕೃಷಿ ಕಾಯ್ದೆಯ ಪ್ರಯೋಗ ಮಾಡಿ ನೋಡಲಿ: ಹೆಚ್.ಡಿ. ಕುಮಾರಸ್ವಾಮಿ
ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು. ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್

ರೈತ ದಿನಾಚರಣೆಗೆ ಜನ ನಾಯಕರ ಶುಭಾಶಯ: ರೈತರು ಸಂಧಾನಕ್ಕೆ ಮಣಿಯುವ ಭರವಸೆಯಲ್ಲಿ ಸರ್ಕಾರ, ಪ್ರತಿಭಟನೆ 26ನೇ ದಿನಕ್ಕೆ
ರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರೈತಾಪಿ ವರ್ಗವನ್ನು ಸ್ಮರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದಾರೆ.

ಸ್ವದೇಶಿ ನಿರ್ಮಿತ 3 ಅತ್ಯಾಧುನಿಕ ಸಾಧನಗಳನ್ನು ಸೇನೆಯ ಮೂರು ಪಡೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಸ್ತಾಂತರ
ಮೂರು ಸ್ವದೇಶಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಸೇನೆ, ಭೂಸೇನೆ ಮತ್ತು ನೌಕಸೇನೆಗೆ ಹಸ್ತಾಂತರಿಸಿದರು.

ಭವಿಷ್ಯದಲ್ಲಿ ದೇಶಕ್ಕೆ ಭದ್ರತೆಯ ಸಮಸ್ಯೆ ಎದುರಾಗಲೂಬಹುದು: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಿಲಿಟರಿ ಸಾಹಿತ್ಯವನ್ನು ಸಾಮಾನ್ಯ ಜನತೆಯೊಂದಿಗೆ ಸಂಪರ್ಕಿಸುವ ಬಗ್ಗೆ ನನಗೆ ಅತೀವ ಆಸಕ್ತಿಯಿದೆ, ನಮ್ಮ ಮುಂದಿನ ಜನಾಂಗ ದೇಶದ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಗಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಬಹುದು ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲಡಾಕ್ ನಲ್ಲಿ ಅಪ್ರಚೋದಿತ ದಾಳಿ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿಕೊಡುತ್ತಿದೆ: ರಾಜನಾಥ್ ಸಿಂಗ್
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ.

ಬಿಹಾರ ಸರ್ಕಾರ ರಚನೆ, ಉಪ ಮುಖ್ಯಮಂತ್ರಿ ನೇಮಕ ಬಗ್ಗೆ ಇಂದು ತೀರ್ಮಾನ: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ
ಬಿಹಾರ ವಿಧಾನಸಭೆಗೆ ಆಯ್ಕೆಯಾಗಿರುವ ಎನ್ ಡಿಎಯ ಹೊಸ ಶಾಸಕರು ಪಾಟ್ನಾದಲ್ಲಿ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಜೆಡಿಯು, ಬಿಜೆಪಿ, ಹಿಂದೂಸ್ತಾನಿ ಅವಾಮ್ ಮೋರ್ಚ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ನೂತನ ಶಾಸಕರು ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇಂದಿನ ಸಭೆಯಲ್ಲ

